ಹಿರಿಯರನ್ನು ಅವಮಾನಿಸುವುದು ಭಾರತೀಯ ಸಂಸ್ಕೃತಿ ರಕ್ಷಣೆಯ ಮಾರ್ಗವೇ? ರಾಹುಲ್ ಪ್ರಶ್ನೆ

ದೆಹಲಿ: ಏಕಲವ್ಯ ತನ್ನ ಗುರುವಿನ ಬೇಡಿಕೆಗಾಗಿ ತನ್ನ ಹೆಬ್ಬರಳನ್ನೇ ಕತ್ತರಿಸಿಕೊಂಡಿದ್ದ. ಬಿಜೆಪಿಯಲ್ಲಿ ತಮ್ಮ ಸ್ವಂತ ಗುರುಗಳನ್ನು ಕತ್ತರಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ವಾಜಪೇಯೀಜಿ, ಅಡ್ವಾಣಿಜೀ, ಜಸ್ವಂತ್ ಸಿಂಗ್​​ಜಿ ಅವರಿಗೆ ಅವಮಾನ ಮಾಡಲಾಗಿದೆ ಎಂದಿರುವ ಅವರು, ಇದು ಭಾರತೀಯ ಸಂಸ್ಕೃತಿಯ ರಕ್ಷಣೆಯ ಮಾರ್ಗವೇ? ಎಂದು ಅವರು ಟ್ವೀಟ್ ಮಾಡಿದ್ದಾರೆ.

https://twitter.com/RahulGandhi/status/1006553306083180544
ಇದರೊಂದಿಗೆ ಅಡ್ವಾಣಿ ಮತ್ತಿತರ ನಾಯಕರು ವೇದಿಕೆಯ ಮೇಲಿರುವ ಸಭೆಗೆ ಪ್ರಧಾನಿ ಮೋದಿಯವರು ಆಗಮಿಸುವ ದೃಶ್ಯವಿರುವ ವೀಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಮೊದಲು ಅಡ್ವಾಣಿಯವರ ಕಾಲಿಗೆ ಮೋದಿಯವರು ಎರಗುವು ದೃಶ್ಯ ಇದೆ. ಜೊತೆಗೆ ಮುಂದಿನ ಭಾಗದಲ್ಲಿ ಅಡ್ವಾಣಿಯವರು ಮೋದಿಯವರಿಗೆ ಎದ್ದು ನಿಂತು, ಕೈ ಮುಗಿದು ಗೌರವ ನೀಡುತ್ತಾರೆ. ಆದರೆ, ನರೇಂದ್ರ ಮೋದಿಯವರು ಪ್ರತಿಯಾಗಿ ಅಡ್ವಾಣಿಯವರಿಗೆ ನಮಸ್ಕರಿಸುವುದರ ಬದಲು ಅವರನ್ನು ಕಡೆಗಣಿಸಿರುವ ದೃಶ್ಯ ದಾಖಲಾಗಿದೆ.
ಹಾಡಿನ ಹಿನ್ನೆಲೆ ಕುಚ್ ಕುಚ್ ಹೋತಾ ಹೈ ಚಿತ್ರದ ತುಜೆ ಯಾದ್ ನ ಮೇರೇ ಆಯೇ ಹಾಡು ಕೇಳಿ ಬರುತ್ತಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಗೌರವ ಸಲ್ಲಿಸುತ್ತಿಲ್ಲ ಎನ್ನುವುದನ್ನು ಹೇಳಲು ಯತ್ನಿಸಲಾಗಿದೆ. ಈ ವೀಡಿಯೋವನ್ನು 1.37 ಲಕ್ಷ ಜನ ವೀಕ್ಷಿಸಿದ್ದು, 17 ಸಾವಿರ ಜನ ಇಷ್ಟಪಟ್ಟರೆ, 7.3 ಸಾವಿರ ರೀಟ್ವೀಟ್ ಮತ್ತು 3.7 ಸಾವಿರ ಪ್ರತಿಕ್ರಿಯೆಗಳು ಬಂದಿವೆ.

0

Leave a Reply

Your email address will not be published. Required fields are marked *