ಉತ್ತರಪ್ರದೇಶದಲ್ಲಿ ಹಳಿ ತಪ್ಪಿದ ರೈಲು: 7 ಬಲಿ, 27 ಜನರಿಗೆ ಗಾಯ

ಚಿತ್ರ ಕೃಪೆ: ANI

ಲಖ್ನೋ: ಉತ್ತರಪ್ರದೇಶದ ರಾಯ್​ಬರೇಲಿ ಬಳಿ ನ್ಯೂ ಫರಕ್ಕಾ ಎಕ್ಸ್​​ಪ್ರೆಸ್​​​​​ ರೈಲು ಹಳಿ ತಪ್ಪಿದ್ದು, 7 ಜನ ಬಲಿಯಾಗಿ, 27 ಜನ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಗಾಯಾಳು ಒಬ್ಬರು ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಕಮ್ಯಾಂಡರ್ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಈ ವೇಳೆ ಪರಿಸ್ಥಿತಿಯ ಮೇಲೆ ನಿಗಾ ವಹಿಸಲು ದ್ರೋಣ್ ಕ್ಯಾಮೆರಾ ಬಳಸಲಾಯಿತು.

ಅವಘಡದಲ್ಲಿ ಬಲಿಯಾದವರ ಕುಟುಂಬಕ್ಕೆ ತಲಾ 5 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಮತ್ತು ಸಣ್ಣ ಪುಟ್ಟ ಗಾಯಗಳಿಂದ ಬಳಲಿರುವವರಿಗೆ ತಲಾ 50,000 ರೂಪಾಯಿ ಪರಿಹಾರವನ್ನು ರೈಲ್ವೇ ಸಚಿವ ಪೀಯುಷ್ ಗೋಯಲ್ ಘೋಷಿಸಿದ್ದಾರೆ.

ರಾಯ್​ಬರೇಲಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪ್ರಯಾಣಿಕರು ಬಲಿಯಾಗಿರುವ ಸುದ್ದಿ ತಿಳಿದು ತೀವ್ರ ನೋವುಂಟಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಮಡಿದವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹಾರೈಸಿರುವ ಅವರು, ರೈಲ್ವೇ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಎಲ್ಲ ನೆರವು ನೀಡಲಿದೆ ಎಂದಿದ್ದಾರೆ.

ರೈಲು ಹಳಿ ತಪ್ಪಿದ್ದರಿಂದಾಗಿ 5 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದ್ದು, 9 ರೈಲುಗಳ ಸಂಚಾರವನ್ನು ಬದಲಿಸಲಾಗಿದೆ.

0

Leave a Reply

Your email address will not be published. Required fields are marked *