‘ರೈತರಿಗೆ ಮಾತ್ರ ಸಾಲಮನ್ನಾದ ಲಾಭ ಸಿಕ್ಕಿಲ್ಲ’

ಕಳೆದ ಮೂರು ತಿಂಗಳಿಂದ ರಾಜ್ಯದಲ್ಲಿ ಸಾಲಮನ್ನಾದ ಚರ್ಚೆ ನಡೆದಿದೆ. ಆದ್ರೆ ರೈತರಿಗೆ ಮಾತ್ರ ಸಾಲಮನ್ನಾದ ಲಾಭ ಸಿಕ್ಕಿಲ್ಲ. ಯಾದಗಿರಿಯಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಯಡಿಯೂರಪ್ಪ ವಾಗ್ದಾಳಿ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ‌ ಸಂಪೂರ್ಣ ಸ್ಥಗಿತವಾಗಿದೆ .  ಹೊಸದಾಗಿ ಕಾಮಗಾರಿ ಮಾಡಲು ಗುತ್ತಿಗೆದಾರರು ಮುಂದೆ‌ ಬರುತ್ತಿಲ್ಲ.  ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬರಗಾಲವಿದೆ. ಆದ್ರೂ ಸಿಎಂ ಆಗಲಿ, ಕೃಷಿ ಸಚಿವರಾಗಲಿ ಯಾವುದೇ ಜಿಲ್ಲೆಗೆ ಭೇಟಿ ನೀಡಿಲ್ಲ.ವರ್ಗಾವಣೆ ಈ ಸರ್ಕಾರದ ಒಂದು ದಂಧೆಯಾಗಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣ ವಾಗಿ ಮೌನವಾಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಸಮಿಶ್ರ ಸರ್ಕಾರದ ಸಚಿವರು ಒಂದು ಮಾತು ಅಡುತ್ತಿಲ್ಲ. ಸಮ್ಮಿಶ್ರ ಸರ್ಕಾರದ ವಿರುದ್ಧ ಯಡಿಯೂರಪ್ಪ ವಾಗ್ದಾಳಿ.

0

Leave a Reply

Your email address will not be published. Required fields are marked *