ರೈತರ ಬೃಹತ್ ಪ್ರತಿಭಟನೆ: ಪ್ರಧಾನಿ ಮೋದಿಗೆ ದೇವೇಗೌಡರ ಟ್ವೀಟ್​ ಬಾಣ

ಬೆಂಗಳೂರು: ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಯನ್ನು ಬೆಂಬಲಿಸಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಸರಣಿ ಟ್ವೀಟ್ ಮೂಲಕ  ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದ್ದಾರೆ. ದೇಶವನ್ನು ಉದ್ಯಮಶೀಲ ರಾಷ್ಟ್ರವೆಂದು ಬಿಂಬಿಸುವ ಮೂಲಕ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದರಿಂದ ದೇಶದ ಆರ್ಥಿಕ ಪ್ರಗತಿ ಸುಧಾರಿಸಿದೆ ಎಂದು ಹೇಳುತ್ತಿರುವ ಪ್ರಧಾನಿ ಮೋದಿಗೆ ಟ್ವೀಟ್ ಬಾಣ ಬಿಟ್ಟಿರುವ  ಮಾಜಿ ಪ್ರಧಾನಿ ದೇವೇಗೌಡ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ವಿದೇಶಿ ಹೂಡಿಕೆದಾರರಿಂದ ಮಾತ್ರ ಸಾಧ್ಯವಿಲ್ಲ. ರೈತರು ಮತ್ತು ಕೃಷಿ ರಂಗವನ್ನು ಉತ್ತೇಜಿಸಿದರೆ ದೇಶದ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದೆ ಎಂದು ಸರಣಿ ಟ್ವೀಟ್ ಮೂಲಕ ಪ್ರತಿಪಾದಿಸಿದ್ದಾರೆ. ಕೃಷಿ ಎಲ್ಲ ದೇಶಗಳ ಆರ್ಥಿಕತೆಯ ಬೆನ್ನೆಲುಬು. ಆದರೆ, ದೇಶದ ಕೃಷಿ ಕ್ಷೇತ್ರ ಮಾತ್ರ ಸೂಕ್ತ ಉತ್ತೇಜನವಿಲ್ಲದೆ ಸೊರಗುತ್ತಿದೆ. ಇದರ ಪರಿಣಾಮ ದೇಶದ ಆರ್ಥಿಕ ವ್ಯವಸ್ಥೆಯು ಕೂಡ ಕುಗ್ಗತೊಡಗಿದೆ. ಇದನ್ನು ಪ್ರಧಾನಿ ಮೋದಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

‘ಸುಲಭ ಉದ್ಯಮ’ ಸೂಚ್ಯಂಕದಲ್ಲಿ ಭಾರತ ಉತ್ತಮ ಸ್ಥಾನಗಳಿಸಿ ಮೇಲಕ್ಕೆ ಬಂದಿದೆ ಎಂಬುದನ್ನು ಮೋದಿ ಸರ್ಕಾರ ಮತ್ತು ಬಿಜೆಪಿ ಭಾರಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಆದರೆ ಭಾರತ ‘ಸುಲಭ ಉದ್ಯಮ’ದ ಜೊತೆಗೆ ‘ಸುಲಭ ಕೃಷಿ’ಯಲ್ಲಿ ಸಾಧನೆ ಮಾಡಬೇಕು ಎಂಬುದು ಅತೀ ಮುಖ್ಯ ಸಂಗತಿ @narendramodi ಅವರೇ. #FarmersMarch

ಭಾರತ ಮೂಲತಃ ಕೃಷಿ ಪ್ರಧಾನ ದೇಶ. ‘ಸುಲಭ ಕೃಷಿ’ ಕಡೆಗೂ ಗಮನ ಹರಿಸಿದರೆ ಆಹಾರ, ಉದ್ಯೋಗ, ಗ್ರಾಮೀಣಾಭಿವೃದ್ಧಿ ಎಲ್ಲವೂ ಸಾಧ್ಯ‌. ಸುಲಭ ಉದ್ಯಮ ಸ್ನೇಹಿ ವಾತಾವರಣ ಕಡೆಗಷ್ಟೇ ಗಮನಕೊಟ್ಟರೆ ಉದ್ಯಮಿಗಳಿಗಷ್ಟೇ ಅನುಕೂಲ‌ @narendramodi ಅವರೇ. #FarmersMarch #FarmersProtest

ರೈತರ ಬೆಳೆ ಸಾಲ ಮನ್ನಾ ಮೂಲಕ ಕರ್ನಾಟಕ ಸುಲಭ ಕೃಷಿಯ (Ease of Doing Agriculture) ಕಡೆಗೆ ಸಾಗುತ್ತಿದೆ. ಪ್ರಧಾನಿ @narendramodi ಅವರಿಗೆ ಕರ್ನಾಟಕ ಮಾದರಿಯಾಗಲಿ. ಅದೇ ಹೊತ್ತಿನಲ್ಲಿ ಸಾಲ ಮರು ಪಾವತಿಗಾಗಿ ರೈತರಿಗೆ ನೋಟಿಸ್ ಕೊಡುತ್ತಿರುವ ದೇಶದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪ್ರಧಾನಿ ಬುದ್ಧಿ ಹೇಳಲಿ. #FarmersMarch

ರೈತರ ಬೆಳೆ ಸಾಲ ಮನ್ನಾ ಮೂಲಕ ಕರ್ನಾಟಕ ಸುಲಭ ಕೃಷಿಯ (Ease of Doing Agriculture) ಕಡೆಗೆ ಸಾಗುತ್ತಿದೆ. ಪ್ರಧಾನಿ @narendramodi ಅವರಿಗೆ ಕರ್ನಾಟಕ ಮಾದರಿಯಾಗಲಿ. ಅದೇ ಹೊತ್ತಿನಲ್ಲಿ ಸಾಲ ಮರು ಪಾವತಿಗಾಗಿ ರೈತರಿಗೆ ನೋಟಿಸ್ ಕೊಡುತ್ತಿರುವ ದೇಶದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪ್ರಧಾನಿ ಬುದ್ಧಿ ಹೇಳಲಿ. #FarmersMarch

0

Leave a Reply

Your email address will not be published. Required fields are marked *