ಇಂಗ್ಲೆಂಡ್​​ನಲ್ಲಿ ಟೀಮ್​ ಇಂಡಿಯಾ ಅಬ್ಬರ ಸರಣಿ ಗೆಲುವಿನ ಲೆಕ್ಕಚಾರದಲ್ಲಿ ಕೊಹ್ಲಿ ಬಾಯ್ಸ್​​

ಟೀಮ್​ ಇಂಡಿಯಾ, ಇಂಗ್ಲೆಂಡ್​ ಪ್ರವಾಸದಲ್ಲಿ ಅಭಿಮಾನಿಗಳಿಗೆ ನಿರಾಸೆಯಂತೂ ಮಾಡಿಲ್ಲ. ಭರ್ಜರಿ ಆಟದ ಪ್ರದರ್ಶನ ನೀಡಿ ಕೋಟ್ಯಾಂತರ ಕ್ರಿಕೆಟ್​ ಪ್ರೇಮಿಗಳ ಹೃದಯ ಗೆದ್ದಿದೆ. ಇನ್ನು ಒಂದು ಮೆಟ್ಟಿಲು ಹತ್ತಿದ್ದರೇ ಸಾಕು ಮತ್ತೊಂದು ಕಿರೀಟ ಟೀಮ್​ ಇಂಡಿಯಾ ಮುಕುಟ ಸೇರಲಿದೆ. ಸದ್ಯ ಏಕದಿನ ಸಣಿಯಲ್ಲಿ 1-1ರಿಂದ ಸಮಬಲ ಸಾಧಿಸಿರುವ ಇಂಗ್ಲೆಂಡ್​​ಗೆ, ಶಾಕ್​ ನೀಡಲು ಬ್ಲ್ಯೂ ಬಾಯ್ಸ್ ಪ್ಲಾನ್ ಮಾಡಿಕೊಂಡಿದೆ. ಆದ್ರೆ, ಇದೆಲ್ಲದರ ಮಧ್ಯ ಟೀಮ್​ ಇಂಡಿಯಾಗೆ ಒಂದು ಚಿಂತೆ ಕಾಡುತ್ತಿದೆ. ಈ ಚಿಂತೆ ತಂಡದ ಮ್ಯಾನೆಜ್ಮೆಂಟ್​ನಿಂದ ಹಿಡಿದು, ಆಟಗಾರರಿಗೆ ತಲೆ ನೋವು ತಂದಿದೆ.

ಬ್ಲ್ಯೂ ಬಾಯ್ಸ್​​ ಇಂಗ್ಲೆಂಡ್​ ಪ್ರವಾಸ ಆರಂಭಿಸಿದ ದಿನದಿಂದಲೂ ಸ್ಥಿರ ಪ್ರದರ್ಶನ ನೀಡ್ತಾ ಇದೆ. ಇದಕ್ಕೆ ವಾತಾವರಣನೂ ಕಾರಣ ಅಂದ್ರೆ, ತಪ್ಪಾಗಲಾರದು. ಮ್ಯಾಂಚೆಸ್ಟರ್​​, ನಾಟಿಂಗ್​​ಹ್ಯಾಮ್​​, ಬ್ರಿಸ್ಟಲ್​​, ಲಾರ್ಡ್ಸ್​​ ಅಂಗಳಗಳಲ್ಲಿ ಆಡಿ ಸೈ ಎನಿಸಿಕೊಂಡಿರುವ ವಿರಾಟ್​ ಪಡೆ, ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಒಂದೊಮ್ಮೆ ನೀವು ಈ ದೃಶ್ಯಗಳನ್ನು ಗಮನವಿಟ್ಟು ನೋಡಿ.. (ಸ್ಪಿನ್​ ಬೌಲರ್ಸ್​​ಗೆ ವಿಕೆಟ್​ ಬಿದ್ದ ದೃಶ್ಯ ಬಳಿಸಿಕೊಳ್ಳಿ) ಈ ದೃಶ್ಯವನ್ನು ನೋಡಿದ್ರೆ, ಪಂದ್ಯ ಭಾರತದಲ್ಲಿ ನಡೆದಿದೆಯೋ ಅಥವಾ ಇಂಗ್ಲೆಂಡ್​​ನಲ್ಲಿ ನಡೆದಿಯೋ ಎನ್ನುವ ಸಂಶಯ ಬಾರದೆ ಇರದು. ಏಕೆಂದ್ರೆ ಭಾರತೀಯ ಸ್ಪಿನ್​ ಬೌಲರ್ಸ್​​ಗಳೇ ಆಗಲಿ ಎದುರಾಳಿ ತಂಡದ ಸ್ಪಿನ್​ ಬೌಲರ್ಸ್​​ಗಳೇ ಆಗಲಿ, ಮಿಂಚಿನ ಪ್ರದರ್ಶನ ನೀಡ್ತಾ ಇದ್ದಾರೆ. ಬೌನ್ಸಿ ಟ್ರ್ಯಾಕ್​​ನಲ್ಲಿ ಸ್ಪಿನ್​ ಆಗುತ್ತಿರೋದು ಟೀಮ್​ ಇಂಡಿಯಾ ಆಟಗಾರರ ಮುಖದಲ್ಲಿ ಸಂತಸ ಮೂಡಿಸಿತ್ತು. ಆದ್ರೆ, ಮೂರನೇ ಪಂದ್ಯಕ್ಕೆ ಕೊಂಚ ಭಿನ್ನ ಪರಿಸ್ಥಿತಿ ಕೊಹ್ಲಿ ಪಡೆಯನ್ನು ಸ್ವಾಗತಿಸಲಿದೆ.

