ಪಾಕಿಸ್ತಾನಕ್ಕೆ ಬಿರಿಯಾನಿ ತಿನ್ನಲು ಹೋದವರು ಯಾರು?: ಪ್ರಿಯಾಂಕ ಗಾಂಧಿ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ನಿಮ್ಮ ವಾರಾಣಸಿಯ ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದಾರೆಯೇ ಎಂದು ನಾನು ಜನರನ್ನು ಕೇಳಿದೆ. ನನಗೆ ಅವರಿಂದ ಇಲ್ಲ ಎಂಬ ಉತ್ತರ ಸಿಕ್ಕಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಮೋದಿಯವರ ಪ್ರಚಾರವನ್ನು ನೋಡಿದರೆ ನನಗೆ ಅಚ್ಚರಿಯಾಗುತ್ತದೆ. ಅವರು ಇಲ್ಲಿನ ಜನರಿಗೆ ಏನನ್ನಾದರೂ ಮಾಡಿದ್ದಾರೆ ಎಂದು ನಾನು ಭಾವಿಸಿದ್ದೆ. ಅವರು ಇಡೀ ಜಗತ್ತನ್ನು ಸುತ್ತಿದರು. ಎಲ್ಲರನ್ನೂ ಅಪ್ಪಿಕೊಂಡರು. ಆದರೆ, ತಮ್ಮ ಜನರನ್ನು ಅವರು ಅಪ್ಪಿಕೊಳ್ಳಲಿಲ್ಲ ಎಂದರು. ವಾರಾಣಸಿಯಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರದಲ್ಲಿ ಅವರು ಭಾಗವಹಿಸಿದ್ದರು.

ಭಾರತದಲ್ಲಿ ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನದಲ್ಲಿ ಪಟಾಕಿ ಸಿಡಿಸಲಾಗುತ್ತದೆ ಎಂಬ ಆರೋಪದ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಾಕಿಸ್ತಾನಕ್ಕೆ ಬಿರಿಯಾನಿ ತಿನ್ನಲು ಅವರು (ಮೋದಿ) ಹೋಗಿದ್ದರಲ್ಲವೇ? ಎಂದು ಪ್ರಶ್ನಿಸಿ ಮುನ್ನಡೆದರು. ಈ ಕುರಿತ ವಿಡಿಯೋ ಟ್ವೀಟರ್​ನಲ್ಲಿ ವ್ಯಾಪಕವಾಗಿ ವೀಕ್ಷಣೆಗೆ ಒಳಗಾಗಿದೆ.

0

Leave a Reply

Your email address will not be published. Required fields are marked *