ಕೊಲ್ಕೊತ್ತಾದಲ್ಲಿ ರೋಗಿಗೆ ತಪ್ಪು ಗುಂಪಿನ ರಕ್ತ ನೀಡಿದ ಆರೋಪ

ಕೊಲ್ಕೊತ್ತಾ: ಕೊಲ್ಕೊತ್ತಾದ ಕೊಲಂಬಿಯಾ ಏಷ್ಯಾದಲ್ಲಿ ತಪ್ಪಾದ ರಕ್ತದ ಗುಂಪನ್ನು ರೋಗಿಗೆ ನೀಡಿದ ಘಟನೆ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿದ ಅಭಿಜಿತ್ ಸಾಹಾ, ನನ್ನ ಪತ್ರಿಯನ್ನು ಕಳೆದ ಜೂನ್ 5ರಂದು ಆಸ್ಪತ್ರೆಗೆ ದಾಖಲಿಸಿದ್ದೆ. ಚಿಕಿತ್ಸೆ ನೀಡುವ ಸಮಯದಲ್ಲಿ ತಪ್ಪು ಗುಂಪಿನ ರಕ್ತವನ್ನು ನೀಡಲಾಗಿದೆ. ಇದರಿಂದ ನನ್ನ ಮಡದಿಯ ಶ್ವಾಸಕೋಶ ಮತ್ತು ಕಿಡ್ನಿ ಹಾಳಾಗಿವೆ ಎಂದು ಆರೋಪಿಸಿದ್ದಾರೆ. ಜೊತೆಗೆ, ಈಗಾಗಲೇ ನಾನು 2.5 ಲಕ್ಷ ರೂ.ಗಳನ್ನು ಪಾವತಿಸಿದ್ದೇನೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿ ಹಣ ಪಾವತಿಸದೇ ಇದ್ದಲ್ಲಿ ಚಿಕಿತ್ಸೆಯನ್ನು ನಿಲ್ಲಿಸುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದೆ. ಈ ಕುರಿತು ಸಿಎಂಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ವೈದ್ಯ ತೀರ್ಥಂಕರ್ ಬಾಗ್ಚಿ, ರೋಗಿಯ ಸ್ಥಿತಿ ಈಗ ಸುಧಾರಿಸುತ್ತಿದೆ. ಆದರೆ, ರೋಗಿಯ ಮೇಲೆ ನಿಗಾ ಇಡಲಾಗಿದೆ. ತಪ್ಪು ರಕ್ತವನ್ನು ನೀಡಿರುವ ಕುರಿತು ತನಿಖೆ ನಡೆಸಲು ಬೆಂಗಳೂರಿನ ತಂಡವನ್ನು ರಚಿಸಲಾಗಿದೆ ಎಂದಿದ್ದಾರೆ. ಅಲ್ಲದೇ, ಕೆಲವರು ರೋಗಿಯ ಪತಿಗೆ ಉಳಿದ ಮೊತ್ತ ಪಾವತಿಸುವಂತೆ ಸೂಚಿಸಿದ್ದಾರೆ. ಆದರೆ, ಇದನ್ನು ಆಡಳಿತ ಮಂಡಳಿ ಮಾಡಿಲ್ಲ. ಯಾರಾದರೂ ಈ ವಿಷಯಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದ್ದರೆ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.

0

Leave a Reply

Your email address will not be published. Required fields are marked *