ತುಟ್ಟಿಯಾಗಲಿದೆ ಗಣೇಶ ವಿಗ್ರಹದ ಬೆಲೆ..

ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿ ಮಾರಾಟ ನಿಷೇಧಿಸಿರೋದ್ರಿಂದ, ಮಣ್ಣಿನ ಗಣೇಶ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿದೆ.. ಇದಲ್ಲದೆ ಮೂರ್ತಿಗಳನ್ನು ತಯಾರಿಸುವ ಜೇಡಿಮಣ್ಣಿನ ಬೆಲೆ ಮೂರ್ನಾಲ್ಕು ಪಟ್ಟು ಏರಿಕೆಯಾಗಿದೆ. ಹಾಗಾಗಿ ಈ ಬಾರಿ ಗಣೇಶನ ಮೂರ್ತಿಯ ದರ ದುಪಟ್ಟಾಗೋದು ಗ್ಯಾರಂಟಿ.ಗಣೇಶನ ಹಬ್ಬಕ್ಕೆ ಇನ್ನೇನು ಒಂದು ತಿಂಗಳು ಮಾತ್ರ ಬಾಕಿ ಇದೆ.. ಈ ನಿಟ್ಟಿನಲ್ಲಿ ಹಬ್ಬ ಆರಂಭವಾಗೋದಕ್ಕೆ ಮುನ್ನವೇ ವಿಗ್ರಹಗಳನ್ನು ತಯಾರು ಮಾಡಲು ಗಣಪತಿ ತಯಾರಕರು ಸಜ್ಜಾಗಿರ್ತಾರೆ. .ಆದ್ರೆ ಈ ಬಾರಿ ಗಣೇಶನ ವಿಗ್ರಹ ತಯಾರಕರಿಗೆ ದೊಡ್ಡ ಹೊಡೆತ ಬಿದ್ದಿದೆ..ಕಾರಣ ಪಿಓಪಿ ಗಣೇಶ ಬ್ಯಾನ್ ಆಗಿದೆ.. ಈ ನಿಟ್ಟಿನಲ್ಲಿ ಮಣ್ಣಿನ ಗಣೇಶನ ತಯಾರು ಮಾಡೋದು ಅನಿವಾರ್ಯವಾಗಿದೆ..

ಆದ್ರೆ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಜೇಡಿಮಣ್ಣಿನ ದರ ಮೂರ್ನಲ್ಕುಪಟ್ಟು ಹೆಚ್ಚಾಗಿದೆ. ಒಂದು ಲೋಡ್ ಜೇಡಿಮಣ್ಣಿನ ದರ 5ಸಾವಿರಯಿದ್ದಿದು, ಇದೀಗ 7 ಸಾವಿರಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ ಜೇಡಿ ಮಣ್ಣಿನ ಅಭಾವ ಕೂಡ ಕಾಣಿಸಿಕೊಂಡಿದೆ. ಒಂದೆಡೆ ಮಣ್ಣು ದೊರೆಯುತ್ತಿಲ್ಲ, ಮತ್ತೊಂದೆಡೆ ಕೂಲಿ ಕಾರ್ಮಿಕರು ದೊರೆಯುತ್ತಿಲ್ಲ.‌ ಅಷ್ಟೇ ಅಲ್ಲದೇ ಗಣಪತಿ ತಯಾರು ಮಾಡಲು ಬೇಕಿರೋ ಅತ್ಯವಶ್ಯಕಗಳಾದ ಬಿದಿರು,ಹುಲ್ಲು ಕೂಡ ದೊರೆಯುತ್ತಿಲ್ಲ.. ಒಂದು ವೇಳೆ ಇವೆಲ್ಲಾ ದೊರೆತರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಇದನ್ನ ಟ್ರಾನ್ಸಪೋರ್ಟ್ ಮಾಡಲು ತೆರಿಗೆ ಕೂಡ ಹೆಚ್ಚಳವಾಗಿದೆ.ಒಟ್ನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಸಂರಕ್ಷಣೆ ಹಾಗೂ ಜಲಚರಗಳ ರಕ್ಷಣೆಗೆ ಕಳೆದ ಬಾರಿ ಮಹತ್ವದ ತೀರ್ಮಾನ ತೆಗೆದುಕೊಂಡಿತ್ತು. ಆ ಪರಿಣಾಮ ಈ ಬಾರಿ ಪಿಓಪಿ ಗಣೇಶಗಳು ಬ್ಯಾನ್ ಆಗಿದ್ದು, ಮಣ್ಣಿನ ಗಣೇಶ ವ್ಯಾಪಾರದ ನಿರೀಕ್ಷೆ ಹೆಚ್ಚಾಗಿದೆ.

ವಿಡಿಯೋ ಜರ್ನಲಿಸ್ಟ್ ಮಹೇಶ ಜೊತೆ ವೀಣಾ ಸಿದ್ದಾಪುರ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *