ಅವಧಿಗೂ ಮುನ್ನವೇ ಮಾರುಕಟ್ಟೆಗೆ ಹಣ್ಣುಗಳ ರಾಜನ ಎಂಟ್ರಿ…

ಬೇಸಿಗೆ ಕಾಲ ಬಂತದ್ರೆ ಸಾಕು ನಮ್ ಉದ್ಯಾನನಗರಿಯಲ್ಲಿ ಅವನದ್ದೆ ದರ್ಬಾರ್… ಕೆ.ಆರ್ ಮಾರ್ಕೆಟ್, ರಸೆಲ್ ಮಾರ್ಕೆಟ್ , ಮಲ್ಲೇಶ್ವರಂ ಸೇರಿದಂತೆ ನಗರದ ಎಲ್ಲೆಲ್ಲೂ ಅವನದ್ದೇ ಮಾತು.. ಒಂಚೂರ್ ಬಾಯಲ್ಲಿ ನೀರು… ಹಣ್ಣುಗಳ ರಾಜ ಮಾವಿನ ಹಣ್ಣು ಬೆಂಗಳೂರಿಗೆ ಲಗ್ಗೆಯಿಟ್ಟಿದೆ. ನಗರದ ಪ್ರತಿಯೊಂದು ಮಾರುಕಟ್ಟೆಯಲ್ಲೂ ಈಗ ಮಾವಿನ ಮಹಾರಾಜನ ದರ್ಬಾರ್ ಶುರುವಾಗಿದೆ ಎಲ್ಲರ ಬಾಯಲ್ಲೂ ನೀರೂರಿಸುತ್ತಿದೆ. ಕಳೆದ ವರ್ಷ ಇಳುವರಿ ಕಡಿಮೆ ಇದ್ದ ಕಾರಣ ಮಾವಿನ ಹಣ್ಣುಗಳು ಕಡಿಮೆ ಇದ್ದವು. ಅದ್ರೆ ಈ ಬಾರಿ ಸೀಸನ್ ಗೆ 2 ತಿಂಗಳು ಬಾಕಿ ಇರೋ ಮುಂಚೆಯೇ ಮಾವು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ..  ಮಾವು ಅಂದ್ರೆ ಎಲ್ಲರಿಗೂ ಅಚ್ಚು-ಮೆಚ್ಚು ‘ಕೆಲವರ್ರೆಂತು ಮಾವಿನ ಹಣ್ಣನ್ನು ತಿನ್ನೊಕೆ ಸೀಸನ್ ಬರೊದನ್ನೆ ಕಾಯ್ತ ಇರ್ತಾರೆ.. ಆದ್ರೆ ಈ ಬಾರಿ ಮಾವು ಮಾರ್ಕೆಟ್ ಗೆ ಬೇಗ ಬಂದಿದೆ ಆದ್ರೆ ಬೆಲೆ ಸ್ವಲ್ಪ ಹೆಚ್ಚಾಗಿದೆ.
.
ಮಾವಿನ ಹಣ್ಣು 1 ಕೆಜಿಗೆ ದರ
ಸಿಂಧೂರ 100 ರೂಪಾಯಿ
ರಸಪುರಿ 180
ಅಲ್ಫೋನ್ಸ್ 250
ಬಾದಾಮಿ 150

ಇನ್ನು ರಸಪುರಿ,ಬಾದಾಮಿ, ಸಿಂಧೂರಮಾವು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸಿಗ್ತಾಯಿದೆ. ಈ ಹಣ್ಣುಗಳು ಮನಾಲಿ, ಗುಜುರಾತ್, ಕಲ್ಕತ್ತ, ಮುಂಬೈ ಹೀಗೆ ನಾನಾ ಕಡೆಯಿಂದ ಬರ್ತಾಯಿದ್ದು ಹಣ್ಣಿನ ಬೆಲೆ ಜಾಸ್ತಿ ಯಿದ್ರು ಕೂಡ ಕೊಂಡು ಕೊಳ್ಳೊರ ಸಂಖ್ಯೆಯೇನು ಕಡಿಮೆ ಆಗಿಲ್ಲ…….

0

Leave a Reply

Your email address will not be published. Required fields are marked *