ಕಾರ್ತಿ ಒಡೆತನದ 54 ಕೋಟಿ ಆಸ್ತಿ ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

ದೆಹಲಿ: ಐಎನ್​ಎಕ್ಸ್​​ ಮೀಡಿಯಾ ಅವ್ಯಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸೇರಿದ 54 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ನವದೆಹಲಿಯ ಜೋರ್ ಭಾಗ್, ಊಟಿ ಮತ್ತು ಕೊಡೈಕೆನಾಲ್​​ನ ಐಷಾರಾಮಿ ಬಂಗಲೆಗಳು, ಅಮೆರಿಕದಲ್ಲಿರುವ ಕಾರ್ತಿ ಒಡೆತನದ ಮನೆ, ಬಾರ್ಸಿಲೋನಾದಲ್ಲಿರುವ ಮನೆಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಅಕ್ರಮ ಹಣ ಲೇವಾದೇವಿ ಆರೋಪದಡಿ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ. ಈ ಮೂಲಕ ಕಾರ್ತಿ ಚಿದಂಬರಂಗೆ ತೀವ್ರ ಹಿನ್ನಡೆಯಾದಂತಾಗಿದೆ.

0

Leave a Reply

Your email address will not be published. Required fields are marked *