ಸುಖನಿದ್ರೆ ನಿಮ್ದಾಗ್ಬೇಕು ಅಂದ್ರೆ ಹೀಗೆ ಮಾಡಿ

ಪ್ರತಿದಿನದ ಕೆಲಸದ ಒತ್ತಡ, ಮಾನಸಿಕ ಗೊಂದಲಗಳು ಹೀಗೆ ಹಲವಾರು ಕಾರಣಗಳಿಂದ ನಿದ್ರೆ ಬರುತ್ತಿಲ್ಲವೆಂದು ರಾತ್ರಿಯೆಲ್ಲಾ ಒದ್ದಾಡುವವರು ಸಾಕಷ್ಟು ಜನ ಇದ್ದಾರೆ. ಕೆಲವರಿಗಂತೂ ತಡರಾತ್ರಿ ಮಲಗುವುದೇ ಅಭ್ಯಾಸ ಆಗಿರುತ್ತೆ. ನಿದ್ದೆ ಬರುತ್ತಿಲ್ಲವೆಂದು ಒದ್ದಾಡುವ ಬದಲು ನಿಮ್ಮ ಆಹಾರ ಕ್ರಮದಲ್ಲಿ ಕೊಂಚ ಬದಲಾವಣೆ ತಂದುಕೊಂಡು ಪ್ರತಿದಿನ ಸುಖ ನಿದ್ರೆಗೆ ಜಾರಿ. ಹಾಗಾದರೆ ಯಾವ ಆಹಾರವನ್ನು ಸೇವಿಸಬೇಕು.

ಬಾಳೆ ಹಣ್ಣು
ರಾತ್ರಿ ಮಲಗುವ ಮುಂಚೆ ಬಾಳೆ ಹಣ್ಣು ತಿಂದು ಹಾಲು ಕುಡಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಬಾಳೆ ಹಣ್ಣಿನಲ್ಲಿ ಪೋಟ್ಯಾಷಿಯಂ ಮತ್ತು ಮ್ಯಾಗ್ನಿಶಿಯಂ ಅಂಶ ಸಾಕಷ್ಟಿದ್ದು, ಇದು ಮಾಂಸ ಖಂಡಗಳು ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಇದರಿಂದ ಸುಖ ನಿದ್ರೆ ನಿಮ್ಮದಾಗುತ್ತದೆ.

ಚೆರ್ರಿ ಹಣ್ಣು
ಚೆರ್ರಿ ಹಣ್ಣಿನಲ್ಲಿ ಮೆಲಟಿನ್ ಅಂಶ ಹೇರಳವಾಗಿರುತ್ತದೆ. ಇದು ನಮ್ಮ ನಿದ್ರೆಯ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಪ್ರತಿ ನಿತ್ಯ ಇದರ ಜ್ಯೂಸ್ ಕುಡಿದರೆ ಸುಖ ನಿದ್ರೆ ಮಾಡಬಹುದು.

ಬಾದಾಮಿ
ರಾತ್ರಿ ಮಲಗುವ ಮುಂಚೆ ಬಾದಾಮಿ ತಿನ್ನುವುದು ಒಳ್ಳೆಯದು. ಬಾದಾಮಿಯಲ್ಲಿರುವ ಮ್ಯಾಗ್ನಿಶಿಯಂ ಅಂಶ ನಮ್ಮನ್ನು ಸುಖ ನಿದ್ರೆಗೆ ದೂಡುವುದಲ್ಲದೆ, ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತದೆ.

ಸಿಹಿ ಗೆಣಸು
ಸಿಹಿ ಗೆಣಸಿನಲ್ಲಿ ಸಾಕಷ್ಟು ಕಾರ್ಬೋ ಹೈಡ್ರೇಟ್ ಮತ್ತು ಪೊಟೇಶಿಯಂ ಇರುತ್ತದೆ. ಇದು ಮಾಂಸಖಂಡಗಳು ರಿಲ್ಯಾಕ್ಸ್ ಆಗುವಂತೆ ಮಾಡುತ್ತವೆ ಹಾಗೂ ನೀವು ಸುಖ ನಿದ್ರೆ ಮಾಡಬಹುದು.

0

Leave a Reply

Your email address will not be published. Required fields are marked *