ರಾಜ್​​ಕೋಟ್​​ನಲ್ಲಿ ಇಂದಿನಿಂದ ಮೊದಲ ಟೆಸ್ಟ್: ಟೀಮ್​ ಇಂಡಿಯಾ ಸವಾಲು ಎದುರಿಸಲಿದೆ ವಿಂಡೀಸ್​​

ಟೀಮ್​ ಇಂಡಿಯಾ ಹಾಗೂ ವೆಸ್ಟ್​​ ಇಂಡಿಸ್​ ತಂಡಗಳು ಇಂದಿನಿಂದ ರಾಜಕೋಟ್​​ ಅಂಗಳದಲ್ಲಿ ಮೊದಲ ಟೆಸ್ಟ್​ ಪಂದ್ಯ ಆಡಲು ಅಖಾಡಕ್ಕೆ ಇಳಿಯಲಿದೆ. ಈ ಪಂದ್ಯ ಟೀಮ್​ ಇಂಡಿಯಾ ಪಾಲಿಗೆ ಮಹತ್ವದಾಗಿದೆ. ವಿದೇಶದಲ್ಲಿ ಕಂಡ ಸೋಲಿನ ಕಹಿಯನ್ನು ಮರೆಯಲು ಈ ಸರಣಿ ನೆರವಾಗಬೇಕಿದೆ. ಬ್ಲ್ಯೂ ಬಾಯ್ಸ್​​ ತಂಡ ತವರಿನಲ್ಲಿ ಅಬ್ಬರದ ಪ್ರದರ್ಶನ ನೀಡಿ, ಪ್ರವಾಸಿ ವಿಂಡೀಸ್​ ತಂಡಕ್ಕೆ ಶಾಕ್ ನೀಡುವ ಪ್ಲಾನ್ ಮಾಡಿಕೊಂಡಿದೆ. ಅಂದಹಾಗೆ ಈ ಸರಣಿಯ ಮೊದಲ ಪಂದ್ಯದಲ್ಲಿ ಹೊಸ ಜೊಡಿ ಇನ್ನಿಂಗ್ಸ್​ ಆರಂಭಿಸುವ ಸಾಧ್ಯತೆ ಇದೆ.

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಟೀಮ್​ ಇಂಡಿಯಾ ಬಲಾಡ್ಯವಾಗಿದೆ. ಟೀಮ್​ ಇಂಡಿಯಾ ಭಾರತದಲ್ಲಿ ಉತ್ತಮ ಆಟ ಆಡುವ ವಿಶ್ವಾಸ ಹೊಂದಿದ್ದು, ತನ್ನ ಸರಣಿ ಗೆಲುವಿನ ಸಂಖ್ಯೆ ಏರಿಸಿಕೊಳ್ಳಲು ಯೋಜನೆ ಮಾಡಿಕೊಂಡಿದೆ. ಈ ವರೆಗೆ ಆಡಿದ 94 ಪಂದ್ಯಗಳಲ್ಲಿ ಟೀಮ್​ ಇಂಡಿಯಾ 18 ರಲ್ಲಿ ಗೆಲುವು ಸಾಧಿಸಿದ್ರೆ, 30 ರಲ್ಲಿ ಸೋಲು ಕಂಡಿದ್ದು, 46 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಕಳೆದ 15 ವರ್ಷಗಳಿಂದ ವಿಂಡೀಸ್​ ಭಾರತದ ವಿರುದ್ಧ ಒಂದೇ ಒಂದು ಟೆಸ್ಟ್​​ ಗೆದ್ದಿಲ್ಲ.

ಟೀಮ್​ ಇಂಡಿಯಾದ ಕಾಯಂ ಓಪನರ್ಸ್​​ಗಳಾದ ಮುರಳಿ ವಿಜಯ್​ ಹಾಗೂ ಶಿಖರ್​ ಧವನ್​ರಿಗೆ ಟೆಸ್ಟ್​​​ನಿಂದ ವಿಶ್ರಾಂತಿ ನೀಡಲಾಗಿದೆ. ಈ ಪ್ಲೇಯರ್ಸ್​​ ಬದಲಿಗೆ ಇಂದಿನ ಪಂದ್ಯದಲ್ಲಿ ಕೆ.ಎಲ್​ ರಾಹುಲ್​ ಹಾಗೂ ಮುಂಬೈನ ಪೃಥ್ವಿಶಾ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಮೂಲಕ ಟೆಸ್ಟ್​​ ಟೀಮ್​​ ಪರ ಮತ್ತೊಂದು ಜೋಡಿ ಇನ್ನಿಂಗ್ಸ್​ ಆರಂಭಿಸಲಿದೆ. ಆಡುವ 12ರ ಬಳಗದಲ್ಲಿ ಪೃಥ್ವಿ ಸ್ಥಾನ ಪಡೆದಿದ್ದು, ಅಂಗಳಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್​ ಪೂಜಾರ್​​, ಅಜಿಂಕ್ಯ ರಹಾನೆ, ಹಾಗೂ ನಾಯಕ ವಿರಾಟ್​ ಕೊಹ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಬೇಕಿದೆ. ಅಂದಾಗ ಮಾತ್ರ ವಿಂಡೀಸ್​ ಬೌಲರ್​​ಗಳ ಹೆಡೆ ಮುರಿ ಕಟ್ಟಿ ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಗುತ್ತದೆ.

