ಪತ್ರಕರ್ತೆ ಗೌರಿಲಂಕೇಶ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ…..

ಪತ್ರಕರ್ತೆ ಗೌರಿಲಂಕೇಶ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಆರೋಪಿಗಳ ಪತ್ತೆಗೆ , ಐಜಿ ಬಿ. ಕೆ ಸಿಂಗ್ ನೇತೃತ್ವದಲ್ಲಿ ಎಸ್ ಐಟಿ ತಂಡವನ್ನ ರಚಿಸಲಾಗಿದೆ. ತನಿಖಾಧಿಕಾರಿಯಾಗಿ ಡಿಸಿಪಿ ಎಂ. ಎನ್. ಅನುಚೇತ್ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ತನಿಖೆಯ ಪೂರ್ವ ಭಾವಿಯಾಗಿ ಎಸ್ಐಟಿ ತಂಡದಿಂದ ಸಿಐಡಿ ಕಚೇರಿಯಲ್ಲಿ ಸಭೆ ನಡೆಯುತ್ತಿದೆ. ಈಗಾಗಲೇ ತನಿಖೆಗೆ ಹೊರ ಜಿಲ್ಲೆಗಳತ್ತ ಕೆಲ ಅಧಿಕಾರಿಗಳು ಮುಖಮಾಡಿದ್ದಾರೆ. ಎಫ್ಎಸ್ಎಲ್ ನಿಂದ ಪ್ರಥಮ ವರದಿ ಬಂದ ಬಳಿಕ ತನಿಖೆ ಚುರುಕುಗೊಳ್ಳಲಿದೆ. ಇತ್ತ ರಾಜರಾಜೇಶ್ವರಿ ನಗರದಲ್ಲಿ ಗೌರಿ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

0

Leave a Reply

Your email address will not be published. Required fields are marked *