ಟೀಮ್​ ಇಂಡಿಯಾಕ್ಕೆ ಶುರುವಾಗಿದೆ ವಾತಾವರಣದ ಚಿಂತೆ ಲೀಡ್ಸ್​​ ಅಂಗಳದಲ್ಲಿ ವೇಗಿಗಳದ್ದೇ ದರ್ಬಾರ್​​ ಹೌದು ಈ ಹಿಂದಿನ ಪಂದ್ಯಗಳಲ್ಲಿ ಭಾರತಕ್ಕೆ ವಾತಾವರಣ ಅಡ್ಡಿ ಮಾಡಿರಲಿಲ್ಲ. ಭಾರತಕ್ಕಿಂತಲೂ ಕೊಂಚ ಭಿನ್ನವಾದ್ರೂ, ಆಡಲು ತೊಂದ್ರೆ ಏನು ಆಗಲಿಲ್ಲ. ಆದ್ರೆ, ಇಂದು ಹೆಡಿಂಗ್ಲಿಯ ಲೀಡ್ಸ್​​ ಅಂಗಳದಲ್ಲಿ ಪಂದ್ಯ ನಡೆಯಲಿದೆ. ಹೆಡಿಂಗ್ಲಿಯಲ್ಲಿ ವಾತಾವರಣ ಟೀಮ್​ ಇಂಡಿಯಾ ಆಟಗಾರರಿಗೆ ಸವಾಲು ಎಸೆಯಲಿದೆ ಅನ್ನೋದ್ರಲ್ಲಿ ಡೌಟ್​ ಇಲ್ಲವೇ ಇಲ್ಲ.

ಇಂದು ನಡೆಯುವ ಪಂದ್ಯದಲ್ಲಿ ವಾತಾವರಣದ ಚಿಂತೆ ಟೀಮ್​ ಇಂಡಿಯಾಗೆ ಬಹುವಾಗಿ ಕಾಡ್ತಾ ಇದೆ. ಹೆಡಿಂಗ್ಲಿ ಇಂಗ್ಲೆಂಡ್​​ನ ಉತ್ತರ ಪ್ರಾಂತ್ಯದಲ್ಲಿದ್ದು, ಚಳಿ ಇರುತ್ತದೆ. ಸಂಜೆಯ ವೇಳೆಗೆ ತಾಪಾಮಾನ 11 ಡಿಗ್ರಿ ಇರುತ್ತದೆ. ಇನ್ನು ಗಾಳಿ 8 ಕಿಲೊ ಮಿಟರ್​​ ವೇಗದಲ್ಲಿ ಬೀಸುತ್ತದೆ. ಹೀಗಾಗಿ ಈ ಪಿಚ್​ನಲ್ಲಿ ಸ್ಪಿನ್​ ಬೌಲರ್ಸ್​​​ಗಳು ವಿಕೆಟ್​ ಪಡೆಯಲು ಪರದಾಟ ನಡೆಸುತ್ತಾರೆ. ಇನ್ನು ವೇಗದ ಬೌಲರ್​​ಗಳಿಗೆ ಈ ಪಿಚ್​ ಹೇಳಿ ಮಾಡಿಸಿದ್ದಾಗಿದ್ದು, ಮೂರನೇ ಪಂದ್ಯದಲ್ಲಿ ವೇಗಿಗಳು ದರ್ಬಾರ್​ ನಡೆಸುತ್ತಾರೆ ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗುತ್ತಿದೆ. ಒಂದು ವೇಳೆ ಈ ಅಂಶ ಕೈ ಹಿಡಿದಲ್ಲಿ ವೇಗದ ಬೌಲರ್ಸ್​​ ಆರ್ಭಟ ಜೋರಾಗಿರುತ್ತದೆ. ಟೀಮ್​ ಇಂಡಿಯಾ ಈ ಸಮಸ್ಯೆಯಿಂದ ಹೇಗೆ ನುಣುಚಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.

0

Leave a Reply

Your email address will not be published. Required fields are marked *