‘ಗಾಂಧಿ ಕುಟುಂಬವೇ ಭ್ರಷ್ಟ ಕುಟುಂಬ’: ಬಿಜೆಪಿ ವಕ್ತಾರ ಸಂಬಿತ್ ಪಾತ್ರ

ಇಡೀ ಗಾಂಧಿ ಕುಟುಂಬವೇ ಭ್ರಷ್ಟ ಕುಟುಂಬ, ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ತಿರುಗೇಟು, ರಫೇಲ್ ಅವ್ಯವಹಾರ ಆರೋಪ ಕುರಿತು ಸಂಬಿತ್ ಪಾತ್ರ ಹೇಳಿಕೆ. ರಾಹುಲ್ ದೇಶದ ಭಧ್ರತೆಗೆ ಬೆದರಿಕೆ ಒಡ್ಡುತ್ತಿದ್ದಾರೆ, ಬೊಫೋರ್ಸ್​​ಗೆ ರಾಜೀವ್ ಅಧಿಕೃತ ಮಧ್ಯವರ್ತಿ, ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ.

ರಫೇಲ್ ಡೀಲ್ ಅವ್ಯವಹಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಬಿಜೆಪಿ ತೀಕ್ಷ್ಣವಾಗಿ ತಿರುಗೇಟು ನೀಡಿದೆ. ರಾಹುಲ್ ಗಾಂಧಿ ಸುದ್ದಿಗೋಷ್ಠಿ ಬೆನ್ನಲ್ಲೇ ದೆಹಲಿಯಲ್ಲಿಂದು ಮಾಧ್ಯಮಗೋಷ್ಠಿ ನಡೆಸಿದ ಬಿಜೆಪಿಯ ಸಂಬಿತ್ ಪಾತ್ರ, ಇಡೀ ಗಾಂಧಿ ಕುಟುಂಬವೇ ಭ್ರಷ್ಟ ಕುಟುಂಬ. ರಾಹುಲ್ ದೇಶದ ಭಧ್ರತೆಗೆ ಬೆದರಿಕೆ ಒಡ್ಡುತ್ತಿದ್ದಾರೆ. ಬೊಫೋರ್ಸ್​​ಗೆ ರಾಜೀವ್ ಅಧಿಕೃತ ಮಧ್ಯವರ್ತಿ ಎಂದು ವಾಗ್ದಾಳಿ ನಡೆಸಿದರು.

0

Leave a Reply

Your email address will not be published. Required fields are marked *