ಕಾಫಿತೋಟದ ಹುಡುಗಿ ಜೊತೆ ಎಂಗೇಜ್​​ ಆದ್ರು ಗೂಗ್ಲಿ ಡೈರೆಕ್ಟರ್

ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಈಗ ಕಾಫಿತೋಟದ ಹುಡುಗಿ ಅಪೇಕ್ಷಾ ಪುರೋಹಿತಗೆ ಬೋಲ್ಡ್ ಆಗಿದ್ದಾರೆ. ಅಂದ ಹಾಗೆ ಅಪೇಕ್ಷಾ ಪುರೋಹಿತ ಬಾಗಲಕೋಟೆ ಮೂಲದವರು. ಈಗಾಗಲೆ ಧಾರವಾಹಿಯಲ್ಲಿ ಮಿಂಚಿ, ಕಾಫಿತೋಟ ಸಿನಿಮಾದಲ್ಲಿ ನಟಿಸಿ ಯಶಸ್ವಿಯಾಗಿದ್ದಾರೆ. ಈಗ ನಿರ್ದೇಶಕ ಪವನ್ ಒಡೆಯರ್ ಜೊತೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಬಾಗಲಕೋಟೆಯ ಖಾಸಗಿ ಹೊಟೆಲ್ ಒಂದರಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಬ್ರಾಹ್ಮಣ ಸಂಪ್ರದಾಯದಂತೆ ಸರಳವಾಗಿ ಬಂಧುಗಳ ಸಮ್ಮುಖದಲ್ಲಿ ಎಂಗೇಜ್ಮೆಂಟ್ ನಡೆಯಿತು. ಇನ್ನು ಇದೇ ಡಿಸೆಂಬರ್ ಕೊನೆಯ ವಾರದಲ್ಲಿ ಬಾಗಲಕೋಟೆಯಲ್ಲಿಯೇ ಸಪ್ತಪದಿ ತುಳಿಯಲಿದ್ದೇವೆ ಅಂತ ತಿಳಿಸಿದರು.

ಇನ್ನು ನಿಶ್ಚಿತಾರ್ಥದಲ್ಲಿ ನಟಿ ಅಪೇಕ್ಷಾ ಮತ್ತು ಡೈರೆಕ್ಟರ್ ಒಡೆಯರ್ ಫುಲ್ ಮಿಂಚಿಂಗೋ ಮಿಂಚಿಂಗ್. ಹಸಿರು ರೇಷ್ಮೇ ಸೀರೆಯಲ್ಲಿ ಅಪೇಕ್ಷಾ ಕಂಗೊಳಿಸ್ತಿದ್ದರೆ, ನಿರ್ದೇಶಕ ಪವನ್ ಒಡೆಯರ್ ಎಲ್ಲೋ ಶೇರ್ವಾನಿ ಹಾಕಿಕೊಂಡು ಮಿಂಚುತ್ತಿದ್ದರು. ಇನ್ನು ನಿಶ್ಚಿತಾರ್ಥದಲ್ಲಿ ಯಾವ ಸೆಲೆಬ್ರಿಟಿಗಳು ಭಾಗಿಯಾಗಿರಲಿಲ್ಲ. ಆದರೆ ಗೆಟ್ ಟು ಗೆದರ್ ಅನ್ನೋ ರೀತಿಯಲ್ಲಿ ಕೆಲವೇ ಕೆಲವು ಸಂಬಂಧಿಗಳು ಮಾತ್ರ ಭಾಗಿಯಾಗಿದ್ದರು. ಇನ್ನು ಜಿಲ್ಲಾ ಪಂಚಾಯತ್​​ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಭಾಗಿಯಾಗಿ ನವ ಜೋಡಿಗಳಿಗೆ ಹರಿಸಿದರು. ಈ ವೇಳೆ ಮಾತನಾಡಿದ ಅವರು ಪವನ್ ಒಡೆಯರಿಗೆ ಬಾಗಲಕೋಟೆಯ ಬಗ್ಗೆ ತುಂಬಾ ಅಭಿಮಾನ ಇದೆ. ಆದರೂ ಎಂಗೇಜ್ಮೆಂಟ್ ಇಲ್ಲಿ ನಡೆದಿದ್ದು ಖುಷಿಯ ವಿಚಾರ. ಮದುವೆ ಸಹ ಇಲ್ಲಿಯೇ ನಡೆಯಲಿ ಎಂದರು. ಒಟ್ನಲ್ಲಿ ಉತ್ತರ ಕರ್ನಾಟಕ ಹುಡುಗಿ, ಗೂಗ್ಲಿ ಡೈರೆಕ್ಟರ್ ಕಲ್ಯಾಣ ಭಾಗ್ಯ ಕೂಡಿ ಬಂದಿದ್ದು, ಕಾಫಿತೋಟದಲ್ಲಿ ಡೈರೆಕ್ಟರ್ ಗೂಗ್ಲಿ ಹೊಡೆದಿದ್ದಾರೆ.

ಸುರೇಶ ಕಡ್ಲಿಮಟ್ಟಿ ಸುದ್ದಿಟಿವಿ ಬಾಗಲಕೋಟೆ

0

Leave a Reply

Your email address will not be published. Required fields are marked *