ಶ್ರೀಲಂಕಾದಲ್ಲಿ ಗಿಮಿಕ್ ಚಿತ್ರತಂಡ

ಸಾಮಿ ಪಿಕ್ಚರ್ಸ್ ಲಾಂಛನದಡಿ ದೀಪಕ್ ನಿರ್ಮಿಸುತ್ತಿರುವ ಗಿಮಿಕ್ ಚಿತ್ರಕ್ಕೆ ಈಗ ಬೆಂಗಳೂರಿನಲ್ಲಿ ಮತ್ತೊಂದು ಹಂತದಚಿತ್ರೀಕರಣ ಪ್ರಾರಂಭವಾಗಿದೆ. ಇತ್ತೀಚೆಗೆ ಶ್ರೀಲಂಕಾದ ನೆಗಂಬೋ ಸುತ್ತಮುತ್ತ 20 ದಿನಗಳ ಕಾಲ ಗಣೇಶ್, ರೋನಿಕಾಸಿಂಗ್ ಅಭಿನಯದ ಹಲವು ಸನ್ನಿವೇಶಗಳು ಹಾಗೂ ಒಂದುಗೀತೆಯನ್ನು ವಿಘ್ನೇಶ್‍ ಛಾಯಾಗ್ರಹಣದಲ್ಲಿ ನಿರ್ದೇಶಕ ನಾಗಣ್ಣ ಚಿತ್ರೀಕರಿಸಿದ್ದಾರೆ.

ಚಿತ್ರಕ್ಕೆ ನಂಜುಂಡ ಸಂಭಾಷಣೆ, ಕವಿರಾಜ್ ಸಾಹಿತ್ಯ, ಅರ್ಜುನ್ ಜನ್ಯಾ ಸಂಗೀತ, ವಿಘ್ನೇಶ್ ಛಾಯಾಗ್ರಹಣ, ಸುರೇಶ್​ ಕಲೆ, ಮುರಳಿ ನೃತ್ಯ, ಸುರೇಶ್ ಅರಸ್ ಸಂಕಲನ, ನಾರಾಯಣ್ ನಿರ್ದೇಶನ ಸಹಕಾರ, ರಾಮಣ್ಣ ನಿರ್ಮಾಣ, ನಿರ್ವಹಣೆಯಿದ್ದು ಚಿತ್ರವನ್ನು ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಮೊದಲಾದ ಪ್ರಸಿದ್ಧ ಚಿತ್ರಗಳನ್ನು ನಿರ್ದೇಶಿಸಿದ ನಾಗಣ್ಣ ನಿರ್ದೇಶಿಸುತ್ತಿದ್ದಾರೆ.

ತಾರಾಗಣದಲ್ಲಿ ಗಣೇಶ್, ರೋನಿಕಾಸಿಂಗ್, ಸುಂದರರಾಜ್, ಶೋಭರಾಜ್, ಮಂಡ್ಯರಮೇಶ್, ಚಿ. ಗುರುದತ್, ರವಿಶಂಕರ್​ ಗೌಡ, ಸಂಗೀತಾ, ಶ್ವೇತಾ ಮುಂತಾದವರಿದ್ದಾರೆ.

0

Leave a Reply

Your email address will not be published. Required fields are marked *