ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಯತ್ನ

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಯತ್ನ ನಡೆಸಿದ ಘಟನೆ ಗದಗ ಜಿಲ್ಲೆ ಮುಂಡರಗಿಯ ದಿಂಡೂರ ತಾಂಡಾದಲ್ಲಿ ನಡೆದಿದೆ.. ಜನೇವರಿ 1 ರಂದು ತಿಪ್ಪಣ್ಣನ ಪತ್ನಿ ಶಾಂತವ್ವ ಎಂಬುವರ ಮೇಲೆ ರೇಪ್​ ಯತ್ನ ನಡೆದಿದ್ದು, ಅದೇ ಗ್ರಾಮದ ಶಂಕ್ರಪ್ಪ ಲಮಾಣಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ, ಚಿರಾಟ, ಕೂಗಾಟ ಬಳಿಕ ಶಂಕ್ರಪ್ಪ ಲಮಾಣಿ ಪರಾರಿಯಾಗಿದ್ದಾನೆ. ಅತ್ಯಾಚಾರ ಯತ್ನ ಮಾಡಿರೋ ಕುರಿತು ಮುಂಡರಗಿ ಪೊಲೀಸರ ಬಳಿ ದೂರ ನೀಡಲು ಹೋದ್ರೆ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ.. ಅಲ್ಲದೆ ಮಹಿಳೆ ಹಾಗೂ ಆಕೆಯ ಪತ್ನಿಯನ್ನ ನಿಂದಸಿದ್ದಾರೆ.. ವಿಚಿತ್ರ ಅಂದ್ರೆ ತಾಂಡಾದ ಪಂಚಾಯ್ತಿ ವೇಳೆ ಶಂಕರ ಲಮಾಣಿ ಕುಟುಂಬ ಸಂತ್ರಸ್ಥೆ ಮೇಲೆ ಹಲ್ಲೆ ನಡೆಸಿದ್ದಾರೆ.. ಸದ್ಯ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಾ ಇದೆ..

0

Leave a Reply

Your email address will not be published. Required fields are marked *