ಇಂಧನ ಬೆಲೆ ಏರಿಕೆ ಬರೆ

ದೆಹಲಿ: ದೇಶಾದ್ಯಂತ ಇಂಧನ ದರದಲ್ಲಿ ಏರಿಕೆ ಮುಂದುವರೆದಿದ್ದು, ದೆಹಲಿಯಲ್ಲಿ ಪೆಟ್ರೋಲ್ ದರ 10 ಪೈಸೆ, ಡೀಸೆಲ್ ದರ 27 ಪೈಸೆ ಮತ್ತು ಮುಂಬೈನಲ್ಲಿ ಪೆಟ್ರೋಲ್ ದರ 9 ಪೈಸೆ ಮತ್ತು ಡೀಸೆಲ್ ದರ 29 ಪೈಸೆ ಏರಿಕೆಯಾಗಿದೆ. ಈ ಮೂಲಕ ಸತತ ಮೂರು ತಿಂಗಳಿಂದ ಇಂಧನ ದರದಲ್ಲಿ ನಿರಂತರ ಏರಿಕೆಯಾದಂತಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 82.36 ರೂಪಾಯಿ, ಡೀಸೆಲ್ ದರ 74.62 ರೂಪಾಯಿಯಾದರೆ, ಮುಂಬೈನಲ್ಲಿ ಪೆಟ್ರೋಲ್ ದರ 87.82 ರೂಪಾಯಿ ಮತ್ತು ಪೆಟ್ರೋಲ್ ದರ 78.22 ರೂಪಾಯಿಗೆ ಏರಿಕೆಯಾಗಿದೆ.

0

Leave a Reply

Your email address will not be published. Required fields are marked *