ಕ್ರೊವೇಷಿಯಾ ದಾಟಿತು ಇತಿಹಾಸದ ಗೆರೆ

         

ಫಿಫಾ ವಿಶ್ವಕಪ್​​ನಲ್ಲಿ ಇನ್ನು ಕೇವಲ ಎರಡೇ ಪಂದ್ಯಗಳು ಬಾಕಿ ಉಳಿದಿವೆ. ಈ ಎರಡು ಪಂದ್ಯಗಳಲ್ಲಿ ಭಾನುವಾರ ನಡೆಯಲಿರುವ ಕ್ರೊವೇಷಿಯಾ ಹಾಗೂ ಫ್ರಾನ್ಸ್​ ನಡುವಿನ ಕಾಳಗ ಎಲ್ಲರ ಚಿತ್ತ ಕದ್ದಿದೆ. ಅಷ್ಟಕ್ಕೂ ಕ್ರೊವೇಷಿಯಾ ಆಟದ ಧಾಟಿಗೆ ವಿಶ್ವವೇ ಬೆರಗಾಗಿದೆ. ವಿಶ್ವಕಪ್​ ಗೆಲುವಿನ ಆಸೆ ಚಿಗುರಿಸಿರುವ ಕ್ರೊವೇಷಿಯ ತಂಡ ನಡೆದು ಬಂದ ಹಾದಿ ಇಲ್ಲಿದೆ.

ರಾತ್ರಿ ಮಲಗಿ ಬೆಳಗಾಗೋದ್ರೊಳಗೆ, ವಿಶ್ವಕ್ಕೆ ಹೊಸ ಸ್ಟಾರ್​​ ಪರಿಚಯವಾಗಿದೆ. ಎಸ್​​.. ಈ ಸ್ಟಾರ್​ ಬರೀ ತನ್ನ ಕಾಲ್ಚಳಕದಿಂದಲೇ ಎಲ್ಲರ ಚಿತ್ತ ಕದ್ದಿದೆ. ಫಿಫಾ ವಿಶ್ವಕಪ್​​ನಲ್ಲಿ ಎಲ್ಲರ ಮೂಗಿನ ಮೇಲೂ ಬೆರಳು ಇಡುವಂತೆ ಮಾಡಿದ ತಂಡ, ದಿಢೀರ್​ ಸ್ಟಾರ್​ ಗಿರಿ ಪಡೆಯಲು ಸಾಧ್ಯ ವಿಲ್ಲ ಎನ್ನೋದಕ್ಕೆ ಈ ತಂಡ ಬೆಸ್ಟ್​​ ಏಕ್ಸಾಮ್​​ಪಲ್​​. ಈ ಹಂತಕ್ಕೆ ತಲುಪಲು ನೈರುತ್ಯ ಯುರೋಪ್ ತಂಡ ಪಟ್ಟ ಕಷ್ಟ ಅಷ್ಟಿಷ್ಟಲ್ಲ. 90 ನಿಮಿಷಗಳ ಕಾಲಾ ಕೋಟ್ಯಾಂತರ, ಅಭಿಮಾನಿಗಳ ಭರವಸೆಯ ಮೂಟೆ ಹೊತ್ತು, ಸಮಯೋಚಿತ ಆಟ ಆಡಿ, ಗೋಲು ಪೆಟ್ಟಿಗೆಯಲ್ಲಿ ಚೆಂಡನ್ನು ತಲುಪಿಸಲು ಶಕ್ತಿ ಇದ್ರೆ, ಸಾಲದು ಯುಕ್ತಿನೂ ಬೇಕು. ಮೈದಾನದಲ್ಲಿ ಸಿಗುವ ಆಫ್​ ಚಾನ್ಸ್​​​ಗಳನ್ನು ಗೋಲ್​ ಆಗಿ ಪರಿವರ್ತಿಸುವ ಛಾತಿ ಆಡುವ ಹನ್ನೊಂದು ಜನ ಆಟಗಾರರಿಗೂ ಇರಬೇಕು. ಅಂದಾಗ ಮಾತ್ರ ಗೋಲುಗಳ ಸಂಖ್ಯೆಯಲ್ಲಿ ಏರಿಕೆ ಕಂಡು, ಪಂದ್ಯದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಲು ಸಾಧ್ಯ. ಈ ಹಂತಕ್ಕೆ ಒಂದು ತಂಡ ಬಂದು ನಿಲ್ಲುತ್ತದೆ ಎಂದ್ರೆ, ಸುಲಭದ ಮಾತು ಅಲ್ಲವೇ ಅಲ್ಲ. ವರ್ಷಗಳ ತಪ್ಪಸ್ಸು, ಪ್ರಯತ್ನದ ಫಲವಾಗಿಯೇ, ಇಂದು ಕ್ರೊವೇಷಿಯಾ ಅನ್ನೋ ತಂಡ, ಫುಟ್ಬಾಲ್​ ವಿಶ್ವಕಪ್​​ನಲ್ಲಿ ಇತಿಹಾಸ ನಿರ್ಮಿಸಿದೆ.

