ಎ ಆರ್ ರೆಹಮಾನ್ ತಮಿಳು ಹಾಡು ಕೇಳಿ ಮಧ್ಯದಲ್ಲೇ ಸಂಗೀತ ಮೇಳ ತೊರೆದ ಪ್ರೇಕ್ಷಕರು

ಇಂಗ್ಲೆಂಡ್​​ನ ವೆಂಬ್ಲೆ ಕ್ರೀಡಾಂಗಣದಲ್ಲಿ ದಕ್ಷಿಣ ಭಾರತೀಯನಿಗೆ ಅವಮಾನ

ಸಂಗೀತ ಮೇಳದ ನಡುವೆಯೇ ಕಾರ್ಯಕ್ರಮ ಬಹಿಷ್ಕರಿಸಿದ ಹಿಂದಿ ಭಾಷಿಕರು 

ಕುಲ, ನೆಲದ ಗಡಿ ಮೀರಿದ ಸಂಗೀತಕ್ಕೂ ಭಾಷೆಯ ಬಣ್ಣ ಬಳಿದ ಹಿಂದಿಗರು

ಇಂಗ್ಲೆಂಡ್​​​​ನಲ್ಲಿ ನಡೆದ ಸಂಗೀತ ಮೇಳದಲ್ಲಿ ಸ್ವರ ಮಾಂತ್ರಿಕ ಎ ಆರ್ ರೆಹಮಾನ್ ಅವರಿಗೆ ಅವಮಾನವಾಗಿದೆ. ಹಿಂದಿ ಭಾಷಿಕರು ಹೆಚ್ಚಾಗಿ ನೆರೆದಿದ್ದ ಮೇಳದಲ್ಲಿ ಹೆಚ್ಚು ತಮಿಳು ಗೀತೆಗಳನ್ನು ಹಾಡಿದ ಆರೋಪದಡಿ, ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ಮೇಳವನ್ನು ಬಹಿಷ್ಕರಿಸಿದ ಘಟನೆ ನಡೆದಿದೆ.

ಜಗತ್ತನ್ನು ಸಂಗೀತ ಸಂಯೋಜಕನ ಹಾಡಿಗೆ, ತಾಳಕ್ಕೆ ಮರುಳಾಗದವರಿಲ್ಲ. ಎಂಥವರನ್ನು ಒಂದು ಕ್ಷಣ ಸೂಜಿಗಲ್ಲಿನಂತೆ ಆಕರ್ಷಿಸುವ ಸಂಗೀತ ಮೋಡಿಗಾರ ಎ. ಆರ್​. ರೆಹಮಾನ್​. ಆದ್ರೆ ರಾಗ ಮಾಂತ್ರಿಕನಿಗೆ ಇಂಗ್ಲೆಂಡ್​​ನಲ್ಲಿ ಅವಮಾನ ಮಾಡಲಾಗಿದೆ.

ಅಂತರಾಷ್ಟ್ರೀಯ ಖ್ಯಾತಿಯ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರಿಗೆ ಇಂಗ್ಲೆಂಡ್​​ನ ವೆಂಬ್ಲೆ ಫುಟ್​ಬಾಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಂಗೀತ ಮೇಳದಲ್ಲಿ ಅವಮಾನಿಸಲಾಗಿದೆ. ಕನ್ನಡದ ಮೂಲಕ ವೃತ್ತಿ ಜೀವನ ಆರಂಭಿಸಿದ ರೆಹಮಾನ್, ವಿಶ್ವ ಸಂಗೀತ ಕ್ಷೇತದಲ್ಲಿ ಬಹುದೊಡ್ಡ ಹೆಸರು ಗಳಿಸಿದ್ದಾರೆ.

ರೋಜಾ, ಬಾಂಬೆ, ದಿಲ್​​ಸೆ ಯಿಂದ ಸ್ಲಮ್ ಡಾಗ್ ಮಿಲಿಯನೇರ್​ವರೆಗೆ ಅವರ ಚಿತ್ರಗಳಲ್ಲಿ ಭಿನ್ನ ಪ್ರಯೋಗಗಳನ್ನು ಅವರು ನಡೆಸಿದ್ದಾರೆ. ಮೂಲತಃ ತಮಿಳಿಗರಾದ ಅವರು ಮೊದಲು ತಮಿಳು ಚಿತ್ರಗಳಿಗೆ ಸಂಗೀತ ಸಂಯೋಜಿಸಿ, ಅನಂತರ ಅದೇ ಸ್ವರವನ್ನು ಹಿಂದಿಗೆ ಅಳವಡಿಸಿದ ಎಷ್ಟೋ ಉದಾಹರಣೆಗಳಿವೆ. ಮಾ ತುಜೆ ಸಲಾಂ, ವಂದೇ ಮಾತರಂ ದೇಶ ಭಕ್ತಿಯ ಉದ್ದೀಪನಕ್ಕೂ ಕಾರಣವಾಗಿವೆ.

