ರಾಜ್ಯದಲ್ಲಿ ಮುಂದುವರೆದ ಮಹಾಮಳೆ ಅವಾಂತರ

ಕಳೆದ ಮೂರುನಾಲ್ಕು ದಿನಗಳಿಂದ ರಾಜ್ಯದಾದ್ಯಂತ ವರುಣ ಅಬ್ಬರಿಸುತ್ತಿದ್ಧಾನೆ. ಇಂದೂ ಸಹಾ ಮಹಾಮಳೆ ವಿವಿಧ ಜಿಲ್ಲೆಗಳಲ್ಲಿ ಮಳೆರಾಯನ ಪ್ರತಾಪ ಮುಂದುವರೆದಿದ್ದು, ಕೆಲವೆಡೆ ಅವಾಂತರ ಸೃಷ್ಠಿಸಿದ್ದಾನೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಮೂವರು ದಿಗನಗಳಿಂದ ವರುಣ ರೌದ್ರಾವತಾರ ಮುಂದುವರೆದಿದೆ. ಉಳಿದಂತೆ ಕೊಪ್ಪ, ಎನ್.ಆರ್.ಪುರದಲ್ಲೂ ಮಳೆಯಾಗ್ತಿದ್ದು, ಬಿಟ್ಟು-ಬಿಟ್ಟು ಸುರಿಯುತ್ತಿರೋ ವರುಣನ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ.

ತುಂಗಾ-ಭದ್ರಾ-ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಮಲೆನಾಡಿನಾದ್ಯಂತ ಅಲ್ಲಲ್ಲೇ ರಸ್ತೆ, ಸೇತುವೆ, ಹಳ್ಳ-ಕೊಳ್ಳ-ಹೊಲಗದ್ದೆಗಳು ಜಲಾವೃತಗೊಂಡಿವೆ. ಮುನ್ನೆಚ್ಚರಿಕೆಯಿಂದ ನದಿಪಾತ್ರದ ಜನತೆ, ತಗ್ಗುಪ್ರದೇಶ ಹಾಗೂ ಪ್ರವಾಹ ಪೀಡಿತ ಪ್ರದೇಶದ ಶಾಲೆಗಳಿಗೆ ಬಿಇಓ ಉಮೇಶ್ ರಜೆಗೋಷಿಸಿದ್ದಾರೆ. ಬ್ಯಾಗಡವಳ್ಳಿಯಲ್ಲಿ ಮನೆಯ ಮೇಲೆ ಮರ ಬಿದ್ದು ಅವಾಂತರ ಸೃಷ್ಟಿಯಾಗಿದೆ. ಮರ ಬಿದ್ದರೂ ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಮಂಡ್ಯ ಜಿಲ್ಲೆಯಲ್ಲೂ ಬೆಳಗ್ಗೆಯಿಂದಲೂ ಮಳೆಯ ಆರ್ಭಟ ಬಿರುಸಾಗಿದ್ದು, ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಜಿಟಿ ಜಿಟಿ ಮಳೆಯಿಂದಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯ್ತು. ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ವರುಣ ಅಬ್ಬರಿಸಿದ್ದಾನೆ. ಇನ್ನು ವರುಣನ ಅಬ್ಬರಕ್ಕೆ ಅನ್ನಪೂರ್ಣೇಶ್ವರಿನಗರಗಳಲ್ಲಿ ರಸ್ತೆಗಳೆಲ್ಲಾ ಕೆಸರು ಗದ್ದೆಗಳಾಗಿ ಮಾರ್ಪಾಡಾಗಿದ್ದು, ವಾಹನ ಸವಾರರ ಪರದಾಡುವಂತಾಗಿದೆ.

