ಕೊಡಗಿಗಾಗಿ ರಂಗ ಸಪ್ತಾಹ: ಕಲಾಗ್ರಾಮದಲ್ಲಿಂದು ಗುಲಾಬಿ ಗ್ಯಾಂಗ್ ದಾಳಿ!

ಬೆಂಗಳೂರು: ನವೆಂಬರ್ 11ರಿಂದ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಯುತ್ತಿದ್ದ ಕೊಡಗಿಗಾಗಿ ರಂಗ ಸಪ್ತಾಹ ಕಾರ್ಯಕ್ರಮದಲ್ಲಿ ಇಂದು ರಂಗಪಯಣ ತಂಡ ಅಭಿನಯಿಸುವ ಗುಲಾಬಿ ಗ್ಯಾಂಗ್ ನಾಟಕ ಪ್ರದರ್ಶನವಾಗಲಿದೆ. ಪ್ರವೀಣ್ ಸೂಡ ಅವರು ರಂಗರೂಪ ನೀಡಿದ್ದು, ರಾಜಗುರು ಹೊಸಕೋಟೆಯವರು ವಿನ್ಯಾಸ ಮಾಡಿ, ಸಂಗೀತ ನೀಡಿ, ನಾಟಕವನ್ನು ನಿರ್ದೇಶನದ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ನಯನ ಸೂಡ ಪ್ರಮುಖ ಪಾತ್ರ ವಹಿಸಿರುವ ಈ ನಾಟಕ ಸಂಜೆ 7ಕ್ಕೆ ಪ್ರಯೋಗವಾಗಲಿದೆ. ಇದಕ್ಕೂ ಮುನ್ನ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ರಾಮಚಂದ್ರ ಹಡಪದ್ ಅವರು ಗಜಲ್​ಗಳನ್ನು ಹಾಡಲಿದ್ದಾರೆ. ಸಂಜೆ 5:30ರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ನಂತರ ಸಮಾರೋಪ ನಡೆಯಲಿರುವ ಸಮಾರಂಭದಲ್ಲಿ ಚಿತ್ರದುರ್ಗದ ಶ್ರೀ ಮುರುಘಾ ಶರಣರು ಭಾಗವಹಿಸಲಿದ್ದಾರೆ. ಡಿಸಿಎಂ ಜಿ ಪರಮೇಶ್ವರ್, ನಟಿ ತಾರಾ ಅನೂರಾಧ, ಕಾಂಗ್ರೆಸ್ ನಾಯಕಿ ಡಾ. ನಾಗಲಕ್ಷ್ಮಿ ಚೌಧರಿ, ಎನ್​ಎಸ್​ಡಿ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ. ಬಸವಲಿಂಗಯ್ಯ, ನಟ ಮಂಡ್ಯ ರಮೇಶ್, ಮಾಜಿ ಶಾಸಕ ಪ್ರಿಯ ಕೃಷ್ಣ ಮೊದಲಾದವರು ಭಾಗವಹಿಸಲಿದ್ದಾರೆ.

0

Leave a Reply

Your email address will not be published. Required fields are marked *