ಫ್ಯಾಷನ್​ ಟ್ರೆಂಡ್​ ಕ್ಷಣ ಕ್ಷಣಕ್ಕೂ ಬದಲಾಗ್ತಿದೆ..

ಫ್ಯಾಷನ್​ ಟ್ರೆಂಡ್​ ಕ್ಷಣ ಕ್ಷಣಕ್ಕೂ ಬದಲಾಗ್ತಿದೆ.. ಬೆಳ್ಳಿ ಆಭರಣನಾ.. ಅಂತ ರಾಗ ಎಳೆತ್ತಿದ್ದಾ ಕಾಲವೊಂದಿತ್ತು.. ಆದ್ರೆ, ಈಗ ಬೆಳ್ಳಿ ಆಭರಣಗಳೇ ರೆಟ್ರೋ ಟ್ರೆಂಡ್​ ಆಗಿ ಫ್ಯಾಷನ್​ ಪ್ರಿಯರನ್ನ ಸೆಳೆಯುತ್ತಿದೆ..ಬೀದರ್​ನ ಕಲಾತ್ಮಕ ಬಿದರಿ ಜ್ಯುವೆಲ್ಲರಿಗಳಾದ ಸ್ಟಡ್​, ಹ್ಯಾಂಗಿಗ್ಸ್​​, ಕಿವಿಯ ಓಲೆ… ಸಿಲ್ವರ್​ ವೈರ್​ನಲ್ಲಿ ತಯಾರಿಸೋ ಒರಿಸ್ಸಾದ ಫಿಲಿಗ್ರಿ ಆಭರಣಗಳು ಒಳಗೊಂಡಂತೆ ಕರಕುಶಲಕರ್ಮಿಗಳ ಕೈಯಲ್ಲಿ ಅರಳಿರೋ ಸಿಲ್ವರ್​ನ ಕಲಾತ್ಮಕ ಆಭರಣಗಳು ಕಣ್ಮನ ಸೆಳೆಯುತ್ವೆ.. ಭಾರತೀಯರು ಆಭರಣ ಪ್ರಿಯರು.. ಮೊದಲೆಲ್ಲಾ ಚಿನ್ನದ ವಡವೆಗಳಿಗೆ ಮುಗಿ ಬೀಳ್ತಿದ್ದ ಫ್ಯಾಷನ್​ ಪ್ರಿಯರು ಇತ್ತೀಚೆಗೆ ಸಿಲ್ವರ್​ ಡಿಸೈನ್ಡ್​ ಆಭರಣಗಳಿಗೆ ಮಾರು ಹೋಗಿದ್ದಾರೆ.

ನಗರದ ಕನ್ನಿಂಗ್​ಹ್ಯಾಮ್ ರಸ್ತೆಯಲ್ಲಿರೋ ಕ್ಯಾರವಾನ್ ಸಂಸ್ಥೆ, ಸಾಂಪ್ರದಾಯಿಕ ಶೈಲಿಯ ಆಭರಣಗಳಿಗೆ ಡಿಸೈನರ್ ಟಚ್ ನೀಡ್ತಿದೆ.. ಸಾಂಪ್ರದಾಯಿಕ ಆಭರಣಗಳು ಇಂದಿನ ಟ್ರೆಂಡ್​ ತಕ್ಕ ಂತೆ ನ್ಯೂಲುಕ್​ ಪಡೆದು ಕೊಂಡಿವೆ. ಎಲ್ಲ ರೀತಿಯ ಡ್ರೆಸ್​ಗಳಿಗೂ ಚಿನ್ನದ ಆಭರಣಗಳನ್ನ ತೊಡಲು ಸಾಧ್ಯವಿಲ್ಲ. ಮಾರ್ಡನ್​ ಆಭರಣಗಳಿಗೆ ಹೇಳಿ ಮಾಡಿಸಿದಂತಿದೆ ಈ ಸಿಲ್ವರ್​ ಆಭರಣಗಳು..ಜೈಪುರದ ಸಾಂಪ್ರದಾಯಿಕ ಹಾಗೂ ರಾಜಾಸ್ತಾನದ ತೇವಾ ಜ್ಯುವೆಲ್ಲರಿಗೆ ಸಾಕಷ್ಟು ಬೇಡಿಕೆ ಇದೆ. ಈ ತೇವಾ ಆಭರಣ ತಯಾರಿಕೆ ಸೀಕ್ರೇಟ್​ ಒಂದು ಕುಟುಂಬದವರಿಗೆ ಮಾತ್ರ ಗೊತ್ತಿದ್ದು, ಅವರಿಗೆ ಪ್ರೋತ್ಸಾಹ ನೀಡಲಾಗ್ತಿದೆ. ಸಿಲ್ವರ್​ ಹಾಗೂ ಸಿಲ್ವರ್​ ಕೋಟೆಡ್​ ಜ್ಯುವೆಲ್ಲರಿಗಳು, ಇದ್ರೊಂದಿಗೆ ಜೆಮ್ ಸ್ಟೋನ್​ ಬಳಸಿರೋ ಆಭರಣಗಳನ್ನ ಫ್ಯಾಷನ್​ ಪ್ರಿಯರು ಇಷ್ಟಪಡ್ತಾರೆ.

ಜನರಿಗೆ ಆಭರಣಗಳು ಗ್ರ್ಯಾಂಡ್​ ಆಗಿರಬೇಕು, ಆದ್ರೆ.. ಗೋಲ್ಡ್​ ಗಿಂತ ಭಿನ್ನವಾಗಿರಬೇಕು. ಫ್ಯಾಷನ್​ ಪ್ರಿಯರ ಈ ಬೇಡಿಕೆಗೆ ತಕ್ಕಂತಿವೆ ಸಿಲ್ವರ್​ ಜ್ಯುವೆಲ್ಲರಿಗಳು, ತೇವಾ ಸಾಂಪ್ರದಾಯಿಕ ಆಭರಣಗಳು.. ಇವು ಎಲ್ಲ ವಸ್ತ್ರಗಳಿಗೂ ಮ್ಯಾಚ್​ ಆಗೋದು ವಿಶೇಷ.. ಜೊತೆಗೆ ಈ ಆಭರಣಗಳನ್ನ ಉಡುಗೊರೆ ನೀಡಲು ಸಹ ಖರೀದಿಸ್ತಾರೆ.

0

Leave a Reply

Your email address will not be published. Required fields are marked *