ಎಚ್. ಎ. ಎಲ್. ದೇಶದ ಪ್ರತಿಷ್ಟಿತ ಸರ್ಕಾರಿ ಕಂಪನಿಗಳಲ್ಲಿ ಒಂದು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಎಚ್​​. ಎ. ಎಲ್​​ನಲ್ಲಿ ಒಂದೇ ಟ್ರೇಡ್​ ಯೂನಿಯನ್​ ಇದೆ, ದೇಶಕ್ಕೆ ವೈಜ್ಞಾನಿಕ ದೃಷ್ಟಿಕೋನ ಕೊಟ್ಟಿದ್ದು ಎಚ್​​ಎಎಲ್​, ಕೇಂದ್ರ ಸರ್ಕಾರದ ಆದೇಶ ಉಲ್ಲಂಘಿಸಿ ರಾಹುಲ್​ ಸಂವಾದದಲ್ಲಿ ಭಾಗಿಯಾದ ಸಿಬ್ಬಂದಿ, ಎಚ್ ಎ ಎಲ್ ಕಂಪನಿಯ ಬಗ್ಗೆ ಕೇಂದ್ರ ಸರ್ಕಾರ ತಳೆದಿರುವ ನಿಲುವು ಸರಿಯಲ್ಲ. ಸರ್ಕಾರಿ ಸಾಮ್ಯದ ಕಂಪನಿ ಅಭಿವೃದ್ಧಿಗೆ ಕೇಂದ್ರ ಕೈ ಜೋಡಿಸಬೇಕಿತ್ತೇ ಹೊರತು ಅದರ ಬಗ್ಗೆ ಅವಹೇಳನ ಸರಿಯಲ್ಲ. ನಮ್ಮ ಕ್ಷಮತೆ ನೋಡಿ ಮಾತನಾಡಲಿ, ಸುಮ್ಮನೆ ನಾವು ಮಾತನಾಡಲು ನಿಂತಿಲ್ಲ. ನಾವು ಯಾರನ್ನೂ ಈ ವಿಚಾರದಲ್ಲಿ ಬೇಡಿಕೊಳ್ಳಲ್ಲ, ನಮ್ಮನ್ನ ಇನ್ ಸಲ್ಟ್ ಮಾಡಿದಂತೆ ಅನಿಸುತ್ತಿದೆ, ರಾಹುಲ್ ಗಾಂಧಿ ಜೊತೆಗಿನ ಸಂವಾದದಲ್ಲಿ ಎಚ್. ಎ. ಎಲ್. ಮಾಜಿ ನೌಕರರ ಅಭಿಪ್ರಾಯ.

ನನ್ನ ಪ್ರಕಾರ ಎಚ್ಎಎಲ್ ಇತರೇ ಕಂಪನಿಗಳಂತೆ ಅಲ್ಲ, ಎಚ್. ಎ. ಎಲ್. ದೇಶದ ಪ್ರತಿಷ್ಟಿತ ಸರ್ಕಾರಿ ಕಂಪನಿಗಳಲ್ಲಿ ಒಂದು, ನಾನು ನಿಮ್ಮ ಸಮಸ್ಯೆಗಳನ್ನು ಕೇಳಲು ಬಂದಿದ್ದೇನೆ.ಮಿನ್ಸ್ ಸ್ಕ್ವೇರ್ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಹೇಳಿಕೆ, ಒಬಾಮಾ ಕೂಡ ಎಚ್. ಎ. ಎಲ್. ಬಗ್ಗೆ ಶ್ಲಾಘಿಸಿದ್ದರು ಎಂದು ರಾಹುಲ್, ಎಚ್. ಎ. ಎಲ್. ಸಿಬ್ಬಂದಿ ಅನುಭವಿಸಿದ ನೋವು ನನಗೆ ಗೊತ್ತಿದೆ. ಎಚ್.ಎ.ಎಲ್ ನಲ್ಲಿ ಕೆಲಸ ಮಾಡುವುದು ಹೆಮ್ಮೆಯ ಸಂಗತಿ, ಎಚ್. ಎ. ಎಲ್. ದೇಶಕ್ಕೆ ವೈಜ್ಞಾನಿಕ ದೃಷ್ಟಿಕೋನ ನೀಡಿದ ಕಂಪನಿ. ಬೆಂಗಳೂರು ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ರಾಜಧಾನಿ, ಸಂವಾದ ಕಾರ್ಯಕ್ರಮದಲ್ಲಿ ಎಚ್.ಎ.ಎಲ್ ಕೊಡುಗೆ ಬಣ್ಣಿಸಿದ ರಾಹುಲ್. ಸಂವಾದದಲ್ಲಿ ತಮ್ಮ ಅಳಲು ತೋಡಿಕೊಂಡ ನಿವೃತ್ತ ನೌಕರರು, ಎರ್ ಕ್ರ್ಯಾಫ್ಟ್ ತಯಾರಿಕಾ ಸಿಬ್ಬಂದಿ ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ. ನಾವು ಎಚ್. ಎ. ಎಲ್. ಆಡಳಿತ ಮಂಡಳಿ ವಿರೋಧವಲ್ಲ, ನಾವು ಕನಿಷ್ಠ ವೇತನ ಪಡೆದು ವಿಮಾನಗಳನ್ನು ತಯಾರಿಸಿದ್ದೇವೆ. ಎಚ್. ಎ. ಎಲ್. ನಲ್ಲಿ ಒಂದೇ ಯುನಿಯನ್ ಇದೆ, ಅದು ಯಾವುದೇ ರಾಜಕೀಯ ಪಕ್ಷದ ಬೆಂಬಲವಾಗಿಲ್ಲ, ನಿವೃತ್ತ ನೌಕರರಿಂದ ಅಹವಾಲು.

