ಬೆಳಗಾವಿಯಲ್ಲಿ ಭಾರೀ ಪೊಲೀಸ್ ಬಿಗಿ ಭದ್ರತೆ

ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆ ಸುವರ್ಣಸೌಧದಲ್ಲಿ ಭಾರೀ ಪೊಲೀಸ್  ಭದ್ರತೆ ಒದಗಿಸಲಾಗಿದೆ. ಇಬ್ಬರು ಪೊಲೀಸ್ ಆಯುಕ್ತ ನೇತೃತ್ವದಲ್ಲಿ 7 ಮಂದಿ ಎಸ್ಪಿ, 13 ಮಂದಿ ಎಎಸ್ಪಿ, 33 ಡಿಎಸ್ಪಿ, 97 ಸಿಪಿಐ, 215 ಪಿಎಸ್ಐ, 19 ಮಹಿಳಾ ಪಿಎಸ್ಐ ಸೇರಿ 3 ಸಾವಿರ ಪೊಲೀಸ್ ಸಿಬ್ಬಂಧಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇನ್ನು 500 ಜನ ಹೋಗಾರ್ಡ್, 30 ಕೆಎಸ್ಆರ್ಪಿ ತುಕಡಿ, 15 ಜಿಲ್ಲಾ ಸಶಸ್ತ್ರ ದಳ, 15 ವಿಧ್ವಸಂಕ ತಪಾಸಣಾ ತಂಡ, ಬಾಂಬ್ ನಿಷ್ಕ್ರೀಯ ದಳ, ಗರುಡಾ ಫೋರ್ಸ್ ನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸುವರ್ಣ ಸೌಧದ ಸುತ್ತಮುತ್ತ 1 ಕಿ.ಮೀ ವ್ಯಾಪ್ತಿಯಲ್ಲಿ ಇಂದಿನಿಂದ ನವೆಂಬರ್ 24ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

0

Leave a Reply

Your email address will not be published. Required fields are marked *