ಗುಜರಾತ್​ನಲ್ಲಿ ರಾಹುಲ್ ಹೊಸ ರಣನೀತಿ: ಪ್ರತಿದಿನ ಪ್ರಧಾನಿಯನ್ನು ಪ್ರಶ್ನಿಸಲಿರುವ ಎಐಸಿಸಿ ಉಪಾಧ್ಯಕ್ಷ

ಸಾಮಾಜಿಕ ಜಾಲತಾಣಗಳ ಬಳಕೆಗೆ ಮುಂದಾದ ಕಾಂಗ್ರೆಸ್
ಪ್ರತಿ ದಿನ ಪ್ರಶ್ನೆ ಕೇಳಲಿರುವ ರಾಹುಲ್ ಗಾಂಧಿ
ಭರವಸೆ ಈಡೇರಿಸಲು 45 ವರ್ಷಗಳು ಬೇಕೆ ಎಂದ ಎಐಸಿಸಿಸಿ ಉಪಾಧ್ಯಕ್ಷ

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ ಕಾವು ಪಡೆದುಕೊಂಡಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿದಿನ ಪ್ರಶ್ನೆಗಳನ್ನು ಕೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದಾರೆ. ಇದರ ಭಾಗವಾಗಿ ಇಂದು ಟ್ವೀಟ್ ಮೂಲಕ ಒಂದು ಪ್ರಶ್ನೆ ಕೇಳಿದ್ದು, 2012ರಲ್ಲಿ 50 ಲಕ್ಷ ಹೊಸ ಮನೆ ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದ್ದಿರಿ. 5 ವರ್ಷಗಳಲ್ಲಿ 4. 72 ಲಕ್ಷ ಮನೆಗಳನ್ನು ನಿರ್ಮಿಸಿದ್ದೀರಿ. ಪ್ರಧಾನಮಂತ್ರೀಜಿ ಹೇಳಿ, ನಿಮ್ಮ ಭರವಸೆಯನ್ನು ಪೂರ್ಣಗೊಳಿಸಲು 45 ವರ್ಷಗಳು ಹಿಡಿಯುತ್ತವೆಯೇ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಮೋದಿಯವರು ನೀಡಿರುವ ಭರವಸೆಗಳನ್ನು ಈಡೇರಿಸಿಲ್ಲ ಎಂದು ಜನರಿಗೆ ತಿಳಿಸಿಕೊಡಲು ಮುಂದಾಗಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್:

22 ವರ್ಷಗಳ ಲೆಕ್ಕ
ಗುಜರಾತ್ ಪ್ರಶ್ನಿಸುತ್ತಿದೆ

ಗುಜರಾತ್ ಪರಿಸ್ಥಿತಿ ಕುರಿತು ಪ್ರಧಾನಮಂತ್ರೀಜಿಯವರಿಗೆ ಮೊದಲ ಪ್ರಶ್ನೆ:

2012ರಲ್ಲಿ 50 ಲಕ್ಷ ಹೊಸ ಮನೆ ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದ್ದಿರಿ.
5 ವರ್ಷಗಳಲ್ಲಿ 4. 72 ಲಕ್ಷ ಮನೆಗಳನ್ನು ನಿರ್ಮಿಸಿದ್ದೀರಿ.
ಪ್ರಧಾನಮಂತ್ರೀಜಿ ಹೇಳಿ, ನಿಮ್ಮ ಭರವಸೆಯನ್ನು ಪೂರ್ಣಗೊಳಿಸಲು 45 ವರ್ಷಗಳು ಹಿಡಿಯುತ್ತವೆಯೇ?

ಟ್ವೀಟ್ ಮೂಲಕ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿರುವ ಭರವಸೆಗಳ ಕುರಿತು ಗುಜರಾತ್​ನ ಜನತೆ ತಿಳಿದುಕೊಳ್ಳಲು ಬಯಸುತ್ತಿದ್ದಾರೆ ಎಂದಿದ್ದಾರೆ. ನಿರಂತರವಾಗಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನಿಸುತ್ತಿದ್ದ ರಾಹುಲ್ ಅವರ ಕ್ರಮವನ್ನು ಕಾಂಗ್ರೆಸ್ ರಣತಂತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ.

ಇದರ ಭಾಗವಾಗಿ ಇಂದು ರಾಹುಲ್ ಗಾಂಧಿ ಇಂದು ಟ್ವೀಟ್ ಮಾಡಿದ್ದಾರೆ. ಚುನಾವಣೆ ಪ್ರಚಾರದ ಕಡೆಯವರೆಗೆ ರಾಹುಲ್ ಗಾಂಧಿ ಪ್ರತಿದಿನ ಪ್ರಧಾನಿಯವರಿಗೆ ಒಂದು ಪ್ರಶ್ನೆ ಕೇಳಲು ಮುಂದಾಗಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿದ್ದಾರೆ. ಅಲ್ಲದೇ, ಕಾಂಗ್ರೆಸ್ ವಿರುದ್ಧ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ಮೋದಿ ಮತ್ತು ಬಿಜೆಪಿಯ ಆರೋಪಗಳಿಗೆ ಪ್ರತ್ಯುತ್ತರ ಕೊಡುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಶ್ನೆಗಳ ಮೂಲಕ ಮುಖಾಮುಖಿಯಾಗುವುದು ಮತ್ತು ಜನರ ಮನಸನ್ನು ಸೆಳೆಯುವ ಯತ್ನಕ್ಕೆ ಯುವ ನಾಯಕ ಮುಂದಾಗಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *