ಮೊದಲು ಮೂರು ಟೆಸ್ಟ್​​ಗೆ​ ಟೀಮ್​ ಇಂಡಿಯಾ ಪ್ರಕಟ

ಇಂಗ್ಲೆಂಡ್​ ಪ್ರವಾಸದಲ್ಲಿರುವ ಟೀಮ್​ ಇಂಡಿಯಾ ಚುಟುಕು ಸರಣಿ ಗೆದ್ದು, ಏಕದಿನ ಸರಣಿಯನ್ನು ಕೈ ಚೆಲ್ಲಿದೆ. ಇನ್ನೇನಿದ್ರೂ, ಟೆಸ್ಟ್​ ಸರಣಿ ವಶಕ್ಕೆ ಟೀಮ್​ ಇಂಡಿಯಾ ಪ್ಲಾನ್​ ಮಾಡಿಕೊಂಡಿದೆ. ಅದರಂತೆ ಕಾಯ್ದು ನೋಡುವ ತಂತ್ರಕ್ಕೆ ಮಣೆ ಹಾಕಿದ್ದ ಆಯ್ಕೆ ಸಮಿತಿ, ಕೊನೆಗೂ ತಂಡವನ್ನು ಪ್ರಕಟಿಸಿದೆ. ಈ ಬಾರಿಯ ತಂಡದಲ್ಲಿ ಅಂತಹ ಬದಲಾವಣೆ ಇಲ್ಲದೆ ಇದ್ದರೂ, ಇಬ್ಬರು ವಿಕೆಟ್​ ಕೀಪರ್​​ಗಳಿಗೆ ಅವಕಾಶ ನೀಡಲಾಗಿದೆ. ವಿರಾಟ್​ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದು, ಅಜಿಂಕ್ಯ ರಹಾನೆಗೆ ಉಪನಾಯಕ ಸ್ಥಾನ ನೀಡಲಾಗಿದೆ.
ಆಗಸ್ಟ್​​ 1 ರಿಂದ ಆರಂಭವಾಗಲಿರುವ ಟೆಸ್ಟ್​ ಸರಣಿಯಲ್ಲಿ ಪುಟಿದೇಳುವ ವಿಶ್ವಾಸ ಕೊಹ್ಲಿ ಪಡೆಯದ್ದಾಗಿದೆ. ಆಯ್ಕೆ ಸಮಿತಿ ಸಹ ಮೊದಲ ಮೂರು ಟೆಸ್ಟ್​​ ಪಂದ್ಯಗಳಿಗೆ ಮಾತ್ರ ತಂಡವನ್ನು ಪ್ರಕಟಿಸಿದೆ. ವೃದ್ಧಿಮನ್​ ಸಹಾ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಕೈ ಬಿಡಲಾಗಿದೆ. ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ಗೆ ಟೀಮ್​ ಇಂಡಿಯಾದಲ್ಲಿ ಈ ಬಾರಿ ದಿನೇಶ್​ ಕಾರ್ತಿಕ್​ ಹಾಗೂ ಯುವ ಆಟಗಾರ ರಿಶಬ್​ ಪಂತ್​ಗೆ ಸ್ಥಾನ ಲಭಿಸಿದೆ. ರಿಶಬ್​ ಪಂತ್​ ಐಪಿಎಲ್​ನಲ್ಲಿ ಚೇತೋಹಾರಿ ಪ್ರದರ್ಶನ ನೀಡಿ ಆಯ್ಕೆ ದಾರರ ಗಮನ ಸೆಳೆದಿದ್ದರು. ಅಲ್ಲದೆ ವಿಶ್ವಕಪ್​​ ದೃಷ್ಟಿಯಿಂದ ತಂಡವನ್ನು ಕಟ್ಟುವ ಕನಸು ಕಾಣುತ್ತಿರುವ ಟೀಮ್​ ಇಂಡಿಯಾದಲ್ಲಿ ಯುವಕರಿಗೆ ಸ್ಥಾನ ಲಭಿಸಿದೆ.

ರಾಹುಲ್​​, ಕರುಣ್​ ನಾಯರ್​​ಗೆ ಅವಕಾಶ, ಇನ್ನು ಟೀಮ್​ ಇಂಡಿಯಾದ ಪರ ಚುಟುಕು ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿರುವ ಕೆ.ಎಲ್​ ರಾಹುಲ್​​ ಟೆಸ್ಟ್​ ತಂಡದಲ್ಲಿ ಮೂರನೇ ಆರಂಭಿಕರಾಗಿ ಸ್ಥಾನ ಪಡೆದಿದ್ದಾರೆ. ರಾಹುಲ್​ ಇಂಗ್ಲೆಂಡ್​ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಶತಕ ಬಾರಿಸಿ ತಮ್ಮ ಸಾಮರ್ಥ್ಯ ಪ್ರೂವ್​​ ಮಾಡಿದ್ದರು. ಹೀಗಾಗಿ ರಾಹುಲ್​​ಗೆ ವೈಟ್​ ಜೆರ್ಸಿ ತೊಡುವ ಅವಕಾಶ ಲಭಿಸಿದೆ. ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್​​ ಪಂದ್ಯಕ್ಕೆ ವರ್ಷಗಳ ಬಳಿಕ ಆಯ್ಕೆ ಆಗಿದ್ದ ಕರುಣ್​ ನಾಯರ್​​ಗೂ ಅವಕಾಶ ಲಭಿಸಿದೆ. ಕರುಣ್​ ನಾಯರ್​, ಇಂಗ್ಲೆಂಡ್​ ವಿರುದ್ಧ ಚೆನ್ನೈನಲ್ಲಿ ತ್ರಿಬಲ್​ ಸೆಂಚೂರಿ ಬಾರಿಸಿ ಅಬ್ಬರಿಸಿದ್ರು.