ನಿನ್ನೆಗಾಗಿ ಇಂದಿಗಾಗಿ ನಾಳೆಗಾಗಿ ತಮಿಳು ಎಂಬ ಹೆಸರಿನಲ್ಲಿ ನಡೆದ ಸಂಗೀತ ಮೇಳದಲ್ಲಿ 16 ಹಿಂದಿ ಮತ್ತು 12 ತಮಿಳು ಗೀತೆಗಳನ್ನು ಹಾಡಿದ್ರು. ಹಿಂದಿ ಹಾಡಿನ ನಡುವೆ ಅಲ್ಲಲ್ಲಿ ತಮಿಳು ಸಾಲುಗಳನ್ನು ಕೂಡ ಮಿಶ್ರ ಮಾಡಿದ್ದರು. ಅಂದಹಾಗೆ ಅವರು ಇಂಗ್ಲಿಷ್, ತಮಿಳು, ಮಲಯಾಳಂ, ಮರಾಠಿ, ತೆಲುಗು, ಪರ್ಷಿಯನ್ ಮತ್ತು ಕನ್ನಡದಂಥ ಅನೇಕ ಭಾಷೆಗಳಲ್ಲಿ ಅವರು ಸ್ವರ ಸಂಯೋಜನೆ ಮಾಡಿದ್ದಾರೆ.

ನಿನ್ನೆಗಾಗಿ ಇಂದಿಗಾಗಿ ನಾಳೆಗಾಗಿ ತಮಿಳು ಹೆಸರೇ ಸೂಚಿಸುವಂತೆ ತಮಿಳಿಗೆ ಪ್ರಧಾನ್ಯತೆ ಕೊಡಲಾಗಿತ್ತು. ಆದರೆ, ಈ ಮೇಳಕ್ಕೆ ಬಹುತೇಕ ಇಂಗ್ಲಿಷ್ ಮತ್ತು ಬಾಲಿವುಡ್ ಅಭಿಮಾನಿಗಳೇ ಈ ಕಾರ್ಯಕ್ರಮದಲ್ಲಿ ಶ್ರೋತೃಗಳಾಗಿದ್ದರು. ಇದೇ ಕಾರಣದಿಂದಾಗಿ ತಮಿಳು ಹಾಡು ಹಾಡಿದ ಕಾರಣಕ್ಕೆ ಪ್ರಸಿದ್ಧ ಸಂಗೀತ ನಿರ್ದೇಶಕನಿಗೆ ಅವಮಾನ ಮಾಡಲಾಗಿದೆ.

ಆದರೆ, ಸಂಗೀತ ಮೇಳದ ಆಯೋಜಕರು ಸಂಗೀತ ಕಾರ್ಯಕ್ರಮ ನೀಡಿದ್ದಕ್ಕಾಗಿ ರೆಹಮಾನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಆದರೆ, ಸಂಗೀತ ಮೇಳದದಿಂದ ಅರ್ಧದಲ್ಲೇ ಹೊರ ನಡೆದವರಿಗೆ, ರೆಹಮಾನ್ ಬಾಲಿವುಡ್ ಅನ್ನು ಕೂಡ ಮೀರಿದ ಸಂಗೀತ ನಿರ್ದೇಶಕ ಎನ್ನುವುದು ಅರಿವಾಗಬೇಕಿದೆ. ಈ ನಡುವೆ ಅವರ ಬೆಂಬಲಕ್ಕೆ ಟ್ವೀಟಿಗರು ಮುಂದಾಗಿದ್ದು, ಇನ್ನು ಹಿಂದಿ ಪ್ರೇಮವನ್ನು ಹೊರತುಪಡಿಸಿ ಕೂಡ ಅವರ ಸಂಗೀತವನ್ನು ಸವಿಯಬೇಕು ಎಂದು ಆಗ್ರಹಿಸಿದ್ದಾರೆ.
ಜಯೋ ಸಾಂಗ್ ಹಾಕೊಳ್ಳೀ..

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ಸ ಸುದ್ದಿ ಟಿವಿ

 

0

Leave a Reply

Your email address will not be published. Required fields are marked *