ಅನಿಲ್ ಅಂಬಾನಿ ವಿರುದ್ಧದ ವಂಚನೆ ಪ್ರಕರಣ: 453 ಕೋಟಿ ಪಾವತಿಸಲು 4 ವಾರದ ಗಡುವು

ದೆಹಲಿ: ಎರಿಕ್ಸನ್ಪ್ರಕರಣದಲ್ಲಿ ರಿಲಯನ್ಸ್ ಸಂಸ್ಥೆಯ ಅನಿಲ್ಅಂಬಾನಿಯವರಿಗೆ ಸುಪ್ರೀಂ ಕೋರ್ಟ್​​​ನಲ್ಲಿ ಭಾರೀ ಹಿನ್ನಡೆಯಾಗಿದೆಎರಿಕ್ಸನ್ಕಂಪನಿಗೆ ರಿಲಯನ್ಸ್ ಗ್ರೂಪ್ 550 ಕೋಟಿ ರೂ. ಹಣವನ್ನು 4 ವಾರದ ಒಳಗೆ ಪಾವತಿಸುವಂತೆ ಅನಿಲ್ಅಂಬಾನಿಯವರಿಗೆ ಸುಪ್ರೀಂ ಕೋರ್ಟ್ನಿರ್ದೇಶಿಸಿದೆ. ಜೊತೆಗೆ 4 ವಾರದಲ್ಲಿ ಹಣ ಪಾವತಿಸಿ ಅಥವಾ ಸೆರೆವಾಸ ಅನುಭವಿಸಿ ಎಂದು ಖಡಕ್ ಆದೇಶವನ್ನೂ ಕೋರ್ಟ್ ನೀಡಿದೆ.  ಹಣವ ಪಾವತಿಸುವಲ್ಲಿ ಒಂದುವೇಳೆ ಅದು ವಿಫಲವಾದರೆ 3 ತಿಂಗಳ ಕಾಲ ಸೆರೆವಾಸವನ್ನು ಅನುಭವಿಸಬೇಕಾಗುತ್ತದೆ.
ಎರಿಕ್ಸನ್ಪ್ರಕರಣದಲ್ಲಿ ಅನಿಲ್ ಅಂಬಾನಿಯವರು ನ್ಯಾಯಾಂಗ ನಿಂದನೆ ಮಾಡಿರುವುದು ಖಚಿತವಾಗಿದೆ. ತಕ್ಷಣ ಅವರು ಹಣ ಹಿಂದಿರುಗಿಸಬೇಕು ಎಂದು ಕೋರ್ಟ್ ಹೇಳಿದೆ. ರಿಲಯನ್ಸ್ಕಮ್ಯುನಿಕೇಷನ್ಸ್ಕಂಪನಿ ಉದ್ದೇಶಪೂರ್ವಕವಾಗಿಯೇ ಹಣವನ್ನು ಹಿಂದಿರುಗಿಸಿಲ್ಲ. ಹಿಂದೆ ಸೂಚನೆ ನೀಡಿದ್ದರೂ ರಿಲಯನ್ಸ್ ಕಂಪನಿ ಸೂಚನೆಯನ್ನು ಪಾಲಿಸಿಲ್ಲ ಎಂದು ನ್ಯಾಯಪೀಠ ಹೇಳಿದೆ

ಎರಿಕ್ಸನ್​ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ರೋಹಿಂಗ್​​​ಟನ್ ನಾರಿಮನ್ ನೇತೃತ್ವದ ನ್ಯಾಯಪೀಠ ಅನಿಲ್ ಅಂಬಾನಿ ಮತ್ತು ರಿಲಯನ್ಸ್​ ಕಮ್ಯುನಿಕೇಷನ್​ ಕಂಪನಿ ಎರಿಕ್ಸನ್​ ಇಂಡಿಯಾಗೆ 4 ವಾರದ ಒಳಗೆ ಹಣ ಪಾವತಿಸದೇ ಇದ್ದಲ್ಲಿ 3 ತಿಂಗಳ ಕಾಲ ಸೆರೆವಾಸ ಮತ್ತು 1 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ದಂಡ ಪಾವತಿಸಬೇಕು ಎಂದು ಕೂಡ ಸೂಚಿಸಿದೆ.

ಈ ಪ್ರಕರಣದಲ್ಲಿ ಅನಿಲ್ ಅಂಬಾನಿ ಮತ್ತು ಉಳಿದ ಆರೋಪಿಗಳು ನ್ಯಾಯಾಂಗ ನಿಂದನೆ ಮಾಡಿದ್ದಾರೆ. ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಮುಖ್ಯಸ್ಥ ಅನಿಲ್ ಅಂಬಾನಿ ಉದ್ದೇಶಪೂರ್ವಕವಾಗಿ ಹಣವನ್ನು, ಎರಿಕ್ಸನ್ ಕಂಪನಿಗೆ ವಾಪಸ್ ನೀಡಿಲ್ಲ ಎಂದಿರುವ ಕೋರ್ಟ್, ಈ ಮೊದಲೇ ನೀಡಿದ ಸೂಚನೆಯನ್ನೂ ಪಾಲಿಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದೆ. ಇಂದಿನ ವಿಚಾರಣೆ ವೇಳೆ ಅನಿಲ್ ಅಂಬಾನಿ ಸೇರಿದಂತೆ ರಿಲಯನ್ಸ್​ ಕಮ್ಯುನಿಕೇಷನ್ಸ್​​​ನ ನಿರ್ದೇಶಕರು ಕೂಡ ಹಾಜರಿದ್ದರು.

ತನಗೆ ರಿಲಯನ್ಸ್​ ಕಮ್ಯುನಿಕೇಷನ್ಸ್​ 550 ಕೋಟಿ ರೂಪಾಯಿಗಳನ್ನು ಹಿಂದಿರುಗಿಸಿಲ್ಲ ಎಂದು ಎರಿಕ್ಸನ್​ ಕಂಪನಿ ​ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ ಅನಿಲ್ ಅಂಬಾನಿ ಮತ್ತು ರಿಲಯನ್ಸ್​ ಕಮ್ಯುನಿಕೇಷನ್​ ನಿರ್ದೇಶಕರಿಗೆ ಕಳೆದ ಸೋಮವಾರ ನೊಟೀಸ್ ನೀಡಿತ್ತು. ಇಂದು ವಿಚಾರಣೆ ನಡೆಸಿದ ಕೋರ್ಟ್ ಅಂತಿಮ ತೀರ್ಪನ್ನು ನೀಡಿದಂತಾಗಿದೆ. ಈ ಮೂಲಕ ಅನಿಲ್ ಅಂಬಾನಿಯವರಿಗೆ ತೀವ್ರ ಹಿನ್ನಡೆಯಾಗಿದೆ. 

0

Leave a Reply

Your email address will not be published. Required fields are marked *