ಗಾಯದಿಂದ ಚೇತರಿಸಿಕೊಂಡಿರುವ ಬೂಮ್ರಾ ತಂಡಕ್ಕೆ ವಾಪಸ್​​ ತಂಡದಲ್ಲಿ ಸ್ಥಾನ ಪಡೆದ ಮೂವರು ಸ್ಪಿನ್​ ಬೌಲರ್ಸ್​​ ಇನ್ನು ಐರ್ಲೆಂಡ್​ ವಿರುದ್ಧದ ಟಿ-20 ಪಂದ್ಯ ಆಡುವಾಗ ಗಾಯಕ್ಕೆ ತುತ್ತಾಗಿದ್ದ ಯಾರ್ಕರ್​ ಸ್ಪೆಷಲಿಸ್ಟ್​​ ಜಸ್ಪ್ರಿತ್​ ಬೂಮ್ರಾ, ಫಿಟ್​ ಆಗಿದ್ದಾರೆ. ಹೀಗಾಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಬೂಮ್ರಾ ಅನುಪಸ್ಥಿತಿ ಸೀಮಿತ ಓವರ್​​ಗಳಲ್ಲಿ ಟೀಮ್​ ಇಂಡಿಯಾವನ್ನು ಕಾಡಿತ್ತು. ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕುಲ್​​ದೀಪ್​ ಯಾದವ್​​ಗೆ, ಮತ್ತೆ ವೈಟ್​ ಜೆರ್ಸಿ ತೊಡುವ ಅವಕಾಶ ಲಭಿಸಿದೆ. ಕುಲ್ದೀಪ್​ ಟಿ-20 ಹಾಗೂ ಏಕದಿನ ಪಂದ್ಯಗಳಲ್ಲಿ ಕಮಾಲ್​ ಬೌಲಿಂಗ್ ಪ್ರದರ್ಶನ ನೀಡಿದ್ದರು.

ಅನುಭವಿ ಸ್ಪಿನ್​ ಜೋಡಿ ಅಶ್ವಿನ್​ ಹಾಗೂ ರವೀಂದ್ರ ಜಡೇಜಾ ಎದುರಾಳಿಗಳನ್ನು ಕಾಡಲು ರೆಡಿಯಾಗಿದ್ದಾರೆ. ಇನ್ನು ವೇಗದ ಬೌಲಿಂಗ್​ ವಿಭಾಗದಲ್ಲಿ ಇಶಾಂತ್​ ಶರ್ಮಾ, ಉಮೇಶ್​ ಯಾದವ್​​, ಜಸ್ಪ್ರಿತ್​ ಬೂಮ್ರಾ, ಶಾರ್ದೂಲ್​ ಠಾಕೂರ್​ ಕಾಣಿಸಿಕೊಂಡಿದ್ದಾರೆ.

ಟೆಸ್ಟ್​​ಗೆ​ ಟೀಮ್​ ಇಂಡಿಯಾ ಆಟಗಾರರ ಪಟ್ಟಿ:
ವಿರಾಟ್​ ಕೊಹ್ಲಿ (ನಾಯಕ),  ಶಿಖರ್​ ಧವನ್​​,  ಕೆ.ಎಲ್​ ರಾಹುಲ್​​,  ಮುರಳಿ ವಿಜಯ್​​,  ಪೂಜಾರ,  ಅಜಿಂಕ್ಯ ರಹಾನೆ,  ಕರುಣ್​ ನಾಯರ್​,  ದಿನೇಶ್​ ಕಾರ್ತಿಕ್​​,  ರಿಶಬ್​ ಪಂತ್​​,  ಆರ್​.ಅಶ್ವಿನ್​​, ರವೀಂದ್ರ ಜಡೇಜಾ, ಕುಲ್ದೀಪ್​ ಯಾದವ್​, ಹಾರ್ದಿಕ್​ ಪಾಂಡ್ಯ, ಇಶಾಂತ್​ ಶರ್ಮಾ, ಉಮೇಶ್​ ಯಾದವ್​​, ಜಸ್ಪ್ರಿತ್​ ಬೂಮ್ರಾ, ಶಾರ್ದೂಲ್​ ಠಾಕೂರ್.

0

Leave a Reply

Your email address will not be published. Required fields are marked *