ಫ್ಲೆಕ್ಸ್​, ಬ್ಯಾನರ್ ವಿಚಾರದಲ್ಲಿ ಮತ್ತೆ ಬಿಬಿಎಂಪಿಗೆ ಹೈಕೋರ್ಟ್ ಚಾಟಿ

ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್​, ಭಿತ್ತಿಪತ್ರ, ಹೋರ್ಡಿಂಗ್ಸ್​ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತು ಪೊಲೀಸರ ವಿರುದ್ಧ ಹೈಕೋರ್ಟ್​ ಗರಂ ಆಗಿದೆ. ಫ್ಲೆಕ್ಸ್ ಹಾಕಿದವರ ಹೆಸರು ಎಫ್​ಐಆರ್​ನಲ್ಲಿ ಯಾಕೆ ಉಲ್ಲೇಖಿಸಿಲ್ಲ, ಆರೋಪಿಗಳ ಹೆಸರಿಲ್ಲದ ಎಫ್​ಐಆರ್​ನಿಂದ ಏನು ಪ್ರಯೋಜನ..? ಎಂದು ಬಿಬಿಎಂಪಿ ಪರ ವಕೀಲರಿಗೆ ಪ್ರಶ್ನಿಸಿದೆ. ಹೆಸರಿಲ್ಲದ ಎಫ್​ಐಆರ್​ ಹಾಕಿ ಕಣ್ಣೊರೆಸುವ ತಂತ್ರ ಮಾಡಬೇಡಿ, ಫ್ಲೆಕ್ಸ್​​ ಹಾಕಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ ಎಂದು ರಿಟ್​ ವಿಚಾರಣೆ ವೇಳೆ ಹೈಕೋರ್ಟ್​ ಸೂಚನೆ ನೀಡಿದೆ.

0

Leave a Reply

Your email address will not be published. Required fields are marked *