ರೈತರ ಆದಾಯ 2022ರಲ್ಲಿ ದ್ವಿಗುಣಗೊಳಿಸಲು ಸರ್ಕಾರ ಶ್ರಮಿಸುತ್ತಿದೆ: ರಾಮನಾಥ್ ಕೋವಿಂದ್

ನವದೆಹಲಿ: ಕೇಂದ್ರ ಸರ್ಕಾರ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ರಾಷ್ಟ್ಪಪತಿ ರಾಮನಾಥ್ ಕೋವಿಂದ್ ಹೇಳಿದರು. ಬಜೆಟ್ ಅಧಿವೇಶನದ ಪ್ರಯುಕ್ತ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಹಣದುಬ್ಬರ ನಿಯಂತ್ರಿಸುವ ಸಾಮರ್ಥ್ಯ ಮತ್ತು ವಿತ್ತೀಯ ಕೊರತೆಯನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದ ಅವರು, 2022ರ ಹೊತ್ತಿಗೆ ರೈತರ ಆದಾಯವನ್ನು ಸರ್ಕಾರ ದುಪ್ಪಟ್ಟುಗೊಳಿಸಲು ಕೆಲಸ ನಿರ್ವಹಿಸುತ್ತಿದೆ ಎಂದರು.

ಸರ್ಕಾರ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ವಿಷಯಕ್ಕೆ ಬದ್ಧವಾಗಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡುವುದು, ಕೃಷಿ ಮಂಡಿಗಳನ್ನು ಆನ್​ಲೈನ್ ವ್ಯವಸ್ಥೆಗೆ ತರಲು ಯತ್ನಿಸುತ್ತಿದೆ ಎಂದರು. ಅಲ್ಲದೇ, ಈ-ನಾಮ್ ಅಡಿ ಇದುವರೆಗೆ ರೈತರು 36,000 ಕೋಟಿ ರೂ. ಮೌಲ್ಯದ ಬೆಳೆಗಳನ್ನು ಮಾರಾಟ ಮಾಡಿದ್ದಾರೆ ಎಂದರು. ರೈತರ ಕಠಿಣ ಪರಿಶ್ರಮದಿಂದ ರೈತರ ಉತ್ಪಾದನೆಯ ಪ್ರಮಾಣ 275 ದಶಲಕ್ಷ ಟನ್​ಗಳಿಂದ 300 ಮಿಲಿಯನ್ ಟನ್​ಗೆ ಉತ್ಪಾದನೆ ಹೆಚ್ಚಾಗಿದೆ. ಈ ಮೂಲಕ ದೇಶ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮೆರೆದಿದೆ. ಇದಕ್ಕೆ ಸರ್ಕಾರದ ನೀತಿಗಳೇ ಕಾರಣ ಎಂದು ಅಭಿಪ್ರಾಯಪಟ್ಟರು. ಇದೇ ಮೊದಲ ಬಾರಿ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಕುಸಿಯುತ್ತಿರುವ ಆರ್ಥಿಕತೆಯ ನಡುವೆ ಭಾರತದ ಆರ್ಥಿಕತೆ ಉತ್ತಮ ಸಾಧನೆ ತೋರುತ್ತಿದೆ ಎಂದರು.

0

Leave a Reply

Your email address will not be published. Required fields are marked *