ಐದನೇ ಬಾರಿ ಫುಟ್ಬಾಲ್​ ವಿಶ್ವಕಪ್​​ಗೆ ಅರ್ಹತೆ ಪಡೆದ ತಂಡ ಇಂತಹ ಸಾಧನೆ ಮಾಡುತ್ತದೆ ಅಂದ್ರೆ, ನಂಬಲು ಕಷ್ಟ. ಫಿಫಾ 2018ರಲ್ಲಿ ಕ್ರೊವೇಷಿಯಾ ಮಾಡಿದ ಜಾದುಗೆ ಫುಟ್ಬಾಲ್​ ಅಭಿಮಾನಿಗಳ ಮನ ಮಂಜಿನಂತೆ ಕರಗಿದೆ. ಲೀಗ್​ ಹಂತದಲ್ಲೇ 2014ರ ರನ್ನರ್​ ಅಪ್​ ಅರ್ಜೆಂಟೀನಾ ತಂಡವನ್ನು ಸೋಲಿಸಿ ತನ್ನ ತಾಕತ್ತು ಪ್ರದರ್ಶಿಸಿದ ತಂಡ, ಇಷ್ಟು ಯಶಸ್ಸು ಕಾಣುತ್ತೆ ಎಂದು ಯಾರು ಅಂದು ಕೊಂಡರಿಲ್ಲ. ತಾನಾಡಿದ ಮೊದಲ ಫುಟ್ಬಾಲ್​ ವಿಶ್ವಕಪ್​​​ನಲ್ಲೇ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಕ್ರೊವೇಷಿಯಾ ತನ್ನ ತಾಕತ್ತು ಪ್ರದರ್ಶಿಸಿತ್ತು. ಆಗಿನಿಂದಲೂ ಈ ತಂಡದ ಮೇಲೆ ಫುಟ್ಬಾಲ್​ ಅಭಿಮಾನಿಗಳು ಒಂದು ಕಣ್ಣು ನೆಟ್ಟಿದ್ರು. ಆದ್ರೆ, 2002, 2006, 2014ರಲ್ಲಿ ಗುಂಪು ಹಂತದಿಂದಲೇ ಮನೆಯ ಹಾದಿ ಹಿಡಿದಿದ್ದ ತಂಡ, ಈ ಬಾರಿ ವಿಶ್ವಕಪ್​​ನಲ್ಲಿ ಆಡಿದ ಆಟ ನಿಜಕ್ಕೂ ವಿಶ್ವವನ್ನು ಚಕಿತಗೊಳಿಸಿದೆ.

