ಜಾಮೀನು ಅರ್ಜಿ ಹೈಕೋರ್ಟ್ ವಜಾಗೊಳಿಸಲು ಕಾರಣವೇನು?

ವಿದ್ವತ್ ಮೇಲೆ ಹಲ್ಲೆ ಪ್ರಕರಣದಲ್ಲಿ ಇಂದು ಹೈಕೋರ್ಟ್ ನಲಪಾಡ್ ಜಾಮೀನು ಅರ್ಜಿಯನ್ನ ವಜಾಗೊಳಿಸಿದೆ. ಈ ಮೂಲಕ ನಲಪಾಡ್ ಜೈಲು ಅವಧಿ ವಿಸ್ತರಣೆಯಾಗಿದೆ. ವಿದ್ವತ್ ಮೇಲೆ ಹಲ್ಲೆ ಪ್ರಕರಣ.. ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಮಹಮ್ಮದ್ ನಲಪಾಡ ಮತ್ತು ಸಹಚರರು ಪೊಲೀಸರಿಗೆ ಶರಣಾಗಿದ್ರು.ಹಾಗೇ ಈ ಹಿಂದೆ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷನ್ಸ್​ ಕೋರ್ಟ್ ತಿರಸ್ಕರಿಸಿತ್ತು. ಹಾಗೇ ಹೈಕೋರ್ಟ್ ನಲಪಾಡ್ ಪರ ಸಿ ವಿ ನಾಗೇಶ್ ಮತ್ತು ವಿದ್ವತ್ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮ್ ಸುಂದರ್ ವಾದ ಪ್ರತಿವಾದವನ್ನ ಪರಿಗಣಿಸಿ ನಲಪಾಡ್ ಜಾಮೀನು ಅರ್ಜಿಯನ್ನ ಮಾನ್ಯ ಹೈಕೋರ್ಟ್ ಕೂಡಾ ವಜಾಗೊಳಿಸಿದೆ.

ನಲಪಾಡ್ ಜಾಮೀನು ಪಡೆಯಲು ಅರ್ಹರಲ್ಲ ಅಂತ ಹೈಕೋರ್ಟ್ ಮದ್ಯಂತರ ಜಾಮೀನನ್ನು ನಿರಾಕರಿಸಿದೆ. ಹೀಗೇ ಹೈಕೋರ್ಟ್ ಜಾಮೀನು ಅರ್ಜಿಯನ್ನ ತಿರಸ್ಕರಿಸಲು ಬಲವಾದ ಕಾರಣವಿದೆ.ಅಂದು ಮಾರ್ಚ್ 17ರ ರಾತ್ರಿ ಫರ್ಜಿ ಕಫೆಯಲ್ಲಿ ವಿದ್ವತ್ ಮೇಲೆ ಹಲ್ಲೆಯಾಗಿ ರಾತ್ರಿ 11 .45 ಘಂಟೆಗೆ ವಿದ್ವತ್ ಕಡೆಯಿಂದ ದೂರು ದಾಖಲಾಗುತ್ತೆ ಆದ್ರೆ ಪೊಲೀಸರು ಎಫ್ ಐ ಆರ್ 3.30ರ ವರೆಗೂ ದಾಖಲಿಸೊದಿಲ್ಲ.ಆಧ್ರೆ ನಲಪಾಡ್ ಪರ ಅರುಣ್ ಬಾಬು ಬೆಳಿಗ್ಗೆ 5.30ಕ್ಕೆ ದೂರನ್ನ ನೀಡಿದ್ರೆ 6 ಗಂಟೆಯೊಳಗೆ ಮೆಡಿಕಲ್ ಸಮ್ಮರಿ ಕೂಡಾ ಆಗಿರುತ್ತೆ ಇಲ್ಲಿ ಪ್ರಭಾವ ಕೆಲಸಮಾಡಿರೋ ಬಗ್ಗೆ ಕೋರ್ಟ್ ಪರಿಗಣಿಸಿದೆ. ಹಾಗೇ ವಿದ್ವತ್ ವೈದ್ಯಕಿಯ ದಾಖಲೆಯು ಕುಟುಂಬ ಮತ್ತು ತನಿಖಾಧಿಕಾರಿಗಳಿಗೆ ಸಿಗೊ ಮುನ್ನವೇ ನಲಪಾಡ್ಗೆ ಸಿಕ್ಕಿರೋದು ವೈದ್ಯರ ಮೇಲೆ ಸಂಶಯಕ್ಕೆ ಕಾರಣವಾಗಿದೆ.ಹಾಗೇ ನಲಪಾಡ್ ಪರ ವಕೀಲರು ನಲಪಾಡ್ ಹ್ಯಾರಿಸ್ ಹಲ್ಲೆ ಮಾಡೆ ಇಲ್ಲ ಅಂತ ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ರು. ಆದ್ರೆ ಸಿಸಿಟಿವಿ ದ್ರಶ್ಯಾವಳಿಗಳಲ್ಲಿ ಹಲ್ಲೆ ಮಾಡಿರೋದು ಸ್ಪಷ್ಟವಾಗಿದೆ. ಹೀಗಾಗಿ ಆರೋಪಿ ನಲಪಾಡ್ ಮತ್ತು ಸಹ ಆರೋಪಿಗಳಿಗೆ ಜಾಮಿನು ಸಿಕ್ಕರೆ ಸಾಕ್ಷಾಧಾರ ನಾಶ ಮತ್ತು ತನಿಖೆಯ ಮೇಲೆ ಪ್ರಭಾವ ಬಿರೋ ಸಾಧ್ಯತೆ ಇರುತ್ತೆ ಅಂತ ಜಾಮೀನನ್ನ ಹೈಕೋರ್ಟ್ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಪೀಠ ನಿರಾಕರಿಸಿದೆ.ಸಾಮಾನ್ಯವಾಗಿ 307 ಸೆಕ್ಷನ್ ಅಡಿ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ ಜಾಮೀನು ನೀಡುತ್ತೆ. ಆದ್ರೆ ಈ ಪ್ರಕರಣವನ್ನ ಹಲ್ಲೆ ನಡೆದಾಗಿನ ಕ್ರೌರ್ಯ ಮತ್ತು ಪ್ರಭಾವದ ದ್ರಷ್ಟಿಯಿಂದ ಗಂಭೀರ ಅಂತ ಪರಿಗಣಿಸಿ ಹೈಕೋರ್ಟ್ ಜಾಮೀನನ್ನು ನಿರಾಕರಿಸಿದೆ.ಆದ್ರೆ ಅತ್ತ ಕಳೆದ 24 ದಿನದಿಂದ ಜೈಲುವಾಸ ಅನುಭವಿಸುತ್ತಿರೋ ಮಹಮ್ಮದ್ ನಲಪಾಡ್ ಮತ್ತು ಸಹ ಆರೋಪಿಗಳಿಗೆ ಸದ್ಯಕ್ಕೆ ಜಾಮೀನು ಸಿಗುವಂತೆ ಕಾಣುತ್ತಿಲ್ಲ. ಯಾಕಂದ್ರೆ ಜಾಮೀನು ಕೋರಿ ಸುಪ್ರೀಂ ಮೊರೆ ಹೊದ್ರು ತೀರ್ಪು ಬರಲು ಒಂದಿಷ್ಟು ದಿನ ಕಾಯಲೇ ಬೇಕು.

ರೂಪೇಶ್ ಬೈಂದೂರು ಕ್ರೈಂ ಬ್ಯೂರೋ ಸುದ್ದಿ ಟಿವಿ

0

Leave a Reply

Your email address will not be published. Required fields are marked *