ಮಾರ್ಚ್ 14 ರಿಂದ ಕಟ್ಟಡ ಕಾರ್ಮಿಕರಿಗೆ ಸಿಗಲಿದೆ ಇಂದಿರಾ ಪಾಸ್ ಭಾಗ್ಯ . … !

ವಿಧಾನಸಭೆ ಚುನಾವಣೆ ಬೆನ್ನಲೇ ಮತದಾರರನ್ನ ಸೆಳೆಯಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ನೀತಿ ಸಂಹಿತೆ ಆತಂಕದಿಂದ ಮಾ 14 ರಿಂದ ಇಂದಿರಾ ಪಾಸ್ ವಿತರಣೆ ಮಾಡಲು ಸಾರಿಗೆ ಸಚಿವರು ಮುಂದಾಗಿದ್ದಾರೆ. ಕಡಿಮೆ ದರದಲ್ಲಿ ಕಟ್ಟಡ ಕಾರ್ಮಿಕ ಮಹಿಳೆಯರಿಗೆ ಪಾಸ್ ನೀಡುತ್ತಿದ್ದು, ಬಿಎಂಟಿಸಿ ಯಲ್ಲಿ ಇಂದಿರಾ ಬ್ರ್ಯಾಂಡ್ ಹವಾ ಆರಂಭವಾಗುತ್ತಿದೆ.ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರ ಓಲೈಕೆಗೆ ಮುಂದಾಗಿರುವ ಸರ್ಕಾರ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಇಂದಿರಾ ಪಾಸ್ ನೀಡಲು ಮುಂದಾಗಿದೆ. ನಗರದ ಎಲ್ಲಾ ವಾರ್ಡ್​ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆದು ಜನಸಾಮಾನ್ಯರ ಪ್ರೀತಿ ಪಾತ್ರಕ್ಕೆ ಕಾರಣವಾದ ಸರ್ಕಾರ ಮಾರ್ಚ್ 14 ರಿಂದ ಇಂದಿರಾ ಹೆಸರಲ್ಲೇ ಇಂದಿರಾ ಪಾಸ್ ಗಳನ್ನ ಬಿಎಂಟಿಸಿ ವಿತರಣೆ ಮಾಡಲಿದೆ.

ಇಂದಿರಾ ಬ್ರ್ಯಾಂಡ್ ಹೆಸರಿನಲ್ಲಿ ಬಿಎಂಸಿಯಲ್ಲಿ ಇಂದಿರಾ ಪಾಸ್ ಶುರುವಾಗಲಿದೆ. ನಗರದಲ್ಲಿ ಮೆಟ್ರೋ ಸೇವೆ ನಾಲ್ಕು ದಿಕ್ಕಿನಲ್ಲಿ ಆರಂಭವಾದ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಭಾರಿ ಪ್ರಯಾಣದಲ್ಲಿ ಇಳಿಕೆಯಾಗಿದ್ದು, ಪ್ರಯಾಣಿಕರನ್ನ ಸೆಳೆಯಲು ಫ್ಲಾನ್ ಮಾಡಿ ಇಂದಿರಾ ಪಾಸ್ ವಿತರಣೆಗೆ ಮುಂದಾಗಿದೆ. ನಗರದ ಗಾಮೇಂಟ್ಸ್​ ಕಾರ್ಖಾನೆಗಳಿಗೆ ಹೋಗುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಿಗಾಗಿ ಇಂದಿರಾ ಪಾಸ್ ನ್ನ ಪರಿಚಯ ಮಾಡಲಾಗುತ್ತಿದೆ. ನಗರದಲ್ಲಿ 775 ಗಾರ್ಮೆಂಟ್ಸ್ ಕಾರ್ಖಾನೆಗಳಿದ್ದು, 2.50 ಲಕ್ಷದಿಂದ 3 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಶೇ 80 ರಷ್ಟು ಮಹಿಳೆರೇ ಆಗಿದ್ದಾರೆ. ಇವರಲ್ಲಿ ಹೆಚ್ಚಿನವರು ಕೆಲಸಕ್ಕೆ ಹೋಗಲು ಖಾಸಗೀ ಟೆಂಪೋ ಟ್ರಾವೆಲರ್​​ಗಳನ್ನು ನೆಚ್ಚಿಕೊಂಡುತ್ತಾರೆ. ಆದ್ದರಿಂದ ಮಹಿಳೆಯರ ಸುರಕ್ಷತೆಗೂ ಗಮನ ಕೊಟ್ಟು 30 ರಿಂದ 40ಕ್ಕು ಹೆಚ್ಚು ಇಂದಿರಾ ಬಸ್​​​ಗಳನ್ನು ಓಡಿಸಿ ಇಂದಿರಾ ಪಾಸ್ ವಿತರಣೆಗೆ ಮುಂದಾಗಿದ್ದೇವೆ.

ಇನ್ನು ಬೆಂಗಳೂರು ನಗರದ ಆಯ್ದ ಪ್ರದೇಶಗಳಲ್ಲಿ ಇಂದಿರಾ ಸಾರಿಗೆ ಶೀಘ್ರದಲ್ಲೇ ಬಸ್ ಸೇವೆ ಆರಂಭವಾಗಲಿದ್ದು, ಬಿಎಂಟಿಸಿಯೇ ಇದರ ಉಸ್ತುವಾರಿ ನೋಡಿಕೊಳ್ಳಲಿದೆ.. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ನಗರದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ‘ಅಟಲ್ ಸಾರಿಗೆ’ಯನ್ನು ಆರಂಭಿಸಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ‘ ಇಂದಿರಾ ಪಾಸ್ ಹಾಗೂ ಇಂದಿರಾ ಸಾರಿಗೆ’ ಸೇವೆ ಆರಂಭಿಸುತ್ತಿರುವುದು ಅಟಲ್​ ಸಾರಿಗೆಗೆ ಟಾಂಗ್​ ಕೊಡುವಂತಿದೆ.ಪ್ರತಿ ಬಾರಿ ಆಯಾ ಸರ್ಕಾರದ ಅವಧಿಯಲ್ಲಿ ಒಬ್ಬರ ಹೆಸರಿನಲ್ಲಿ ನಾನಾ ಯೋಜನೆಗಳನ್ನ ಜಾರಿ ಮಾಡುತ್ತೆ . ಆದರೆ ಸರ್ಕಾರದ ಅಧಿಕಾರ ಮುಗಿದ ಮೇಲೆ ಆ ಯೋಜನೆ ಕಾಣುವುದೇ ಇಲ್ಲ .. ಆದರೆ ಇಂದಿರಾ ಪಾಸ್ ಹಾಗೂ ಇಂದಿರಾಬಸ್ ಏನು ಆಗುತ್ತೋ ಗೊತ್ತಿಲ್ಲ. ಸರ್ಕಾರ ಜನಸ್ನೇಹಿಗೂ ಅಥವಾ ಜನಪ್ರಚಾರಕ್ಕೂ ಅಂತ ಕಾಲವೇ ಉತ್ತರ ನೀಡಲಿದೆ..

ಮಂಜುನಾಥ್ ಹೊಸಹಳ್ಳಿ ಸುದ್ದಿಟಿವಿ ಬೆಂಗಳೂರು..

0

Leave a Reply

Your email address will not be published. Required fields are marked *