ಹಾಸನ ಜಿಲ್ಲೆಯಲ್ಲೂ ಭಾರಿ ಮಳೆಯಾಗಿದೆ. ಬ್ಯಾಕರವಳ್ಳಿ ಸಮೀಪ ಲಕ್ಷ್ಮಿಪುರದ ವಣಗೂರು-ಜನ್ನಾಪುರ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮರಬಿದ್ದು ವಾಹನಗಳ ಸಂಚಾರ ಬಂದ್‍ ಆಗಿದೆ. ಇಲ್ಲಿಯತನಕ ಸುಮಾರು 120 ಮಿ.ಮಿ. ಮಳೆಯಾಗಿದೆ. ಇನ್ನು ಮಳೆಯಿಂದ ಗೆದ್ದು ಗ್ರಾಮ, ವಣಗೂರು ಕೂಡುರಸ್ತೆ, ಬ್ಯಾಗಡವಳ್ಳಿಯ ಹಾಗೂ ಚಂಗಡಹಳ್ಳಿಯಲ್ಲಿ ತಲಾ ಒಂದೂಂದು ಮನೆಗೆ ಹಾನಿಯಾಗಿದೆ. ಬ್ಯಾಗಡವಳ್ಳಿಯಲ್ಲಿ ಮನೆಯ ಮೇಲೆ ಮರ ಬಿದ್ದು ಅವಾಂತರ ಸೃಷ್ಟಿಯಾಗಿದೆ. ಮರ ಬಿದ್ದರೂ ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಮಂಜಿನನಗರಿ ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಇನ್ನು ಭಾರಿ ಮಳೆಗೆ ರಸ್ತೆಗೆ ಮರವೊಂದು ಉರುಳಿಬಿದಿದ್ದು, ಮಡಿಕೇರಿ-ಸೋಮವಾರಪೇಟೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಇನ್ನು ಮರ ತೆರವುಗೊಳಿಸಲು ಅರಣ್ಯ ಇಲಾಖೆ ಕಾರ್ಯ ಬರದಿಂದ ಸಾಗುತ್ತಿದೆ. ಇನ್ನೂ ಮೈಸೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಹೆಚ್ಚಾದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಠಿಸಿದ್ದಾನೆ.

ಮಹಾರಾಷ್ಟದ ಕೊಂಕಣ ಪ್ರದೇಶದಲ್ಲಿ ವರುಣನ ಅಬ್ಬರ ಇಂದೂ ಮುಂದುವರೆದಿದೆ. ಕೃಷ್ಣಾ ನದಿ ಹಾಗೂ ಉಪ ನದಿಗಳ ನೀರಿನ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ. ಅಲ್ಲದೆ ಕೃಷ್ಣಾ ನದಿ ಸೇರಿದಂತೆ ಅದರ ಉಪನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ 4 ಗ್ರಾಮಗಳ ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮಗಳ ಕೆಳ ಹಂತದ ಸೇತುವೆಗಳ ಮುಳಗಡೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಇನ್ನು ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹೆಚ್ಚುತ್ತಿರುವ ಮಳೆಗೆ ಹಳ್ಳ ಕೊಳ್ಳ ಹಾಗೂ ನದಿಗಳು ಮೈದುಂಬಿ ಹರಿಯುತ್ತಿವೆ. ಇನ್ನು ಹೊಲಗದ್ದೆಗಳು ನೀರಿನಿಂದ ಆವೃತವಾಗಿದೆ. ಇನ್ನು ಮಲೆನಾಡು ಶಿವಮೊಗ್ಗದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿಯ ಶಾಲೆಗಳಿಗೆ ಡಿಡಿಪಿಐ ರಜೆ ಘೋಷಣೆ ಮಾಡಲಾಗಿದೆ.ಒಟ್ಟಿನಲ್ಲಿ ರಾಜ್ಯದಲ್ಲಿ ಮುಂಗಾರು ಮಹಾಮಳೆ ಮುಂದುವರೆದಿದ್ದು, ಎಲ್ಲೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ವರುಣನ ಮುನಿಸಿಗೆ ರಾಜ್ಯದ ಜನತೆ ಇಡಿ ಶಾಪಹಾಕುತ್ತಿದ್ಧಾರೆ.

0

Leave a Reply

Your email address will not be published. Required fields are marked *