ಸ್ತನ್ಯಪಾನ ಮಾಡಿಸುವಾಗ ತ್ಯಜಿಸಬೇಕಾದ ಆಹಾರ ಪದಾರ್ಥಗಳು

ಸ್ತನ್ಯಪಾನದಿಂದ ಮಗುವಿಗೆ ಸೋಂಕುಗಳಿಂದ ರಕ್ಷಣೆ ಸಿಗುವುದಷ್ಟೇ ಅಲ್ಲದೆ, ತಾಯಿ ಮಗುವಿನ ನಡುವೆ ಉತ್ತಮವಾದ ಬಾಂಧವ್ಯ ವೃದ್ಧಿಯಾಗುತ್ತದೆ. ಮಹಿಳೆಯರಿಗೆ ಗರ್ಭಧಾರಣೆ ಮತ್ತು ಹೆರಿಗೆಯ ನಂರತದ ಘಟ್ಟವೇ ಜನಿಸಿದ ಮಗುವಿಗೆ ಸ್ತನ್ಯಪಾನ ಮಾಡಿಸುವುದು. ಈ ಸಂದರ್ಭದಲ್ಲಿ ತಾಯಿಯು ಯಾವುದೇ ಮಾನಸಿಕ ತೊಂದರೆಗಳಿಗೆ ತೊಡಗಿರಬಾರದು ಮತ್ತು ಸ್ತನ್ಯಪಾನ ಮಾಡಿಸುವ ಸಮಯದಲ್ಲಿ ತಾಯಿಯು ಯಾವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಮತ್ತು ಯಾವ ಆಹಾರವನ್ನು ತ್ಯಜಿಸಬೇಕು ಎಂಬುದನ್ನು ಪ್ರಮುಖವಾಗಿ ನೆನಪಿನಲ್ಲಿಡಬೇಕಾಗುತ್ತದೆ.

1. ದಿನಕ್ಕೆ ಒಂದರಿಂದ ಎರಡು ಲೋಟ ಕಾಫಿ ಕುಡಿಯುವುದು ಉತ್ತಮವಾಗಿರುತ್ತದೆ. ಅಧಿಕವಾದ ಕೆಫೀನ್ ಸೇವನೆ ನಿಮ್ಮ ಮಗುವಿನ ನಿದ್ರಾಹೀನತೆಗೆ ಹೆಚ್ಚು ಹಸ್ತಕ್ಷೇಪ ಮಾಡಬಹುದು. ಕೆಫೀನ್​​ಗಳು ಕೆಲವು ಸೋಡಾಗಳು, ಚಹಾ, ಮತ್ತು ಔಷಧಿಗಳಲ್ಲಿಯೂ ಸಹ ಕಂಡುಬರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

2. ಒಂದಕ್ಕಿಂತ ಹೆಚ್ಚು ಪಾನೀಯವು ನಿಮ್ಮ ರಕ್ತದ ಆಲ್ಕೋಹಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮದ್ಯವು ನಿಮ್ಮ ಹಾಲಿಗೆ ಸೇರುತ್ತದೆ.

3. ಬೆಳ್ಳುಳ್ಳಿ, ಸೌತೆಕಾಯಿ, ಮೆಣಸು, ದಾಲ್ಚಿನ್ನಿ, ಮತ್ತು ಕರಿಮೆಣಸು ಮುಂತಾದ ಮಸಾಲೆ ಪದಾರ್ಥಗಳನ್ನು ಹಾಲುಣಿಸುವ ಸಮಯದಲ್ಲಿ ತಡೆಗಟ್ಟಬೇಕು. ಇವು ಮಗುವಿನಲ್ಲಿ ಗ್ಯಾಸ್​​ ಸಮಸ್ಯೆಗಳಿಗೆ ಕಾರಣವಾಗಬಹುದು, ಉಬ್ಬರದ ಮತ್ತು ಉದರಶೂಲೆ ಲಕ್ಷಣಗಳನ್ನು ಉಂಟುಮಾಡಬಹುದು.

4. ಕಲುಷಿತವಾಗಿರುವ ನೀರಿನಿಂದ ಸಿಹಿನೀರಿಗೆ ಸೇರಿಸಿದ ಮೀನುಗಳನ್ನು ಸೇವಿಸಬೇಡಿ. ಮಾಂಸವನ್ನು ಸೇವಿಸುವಾಗ, ಅವುಗಳಲ್ಲಿನ ಕೊಬ್ಬಿನ ಭಾಗಗಳನ್ನು ಕತ್ತರಿಸಿ ನಂತರ ಅಡುಗೆ ಮಾಡಿ.

5. ಬೆಳ್ಳುಳ್ಳಿ ರೀತಿಯ ಬಲವಾದ ಸುವಾಸನೆಯ ಆಹಾರಗಳು ಎದೆ ಹಾಲಿನ ರುಚಿಯನ್ನು ಬದಲಾಯಿಸುತ್ತವೆ. ನಿಮ್ಮ ಮಗುವು ಎದೆ ಹಾಲು ಕುಡಿಯುವುದನ್ನುತಪ್ಪಿಸುವುದನ್ನು ಪ್ರಾರಂಭಿಸಿದರೆ, ನೀವು ಬಲವಾದ ಸುವಾಸನೆಯ ಆಹಾರವನ್ನು ತಿಂದಿದ್ದೀರಾ ಎಂದರ್ಥ ಮತ್ತು ಭವಿಷ್ಯದಲ್ಲಿ ಅದನ್ನು ಪುನಾರ್​​​ರಾಂಭಿಸದಂತೆ ನೋಡಿಕೊಳ್ಳುವುದು ಉತ್ತಮ.

0

Leave a Reply

Your email address will not be published. Required fields are marked *