ಕನ್ಯತ್ವ ಪರೀಕ್ಷೆ ವಿರೋಧಿಸಿದ ಮಹಿಳೆಗೆ ಬಾಯ್ಕಾಟ್ ಬಿಸಿ

ಚಿತ್ರ ಕೃಪೆ: ANI

ಮುಂಬೈ: ನವರಾತ್ರಿ ದಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿರುವ ಕುರಿತು ಪಿಂಪ್ರಿ-ಚಿಂಚವಾಡದಲ್ಲಿ ದೂರು ನೀಡಿದ್ದೇನೆ ಎಂದು ಐಶ್ವರ್ಯ ತಮೈಚಿಕರ್ ಹೇಳಿದ್ದಾರೆ. ತಮ್ಮ ಕಂಜನರ್​ಭಾಟ್ ಸಮುದಾಯದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕನ್ಯತ್ವ ಪರೀಕ್ಷೆ ಕಡ್ಡಾಯವಾಗಿದೆ. ಆದರೆ, ನಾನು ಈ ಆಚರಣೆಯನ್ನು ವಿರೋಧಿಸುತ್ತೇನೆ. ನನ್ನ ವಿರೋಧದಿಂದಾಗಿ ಸಮುದಾಯಕ್ಕೆ ಕೆಟ್ಟ ಹೆಸರು ಬಂದಿದಿದೆ ಎಂದು ಕೆಲವರು ಆರೋಪಿಸಿದ್ದಾರೆ.

ಕಂಜರ್​ಭಾಟ್ ಸಮುದಾಯದಲ್ಲಿ ಅಸ್ತಿತ್ವದಲ್ಲಿರುವ ಕನ್ಯತ್ವ ಪರೀಕ್ಷೆ ಮಾಡುವ ಆಚರಣೆಯನ್ನು ನಾವು ವಿರೋಧಿಸಿದ್ದೇವೆ ಎಂದು ಐಶ್ವರ್ಯ ತಮೈಚಿಕರ್ ಪತಿ ವಿವೇಕ್ ತಮೈಚಿಕರ್ ಹೇಳಿದ್ದಾರೆ. ಆಚರಣೆಯನ್ನು ವಿರೋಧಿಸಿದ್ದರಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನನ್ನ ಪತ್ನಿಯ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ. ಇದು ಸಂವಿಧಾನ ವಿರೋಧಿ ಎಂದು ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಿಂಪ್ರಿ-ಚಿಂಚಿವಾಡ್​ ಡಿಸಿಪಿ, ಕಂಜರ್​ಭಾಟ್ ಸಮುದಾಯದಲ್ಲಿ ಅಸ್ತಿತ್ವದಲ್ಲಿರುವ ಕನ್ಯತ್ವ ಪರೀಕ್ಷೆಯನ್ನು ವಿರೋಧಿಸಿದ್ದರಿಂದಾಗಿ ದಂಡಿಯಾ ಸಂಭ್ರಮಾಚರಣೆಯಲ್ಲಿ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂದು ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್​ಐಆರ್ ದಾಖಲಿಸಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತದೆ ಎಂದಿದ್ದಾರೆ.

0

Leave a Reply

Your email address will not be published. Required fields are marked *