ಇಂಗ್ಲೆಂಡ್​​- ಟೀಮ್​ ಇಂಡಿಯಾ 5ನೇ ಫೈಟ್​​

ಓವಲ್​ ಅಂಗಳದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್​​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಕಣಕ್ಕಿಳಿದ ಟೀಮ್​ ಇಂಡಿಯಾಕ್ಕೆ ಈ ಆಡುವ ಅವಕಾಶ ಲಭಿಸಿತು. ಆದ್ರೆ, ಇಲ್ಲಿಯೂ ಎಲ್ಲರ ಲೆಕ್ಕಾಚಾರ ಉಲ್ಟಾ ಆಯಿತು. ಪೃಥ್ವಿ ಶಾ ರನ್ನು ಕಣಕ್ಕೆ ಇಳಿಸುವ ಲೆಕ್ಕಾಚಾರವನ್ನು ಎಲ್ಲರೂ ಹಾಕಿದ್ರು. ಆದ್ರೆ, ಎಲ್ಲರ ನಿರೀಕ್ಷೆಯನ್ನು ಹುಸಿಯಾಗಿಸಿದ ವಿರಾಟ್​​, ಹನುಮ ವಿಹಾರಿಗೆ ಚಾನ್ಸ್​ ನೀಡಿದ್ರು. ಇನ್ನು ಗಾಯಾಳು ಅಶ್ವಿನ್​ ಬದಲಿಗೆ ರವೀಂದ್ರ ಜಡೇಜಾ ಇದೇ ಮೊದಲ ಬಾರಿಗೆ ಸರಣಿಯಲ್ಲಿ ಕಣಕ್ಕೆ ಇಳಿದ್ರು.

ಟಾಸ್​ ಗೆದ್ದ ಇಂಗ್ಲೆಂಡ್​ ತಂಡ ಮೊದಲು ಬ್ಯಾಟ್ ಮಾಡುವ ಲೆಕ್ಕಾಚಾರ ಹಾಕಿಕೊಂಡಿತು. ಅದ್ರಂತೆ, ಸರಣಿಯಲ್ಲಿ ರನ್​​ ಬರ ಅನುಭವಿಸುತ್ತಿದ್ದ ಅಲಿಸ್ಟಾರ್​ ಕುಕ್​​ ತನ್ನ ವಿದಾಯದ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ರನ್​​ ಗುಡ್ಡೆ ಹಾಕುವಲ್ಲಿ ಸಫಲರಾದ್ರು. ಕುಕ್​​ ಹಾಗೂ ಕೀಟನ್​ ಜೆನ್ನಿಂಗ್ಸ್​ ಜೋಡಿ ಮೊದಲ ವಿಕೆಟ್​ಗೆ 60 ರನ್​ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸಲು ವಿರಾಟ್​ ಹಾಕಿದ ಪ್ಲಾನ್​ ಎಲ್ಲಾ ಪ್ಲಾಫ್​ ಆದವು.

ಎರಡನೇ ವಿಕೆಟ್​ಗೆ ಕುಕ್​​ ಜೊತೆಗೂಡಿದ ಮೊಯಿನ್​ ಅಲಿ ತಂಡಕ್ಕೆ ಆಸರೆ ಆದ್ರು. ಕುಕ್​ ಹಾಗೂ ಅಲಿ ಜೋಡಿ ವಿರಾಟ್​ ಕೊಹ್ಲಿ ಪಡೆಯ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಅಲ್ಲದೆ ರನ್​ ಗುಡ್ಡೆ ಹಾಕುವಲ್ಲಿ ಸಫಲವಾಯಿತು. ಸಮಯೋಚಿತ ಆಟ ಆಡಿದ ಈ ಪ್ಲೇಯರ್ಸ್​ ತಂಡಕ್ಕೆ ನೆರವಾದ್ರು. ಈ ಜೋಡಿ ಎರಡನೇ ವಿಕೆಟ್​ಗೆ 73 ರನ್​ ಕಾಣಿಕೆ ನೀಡಿ ಅಬ್ಬರಿಸಿದ್ರು. ಲಯಕ್ಕೆ ಮರಳಿದ ಕುಕ್​, ಭರ್ಜರಿ ಬ್ಯಾಟಿಂಗ್ ನಡೆಸಿದ್ರು. 190 ಪಂದ್ಯಗಳಲ್ಲಿ 8 ಬೌಂಡರಿ ಸೇರಿದಂತೆ 71 ರನ್​ ಬಾರಿಸಿ ತಂಡಕ್ಕೆ ಆಸರೆಯಾದ್ರು.

ತಂಡದ ನಾಯಕ ಜೋ ರೂಟ್​ ಬಂದು ಹೋಗುವ ಸಂಪ್ರದಾಯ ಮುಗಿಸಿದ್ರು. ವಿಕೆಟ್​ ಕೀಪರ್​ ಜಾನಿ ಬೇರ್​ಸ್ಟೋ ಸಹ ಸೊನ್ನೆ ಸುತ್ತಿದ್ರು. ಬೆನ್​ ಸ್ಟೋಕ್ಸ್​​ ರವೀಂದ್ರ ಜಡೇಜಾರ ಎಸೆತವನ್ನು ತಪ್ಪಾಗಿ ಅರ್ಥೈಸಿಕೊಂಡು ವಿಕೆಟ್​ ಒಪ್ಪಿಸಿದ್ರು. ಅರ್ಧಶತಕಳಿಸಿದ ಮೊಯಿನ್ ಅಲಿ ಹಾಗೂ ಸ್ಯಾಮ್​ ಕರಾನ್​ಗೆ ಇಶಾಂತ್ ಶರ್ಮಾ ಒಂದೇ ಓವರ್​ನಲ್ಲಿ ಪೆವಿಲಿಯನ್ ದಾರಿ ತೋರಿಸಿದ್ರು. 7ನೇ ವಿಕೆಟ್​​ಗೆ ಜೋಸ್​ ಬಟ್ಲರ್ ಹಾಗೂ ಸ್ಪಿನ್ನರ್​ ಅದೀಲ್ ರಶೀದ್ ಜೊತೆಯಾಗಿದ್ದು,17 ರನ್ ಕಲೆಹಾಕಿದ್ದಾರೆ. ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಅಂತಿಮವಾಗಿ ಮೊದಲ ದಿನದಾಟ ಅಂತ್ಯಕ್ಕೆ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಭಾರತದ ಪರ ಇಶಾಂತ್ ಶರ್ಮಾ 3 ವಿಕೆಟ್ ಪಡೆದ್ರೆ, ರವೀದ್ರಾ ಜಡೇಜಾ, ಜಸ್ಪ್ರೀತ್​ ಬೂಮ್ರಾ ತಲಾ 2 ವಿಕೆಟ್ ಪಡೆದ್ರು. ಎರಡನೇ ದಿನ ಭಾರತ ಇಂಗ್ಲೆಂಡ್​ನ ಉಳಿದ ಮೂರು ವಿಕೆಟ್​ಗಳನ್ನ ಕಿತ್ತು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವ ವಿಶ್ವಾಸದಲ್ಲಿದೆ. ಇಂಗ್ಲೆಂಡ್ ಉತ್ತಮ ಮೊತ್ತ ದಾಖಲಿಸುವ ಲೆಕ್ಕಾಚಾರದಲ್ಲಿದೆ.

0

Leave a Reply

Your email address will not be published. Required fields are marked *