ಗೋಲುಗಳ ಸಂಖ್ಯೆಯಲ್ಲಿ ಕ್ರೊವೇಷಿಯ ಬೇರೆ ತಂಡಗಳಿಗೆ ಹೋಲಿಸಿದ್ರೆ ಕಡಿಮೆ. ಆದ್ರೆ, ಅಂಗಳದಲ್ಲಿ 11 ಆಟಗಾರರ ಸಂಘಟಿತ ಆಟಕ್ಕೆ ಸ್ಟಾರ್​​ ತಂಡಗಳು ಸಹ ತಲೆ ಬಾಗಿವೆ. ಇದಕ್ಕೆ ಬೆಸ್ಟ್​ ಉದಾಹರಣೆ, ಮೊನ್ನೆ ನಡೆದ ಇಂಗ್ಲೆಂಡ್​ ವಿರುದ್ಧದ ಎರಡನೇ ಸೆಮಿಫೈನಲ್​​, ಲೈನ್ಸ್​ ಖ್ಯಾತಿಯ ಇಂಗ್ಲೆಂಡ್​ ತಂಡ ಹೇರಿದ್ದ ಒತ್ತಡವನ್ನು ಮೆಟ್ಟಿ ನಿಂತು ಆಡಿದ ಧಾಟಿಗೆ, ವಿಶ್ವವೇ ಸಲಾಂ ಎಂದಿದೆ. ಕ್ಲಾಸ್​ ಆಟ, ಶ್ರೇಷ್ಠ ರಕ್ಷಣೆ, ಸಮಯೋಚಿತ ಪಾಸ್​​, ಆಕರ್ಷಕ ಸ್ಟ್ರೈಕ್​​, ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿವೆ. ಅಲ್ಲದೆ ಫುಟ್ಬಾಲ್​ ಲೋಕದ ನವ ತಾರೆಯಾಗಿ ಕ್ರೊವೇಷಿಯಾ ಎದ್ದು ನಿಂತಿದೆ.

ಅಂದಹಾಗೆ ಕ್ರೊವೇಷಿಯಾ ಟೂರ್ನಿಯಲ್ಲಿ ತನ್ನ ಅಜೇಯ ಓಟ ಮುನ್ನಡೆಸಿದೆ. ಡಿ ಗುಂಪಿನ ಲೀಗ್​ ಹಂತದಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದು ಬೀಗಿದ್ದ ಕ್ರೊವೇಷಿಯಾ, 16ರ ಘಟ್ಟದ ಪಂದ್ಯದಲ್ಲಿ ಡೆನ್ಮಾರ್ಕ್​​ ತಂಡವನ್ನು, ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಆತಿಥೇಯ ರಷ್ಯಾ ತಂಡವನ್ನು, ಸೆಮಿಫೈನಲ್​ನಲ್ಲಿ ಟೂರ್ನಿಯ ಹಾಟ್​ ಫೆವರೀಟ್​ ಇಂಗ್ಲೆಂಡ್​ ತಂಡವನ್ನು ಮಣಿಸಿದ ಲುಕ ಮಾಡ್ರಿಕ್ ಪಡೆ ಉತ್ಸಾಹದ ಚಿಲುಮೆಯಂತೆ ಕಾಣುತ್ತಿದೆ. ಇನ್ನು ಚಾಂಪಿಯನ್​ ಎಂದು ಕರೆಸಿಕೊಳ್ಳಲು ಕ್ರೊವೇಷಿಯಾಗೆ ಬೇಕಿರೋದು ಒಂದೇ ಗೆಲುವು. ಮೈದಾನದಲ್ಲಿ ಆಡುವ 11 ಜನರು ತಮ್ಮ ಘನತೆಗೆ ತಕ್ಕ ಆಟ ಆಡಿದ್ರೆ, ಈ ಗೆಲುವು ಖಚಿತ. ರಕ್ಷಣಾ ವಿಭಾಗಕ್ಕೆ ಗೋಡೆ ರೀತಿ, ಹುಲಿಯಂತೆ ಆಕ್ರಮಣ, ಚಿರತೆಯಂತ ವೇಗ, ನರಿಯಂತೆ ಹೊಂಚು ಹಾಕಿ, ಫ್ರಾನ್ಸ್​ ತಂಡವನ್ನು ಕಟ್ಟಿ ಹಾಕಿದ್ರೆ ಫಿಫಾ ಸಾಮಾಜ್ರ್ಯದಲ್ಲಿ ತನ್ನ ದೇಶದ ಬಾವುಟವನ್ನು ಕ್ರೊವೇಷಿಯಾ ಹಾರಿಸಬಹುದಾಗಿದೆ.

 

 

0

Leave a Reply

Your email address will not be published. Required fields are marked *