ಕೇರಳದಲ್ಲಿ 30 ವರ್ಷದಲ್ಲೇ ಅತ್ಯಂತ ಹೆಚ್ಚು ಮಳೆ: ಭೂಕುಸಿತದಲ್ಲಿ ಸಿಲುಕಿದ 60 ಜನ

ತಿರುವನಂತಪುರ: ಕೇರಳದಲ್ಲಿ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಡುಕ್ಕಿ ಅಣೆಕಟ್ಟು ಸಂಪೂರ್ಣ ತುಂಬಿದೆ. ಪರಿಯಾರ್ ನದಿಯ ಒಳ ಹರಿವಿನ ಪ್ರಮಾಣ 125 ಕ್ಯೂಸೆಕ್ಸ್​​ ಗೆ ಏರಿದೆ. ನಿರಂತರ ಮಳೆಯಿಂದಾಗಿ ಕ್ರಸ್ಟ್ ಗೇಟ್​ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ. ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಮಳೆ ಪರಿಹಾರಕ್ಕಾಗಿ ಪಿಣರಾಯಿ ವಿಜಯನ್ 5 ಕೋಟಿ ರೂ.ಗಳನ್ನು ಬಿಡಗಡೆ ಮಾಡಿದ್ದಾರೆ. ಇನ್ನು ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನೂ ರದ್ದುಗೊಳಿಸಿ, ಪರಿಹಾರ ಕಾರ್ಯಗಳಿಗೆ ಒತ್ತು ನೀಡಿದ್ದಾರೆ. ಕೇರಳದಾದ್ಯಂತ ತೀವ್ರ ಮಳೆ ಹಿನ್ನೆಲೆಯಲ್ಲಿ ಮುನ್ನಾರ್​ನಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಮುನ್ನಾರ್ ಬಳಿ ಭಾರೀ ಭೂ ಕುಸಿತ ಸಂಭವಿಸಿದ ಪರಿಣಾಮದಿಂದಾಗಿ 60 ನಾಗರಿಕರು ಸಿಲುಕಿಕೊಂಡಿದ್ದಾರೆ.

0

Leave a Reply

Your email address will not be published. Required fields are marked *