ಬೆಂಗಳೂರಿನ ಮಿನ್ಸ್ ಸ್ಕ್ವೇರ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಎಚ್.ಎ.ಎಲ್ ನ್ನು ಆಧುನಿಕ ಭಾರತದ ದೇವಾಲಯ ಎಂದು ಬಣ್ಣಿಸಿದ್ರು. ಅಲ್ಲದೇ, ಇಂತಹ ದೇವಾಲಯದ ಮೇಲೆ ಆಗುತ್ತಿರುವ ದಾಳಿ ಸಹಿಸಲಾಗದು. ನಮಗೆ ಎಚ್.ಎ.ಎಲ್ ನ ಸಾಮರ್ಥ್ಯದ ಅರಿವಿದೆ. ಹಾಗಾಗಿ ಕೇಂದ್ರ ಸರ್ಕಾರದ ಪರವಾಗಿ ಕ್ಷಮೆ ಕೋರುವುದಾಗಿ ತಿಳಿಸಿದ್ರು. ಕೇಂದ್ರ ಸರ್ಕಾರ ಎಚ್.ಎ.ಎಲ್ ಸರ್ವನಾಶ ಮಾಡಲು ಹೊರಟಿದೆ. ಇದು ಸಾಮಾನ್ಯ ಸಂಸ್ಥೆಯಲ್ಲ, ದೇಶದ ಆಸ್ತಿ.ರಫೇಲ್ ಒಪ್ಪಂದ ನಿಮಗೆ ಸಿಗಲೇ ಬೇಕಿತ್ತು. ರಫೇಲ್ ಒಪ್ಪಂದ ನಿಮ್ಮ ಹಕ್ಕು ಎಂದ್ರು. ಎಚ್.ಎ.ಎಲ್ ನ್ನು ನಾಶವಾಗಲು ಬಿಡಬಾರದು. ಎಚ್ ಎ ಎಲ್ ಸಿಬ್ಬಂದಿಗಳ ಜೊತೆ ನಾನು ನಿಲ್ಲುತ್ತೇನೆ. ನಿಮಗಾಗಿರೋ ನೋವಿಗೆ ನಾನು ಕ್ಷಮೆ ಕೇಳುತ್ತೇನೆ. ನಿಮ್ಮ ಕಳಕಳಿ ಬಗ್ಗೆ ನನಗೆ ಅಭಿಮಾನವಿದೆ ಎಂದ್ರು. ರಫೇಲ್ ವಿಮಾನ ತಯಾರಿಕೆ ಮಾಡುವ ಸಾಮರ್ಥ್ಯ ಇದ್ರೆ ಅದು ಎಚ್ ಎ ಎಲ್ ಗೆ ಮಾತ್ರ. ರಫೇಲ್ ಯೋಜನೆ ಬಗ್ಗೆ ಎಚ್ ಎ ಎಲ್ ಸಿಬ್ಬಂದಿ ಕೇಳುತ್ತಿರೋದು ಅವರ ಹಕ್ಕು. ಅದಕ್ಕೆ ಮನ್ನಣೆ ನೀಡಲೇ ಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದರು.

0

Leave a Reply

Your email address will not be published. Required fields are marked *