ಮತ್ತೆ ಕುಸಿದ ಜಿಡಿಪಿ: ಐದು ತ್ರೈಮಾಸಿಕದಲ್ಲೇ ಕನಿಷ್ಠ

ದೆಹಲಿ: ದೇಶದ 2018-19ನೇ ಸಾಲಿನ ಅಕ್ಟೋಬರ್-ಡಿಸೆಂಬರ್ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿ ದರ (ಜಿಡಿಪಿ) ಶೇ. 6.6ಕ್ಕೆ ಕುಸಿದಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರ ಎದುರಾಗಿದೆ. ಕಳೆದ ಐದು ತ್ರೈಮಾಸಿಕ ಅವಧಿಯಲ್ಲೇ ಅತ್ಯಂತ ಕನಿಷ್ಠ ದರ ದಾಖಲಾಗಿದೆ. ಅಕ್ಟೋಬರ್ – ಡಿಸೆಂಬರ್ ತ್ರೈಮಾಸಿಕದ ಅವಧಿಯಲ್ಲೇ ಜಿಡಿಪಿ ದರ ಶೇ. 7 ರಿಂದ ಶೇ. 6.6 ಕ್ಕೆ ಕುಸಿದಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ಹೇಳಿದೆ. ಹಿಂದಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸ್ಥಿರ ಬೆಲೆ ಲೆಕ್ಕದಲ್ಲಿ 2011-12ರಲ್ಲಿ ಶೇ.7.7 ಜಿಡಿಪಿ  ದಾಖಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನೋಟು ನಿಷೇಧ, ಜಿಎಸ್‍ಟಿ ಜಾರಿಯಂತಹ ನಿರ್ಧಾರಗಳನ್ನು ಕೈಗೊಂಡ ನಂತರ ಜಿಡಿಪಿ ದರ ಕುಸಿದಿತ್ತು.

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 8.2ಕ್ಕೆ ಜಿಡಿಪಿ ದರ ಏರಿಕೆಯಾಗಿದೆ ಎಂದು ಹೇಳಲಾಗಿತ್ತು. ಆದರೆ, ಇಷ್ಟು ಪ್ರಮಾಣದ ಜಿಡಿಪಿ ದಾಖಲಾಗಲು ಸಾಧ್ಯವೇ ಇಲ್ಲ ಎಂದು ಆರ್ಥಿಕ ತಜ್ಞರು ಶಂಕೆ ವ್ಯಕ್ತಪಡಿಸಿದ್ದರು. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ.7ಕ್ಕೆ ಕುಸಿತ ಕಂಡಿದೆ ಎಂದು ಕೇಂದ್ರ ಹೇಳಿತ್ತು. ಇದೀಗ ಮತ್ತೊಮ್ಮೆ ದೇಶದ ಜಿಡಿಪಿ ಶೇ.6.6ಕ್ಕೆ ಇಳಿದೆ. ಜಿಡಿಪಿಯಲ್ಲಿ ಆಗಿರುವ ಕೇಂದ್ರ ಸರ್ಕಾರ ತರಾತುರಿಯಲ್ಲಿ ಕೈಗೊಂಡ ನೋಟು ನಿಷೇಧ, ಜಿಎಸ್‍ಟಿಯಂತಹ ಕಾರಣಗಳು ಹಾಗೂ ಉದ್ಯೋಗ ಸೃಷ್ಟಿಯಲ್ಲಿ ವೈಫಲ್ಯ, ಕೃಷಿ ಕ್ಷೇತ್ರದ ಕಡೆಗಣನೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

0

Leave a Reply

Your email address will not be published. Required fields are marked *