ಕಳೆದ ಕೆಲವು ವರ್ಷಗಳಿಂದ ಟೀಮ್​ ಇಂಡಿಯಾದ ಬೌಲಿಂಗ್​ ಬಲಿಷ್ಠವಾಗುತ್ತಾ ಇದೆ. ಕೊಹ್ಲಿ ಬ್ರಿಗೇಡ್​ ಪರ ಹೊಸ ಚೆಂಡನ್ನು ಉಮೇಶ್​ ಯಾದವ್​​, ಮೊಹಮ್ಮದ್​ ಶಮಿ, ಹಾಗೂ ಶಾರ್ದೂಲ್​ ಠಾಕೂರ್​​ ಹಂಚಿಕೊಳ್ಳಲಿದ್ದಾರೆ. ಒಂದು ವೇಳೆ ಶಾರ್ದೂಲ್​ ಸ್ಥಾನ ಪಡೆಯುವಲ್ಲಿ ವಿಫಲರಾದ್ರೆ, ಕುಲ್ದೀಪ್​​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇನ್ನು ಇಂಗ್ಲೆಂಡ್​ ಪ್ರವಾಸದಲ್ಲಿ ಮಂಕಾಗಿದ್ದ ಸ್ಪಿನ್​ ಬೌಲರ್​​ ಅಶ್ವಿನ್​ ಅಭ್ಯಾಸ ಸ್ಪಿನ್​ ದರ್ಬಾರ್​ ನಡೆಸುವ ಪ್ಲಾನ್​ ಹೆಣೆದುಕೊಂಡಿದ್ದಾರೆ. ಇವರಿಗೆ ಜಡ್ಡು ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡುವ ಸಾಧ್ಯತೆ ಇದೆ.

ಇನ್ನು ಇಂಡಿಯಾ ಪ್ರವಾಸವನ್ನು ಶುಭಾರಂಭ ಮಾಡುವ ಇರಾದೆ ವಿಂಡೀಸ್​ ತಂಡದ್ದಾಗಿದೆ. ಜಾಸನ್​ ಹೋಲ್ಡರ್​ ಪಡೆ, ಕೊಹ್ಲಿ ಪಡೆಯ ಯೋಜನೆಯನ್ನು ಬುಡಮೇಲು ಮಾಡುವ ಇರಾದೆಯನ್ನು ಹಾಕಿಕೊಂಡಿದೆ. ವಿಂಡೀಸ್​ ನೆಲದಲ್ಲೂ ಸ್ಟಾರ್ ಪ್ಲೇಯರ್​​ಗಳ ದಂಡೇ ಇದ್ದು, ಬ್ಲ್ಯೂ ಬಾಯ್ಸ್ ಪ್ಲಾನ್​ ಉಲ್ಟಾ ಮಾಡುವ ಅನುಭವಿ ಆಟಗಾರರು ಕೆರಿಬಿಯನ್​ ತಂಡದಲ್ಲಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್​​ನಲ್ಲಿ ವಿಂಡೀಸ್​ ಬಲಿಷ್ಠವಾಗಿದ್ದು, ಗೆಲುವಿನ ಆರಂಭದ ಕನಸು ಕಾಣ್ತಾ ಇದೆ. ಪಿಚ್​​ ಕೊಂಚ ಸ್ಪಿನ್​ ಬೌಲರ್​​ಗಳಿಗೆ ನೆರವು ನೀಡಿದ್ರೂ ಸಹ, ಎರಡುವರೆ ದಿನಗಳ ಕಾಲ ಬ್ಯಾಟ್ಸ್​​ಮನ್ಸ್​​ ಆರ್ಭಟ ನಡೆಸಬಹುದು. ಇಂದಿನ ಪಂದ್ಯದಲ್ಲಿ ಟಾಸ್​ ಯಾರ ಪರ ವಾಲುತ್ತದೆ. ತಂಡದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಕಾಣಬಹುದು ಎಂಬುದರ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ.

0

Leave a Reply

Your email address will not be published. Required fields are marked *