ಮೆಜೆಸ್ಟಿಕ್​​ನಲ್ಲಿ ಶೀಘ್ರವೇ ತಲೆ ಎತ್ತಲಿದೆ ಇಂಟಿಗ್ರೇಟೆಡ್ ಕಟ್ಟಡ…

ಮೆಜೆಸ್ಟಿಕ್​ ಪುನರ್​ ನಿರ್ಮಾಣಕ್ಕೆ ರೂಪಿಸಲಾಗಿದ್ದ ಯೋಜನೆಯನ್ನ ಕೆಎಸ್​ಆರ್​ಟಿಸಿ ಕೈ ಬಿಟ್ಟಿದೆ. ಇದ್ರ ಬದಲಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಇಂಟಿಗ್ರೇಟೆಡ್​​ ನಿಲ್ದಾಣ ನಿರ್ಮಾಣಕ್ಕೆ ಟೆಂಡರ್​ ಕರೆಯಲಾಗಿದೆ..ಮೆಜೆಸ್ಟಿಕ್​​ನ ಸುಮಾರು 20 ಎಕರೆ ಪ್ರದೇಶದಲ್ಲಿ 1,300 ಕೋಟಿ ರೂ. ವೆಚ್ಚದಲ್ಲಿ 36 ಮಹಡಿಗಳ ಹೊಸ ನಿಲ್ದಾಣಕ್ಕೆ 2011ರಲ್ಲಿ ಯೋಜನೆ ರೂಪಿಸಲಾಗಿತ್ತು. ಆದ್ರೀಗ 1,300 ಕೋಟಿ ವೆಚ್ಚ 2019ರ ವೇಳೆಗೆ ಶೇ.50ರಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಈ ಯೋಜನೆಯನ್ನ ಕೈಬಿಟ್ಟು ಇಂಟಿಗ್ರೇಟೆಡ್ ಬಸ್ ನಿಲ್ದಾಣ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ಇನ್ನು ಈ ಇಂಟಿಗ್ರೇಟೆಡ್​ ಕಟ್ಟಡದಲ್ಲಿ ಪ್ರಯಾಣಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಬಸ್​​ಗಳಿಗೆ ನಿಲ್ದಾಣ, ಅಂತಾರಾಜ್ಯ ಬಸ್ ಗಳಿಗೆ ಪ್ರತ್ಯೇಕ ನಿಲ್ದಾಣ, ಬಸ್ ಟರ್ಮಿನಲ್​ಗಳು, ಕ್ಯಾಂಟೀನ್, ರೆಸ್ಟ್ ರೂಂ ಹೀಗೆ ಹಲವಾರು ಸೌಲಭ್ಯಗಳನ್ನು ಒಳಗೊಳ್ಳಲಿದ್ದು, ನಮ್ಮ ಮೆಟ್ರೋ, ಕೆಎಸ್ಆರ್​ಟಿಸಿ, ಬಿಎಂಟಿಸಿ ಹಾಗೂ ರೈಲ್ವೆ ನಿಲ್ದಾಣಗಳ ನಡುವೆ ಸುಲಭವಾಗಿ ಪ್ರಯಾಣಿಕರಿಗೆ ಸಂಪರ್ಕ ಕಲ್ಪಿಸುವ ಯೋಚನೆಯಲ್ಲಿ ನಿಗಮವಿದೆ..ಇನ್ನು ಈ ನೂತನ ಇಂಟಿಗ್ರೇಟೆಡ್ ಬಸ್ ನಿಲ್ದಾಣವು ವಿಶ್ವ ದರ್ಜೆಯ ಬಸ್ ನಿಲ್ದಾಣವಾಗಲಿದ್ದು ಅತಿ ಹೆಚ್ಚು ಸಂಖ್ಯೆಯ ಪ್ರಯಾಣಿಕರಿಗೆ ನೆರವಾಗಲಿದೆ. ಜೊತೆಗೆ ಪ್ರಯಾಣಿಕರು ಮತ್ತು ಸರಕುಗಳ ಸುಗಮ ಸಾಗಾಟಕ್ಕೆ ಅನುಕೂಲವಾಗುವಂತೆ ಒಳಾಂಗಣವನ್ನು ರೂಪಿಸಲು ಟೆಂಡರ್ ಪ್ರಕ್ರಿಯೆಯಲ್ಲಿಯೇ ತಿಳಿಸಲಾಗಿದೆ..ಒಟ್ಟಾರೆ ಮೆಜೆಸ್ಟಿಕ್​ನಲ್ಲಿ ಇಂಟಿಗ್ರೇಟೆಡ್​​ ಬಸ್​ ನಿಲ್ದಾಣ ನಿರ್ಮಾಣಕ್ಕೆ ಪ್ಲಾನಿಂಗ್​ ನಡೆದಿದ್ದು, ಇದು ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ ಅನ್ನೋದು ಸಿಲಿಕಾನ್ ಜನರ ಆಶಯವಾಗಿದೆ.
======
ಮಂಜುನಾಥ್ ಹೊಸಹಳ್ಳಿ ಸುದ್ದಿಟಿವಿ ಬೆಂಗಳೂರು.

0

Leave a Reply

Your email address will not be published. Required fields are marked *