ಮೊದಲ ದಿನ ವಿಂಡೀಸ್​ ಬ್ಯಾಟ್ಸ್​ಮನ್​ಗಳ ಅಬ್ಬರ: ಬೃಹತ್​ ಮೊತ್ತದತ್ತ ಕೆರೆಬಿಯನ್​ ಪಡೆ

ಮುತ್ತಿನನಗರಿ ಹೈದ್ರಬಾದ್​ನಲ್ಲಿ ನಿನ್ನೆ ಆರಂಭವಾದ ಟೀಮ್ ಇಂಡಿಯಾ- ವಿಂಡೀಸ್​ ನಡುವಿನ ಪಂದ್ಯದಲ್ಲಿ ಟಾಸ್​ ಕೆರೆಬಿಯನ್ನರ ಪಾಲಾಯ್ತು. ನಾಯಕ ಜಾಸನ್ ಹೋಲ್ಡರ್​ ಮೊದಲು ಬ್ಯಾಟಿಂಗ್ ಆಯ್ದುಕೊಂಡ್ರು. ಇನ್ನಿಂಗ್ಸ್​ ಆರಂಭಿಸಿದ ವಿಂಡೀಸ್ ಅಂದುಕೊಂಡ ಆರಂಭ ಸಿಗಲಿಲ್ಲ. ಆರಂಭಿಕರಾದ ಕ್ರೈಗ್ ಬ್ರಾಥ್​ವೇಟ್​ ಹಾಗೂ ಕಿಯಾರನ್​ ಪಾವೆಲ್​ ಉತ್ತಮ ಜೊತೆಯಾಟದ ಭರವಸೆ ಮೂಡಿಸಿದ್ರು. ಆದ್ರೆ 22 ರನ್​ಗಳಿಸಿದ್ದಪಾವೆಲ್​ ಸ್ಪಿನ್ನರ್ ಆರ್​. ಅಶ್ವಿನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿದ್ರು. 14 ರನ್ ಬಾರಿಸಿ ಆಡ್ತಿದ್ದ ಬ್ರಾಥ್​ವೇಟ್​ ಸ್ಪಿನ್ನರ್​ ಕುಲ್​ದೀಪ್ ಯಾದವ್​ ರ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು.

ಮೂರನೇ ವಿಕೆಟ್​ಗೆ ಶೈ ಹೋಪ್​ ಹಾಗೂ ಶಿಮ್ರಾನ್ ಹೆಟ್​ಮೈಯರ್​ ಕೆಲ ಹೊತ್ತು ಆಸರೆಯಾದ್ರು. ಈ ವೇಳೆ ಬಿಗ್ ಇನ್ನಿಂಗ್ಸ್​ ಆಡುವ ಸೂಚನೆ ನೀಡಿದ್ದ ಹೋಪ್​ಗೆ ವೇಗಿ ಉಮೇಶ್ ಯಾದವ್​ ಪೆವಿಲಿಯನ್ ದಾರಿ ತೋರಿಸಿದ್ರು. ಹೆಟ್​ಮೈಯರ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಸುನಿಲ್​ ಆ್ಯಂಬ್ರಿಸ್​ ಕೂಡ ಬೇಗನೆ ಪೆವಿಲಿಯನ್ ದಾರಿ ಹಿಡಿದ್ರು. ಸಂಕಷ್ಟದಲ್ಲಿದ್ದ ತಂಡಕ್ಕೆ ರೋಸ್ಟನ್​ ಚೇಸ್​ ಹಾಗೂ ನಾಯಕ ಶೇನ್ ಡೌರಿಚ್​ ತಂಡಕ್ಕೆ ನೆರವಾದ್ರು. ವಿರಾಟ್​ ಪಡೆಯ ಬೌಲರ್​ಗಳನ್ನ ಎಚ್ಚರಿಕೆಯಿಂದ ಎದುರಿಸಿದ್ರು. ಲೂಸ್​ ಬಾಲ್​ಗಳಿಗೆ ಬೌಂಡರಿಯ ದರ್ಶನ ಮಾಡಿಸುವುದರ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದ್ರು. ಆರನೇ ವಿಕೆಟ್​ಗೆ 69 ರನ್ ಕಲೆಹಾಕುವುದರ ಮೂಲಕ ತಂಡಕ್ಕೆ ಚೇತರಿಕೆ ನೀಡಿದ್ರು. ಈ ಜೊತೆಯಾಟದ ವೇಳೆ ಚೇಸ್​​​ ಅರ್ಧಶತಕದ ಗಡಿ ತಲುಪಿದರು.

ಏಳನೇ ವಿಕೆಟ್​ಗೆ ಚೇಸ್​ ಹಾಗೂ ನಾಯಕ ಜಾಸನ್​ ಹೋಲ್ಡರ್​ ಜೊತೆಯಾದ್ರು. ಭಾರತದ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ ವೇಗದ ಆಟದ ಮೂಲಕ ತಂಡದ ಮೊತ್ತವನ್ನ ಹಿಗ್ಗಿಸಿತು. ಹೋಲ್ಡರ್​ ಅರ್ಧಶತಕ ಪೂರೈಸಿಕೊಂಡ್ರು. ಈ ಜೊತೆಯಾಟಕ್ಕೆ ಬ್ರೇಕ್​ ಹಾಕಲು ಕೊಹ್ಲಿ ಹಲವು ಪ್ರಯೋಗಗಳನ್ನ ಪ್ರಯೋಗಿಸಿದ್ರು. ಆದ್ರೆ ದಿನದಾಟ ಮುಕ್ತಾಯಕ್ಕೆ ಕೆಲವೇ ನಿಮಿಷಗಳು ಬಾಕಿಯಿದ್ದಾಗ ಹೋಲ್ಡರ್​​ ಉಮೇಶ್​ ಯಾದವ್​ ಎಸೆತದಲ್ಲಿ ಕೀಪರ್ ಪಂತ್​ಗೆ ಕ್ಯಾಚ್ ನೀಡಿದರು.

ಮೊದಲ ದಿನದಾಟದ ಅಂತ್ಯಕ್ಕೆ ವೆಸ್ಟ್​ ಇಂಡೀಸ್​ 7 ವಿಕೆಟ್​ ನಷ್ಟಕ್ಕೆ 295 ರನ್​ ಕಲೆಹಾಕಿದೆ. ಚೇಸ್​ 98 ರನ್​ಗಳಿಸಿ ಶತಕದ ಹೊಸ್ತಿಲಲ್ಲಿ ಬಂದು ನಿಂತಿದ್ದು. ನಾಳೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೀಮ್ ಇಂಡಿಯಾ ಪರ ಉಮೇಶ್​ ಯಾದವ್​ 3, ಕುಲ್​ದೀಪ್ ಯಾದವ್​ 3, ಆರ್​​ ಅಶ್ವಿನ್ 1 ವಿಕೆಟ್​ ಪಡೆದ್ರು, ಎರಡನೇ ದಿನ ಮತ್ತಷ್ಟು ರನ್​ಗಳಿಸಿ ಭಾರತದೆದುರ ಬೃಹತ್​​ ಮೊತ್ತ ಇಡುವ ಯೋಜನೆಯನ್ನ ಹೋಲ್ಡರ್ ಪಡೆ ಇಟ್ಟುಕೊಂಡಿದೆ.

0

Leave a Reply

Your email address will not be published. Required fields are marked *