ಗುಜರಾತ್ ಚುನಾವಣಾ ಫಲಿತಾಂಶ: ಸಮೀಕ್ಷೆಯಲ್ಲಿ ನಿಖರ ಭವಿಷ್ಯ ನುಡಿದದ್ದು ಇಂಡಿಯಾ ಟುಡೆ

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅನೇಕ ಖಾಸಗಿ ಸುದ್ದಿ ವಾಹಿನಿಗಳು ಸಮೀಕ್ಷೆ ನಡೆಸಿದ್ದವು. ಆದರೆ, ಈ ಸಮೀಕ್ಷೆಗಳ ಪೈಕಿ ಇಂಡಿಯಾ ಟುಡೆ – ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಫಲಿತಾಂಶದ ಸಮೀಪದ ಭವಿಷ್ಯವನ್ನು ನುಡಿದಿತ್ತು. ಇಂಡಿಯಾ ಟುಡೆ ಸಮೀಕ್ಷೆಯ ಪ್ರಕಾರ, ಬಿಜೆಪಿ 99 – 113, ಕಾಂಗ್ರೆಸ್ – 68-82 ಮತ್ತು ಇತರರು – 01 – 4 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುತ್ತಾರೆ ಎಂದು ಸಮೀಕ್ಷೆಯನ್ನು ಬಿಡುಗಡೆ ಮಾಡಿತ್ತು. ಇಂದು ಪ್ರಕಟವಾದ ಗುಜರಾತ್ ವಿಧಾನಸಭೆಯ ಫಲಿತಾಂಶದಲ್ಲಿ ಬಿಜೆಪಿಯ 99, ಕಾಂಗ್ರೆಸ್​​ನ 77 ಮತ್ತು ಭಾರತೀಯ ಬುಡಕಟ್ಟು ಪಕ್ಷದ 2, ಎನ್​​ಸಿಪಿಯ 1 ಮತ್ತು ಇತರರು 3 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ. ಈ ಮೂಲಕ ಅಂತಿಮ ಫಲಿತಾಂಶದ ಅತ್ಯಂತ ಸಮೀಪದ ಸಮೀಕ್ಷೆಯನ್ನು ಇಂಡಿಯಾ ಟುಡೆ – ಆಕ್ಸಿಸ್ ಮೈ ಇಂಡಿಯಾ ನೀಡಿದಂತಾಗಿದೆ.

ಗುಜರಾತ್ ವಿಧಾನಸಭೆ ಮತಗಟ್ಟೆ ಸಮೀಕ್ಷೆ – 2017 ಬಿಜೆಪಿ ಕಾಂಗ್ರೆಸ್ ಇತರರು
ಇಂಡಿಯಾ ಟುಡೆ – ಆಕ್ಸಿಸ್ ಮೈ ಇಂಡಿಯಾ 99 -113 68-82 01-4
ನಿರ್ಮಾಣ ಟಿವಿ 104 74 04
ಟೈಮ್ಸ್​​ನೌ-ವಿಎಂಆರ್​ 109 70 03
ನ್ಯೂಸ್ 18 – ಸಿ ವೋಟರ್ 108 74 00
ನ್ಯೂಸ್​​ಎಕ್ಸ್​​ – ಸಿಎನ್​ಎಕ್ಸ್ 110-120 65-75 02-04
ರಿಪಬ್ಲಿಕ್ 115 65 02
ಸಹಾರಾ 110-120 65-75 02-04
ಸಮಯ್ ಸಿಎನ್​​ಎಕ್ಸ್ 110-120 65-75 02-04
ಎಬಿಪಿ ಸಿಎಸ್​​ಡಿಎಸ್​​ 117 64 01
ನ್ಯೂಸ್ ನೇಷನ್ 124-128 52-56 01-03
ಸಮೀಕ್ಷೆಯ ಸರಾಸರಿ 111 70 01

 

 

0

Leave a Reply

Your email address will not be published. Required fields are marked *