ಅತಿ ಹೆಚ್ಚು ಆದಾಯಗಳಿಸೋ ಕ್ರೀಡಾಪಟು ಯಾರು ಗೊತ್ತಾ..?

ಸದ್ಯ ವಿಶ್ವ ಕ್ರಿಕೆಟ್​ನ ಸ್ಟಾರ್ ಆಟಗಾರ ಅಂದ್ರೆ, ಅದು ಒನ್​ ಅಂಡ್ ಒನ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಕ್ರಿಕೆಟ್​ನ ಮೂರು ಮಾದರಿಯಲ್ಲೂ ಭರ್ಜರಿ ಪ್ರದರ್ಶನ ನೀಡ್ತಿರೋ ವಿರಾಟ್, ದಾಖಲೆಗಳ ಸರದಾರನಾಗಿದ್ದಾರೆ. ಅಷ್ಟೇ ಅಲ್ಲ, ಹೊಸ ರೆಕಾರ್ಡ್​ಗಳ ಸೃಷ್ಠಿಕರ್ತ. ಆದ್ರೆ ಈಗ ಇಷ್ಟೇಲ್ಲ ಹೆಗ್ಗಳಿಕೆಯನ್ನ ಸಂಪಾದಿಸಿರೋ ವಿರಾಟ್, ಆದಾಯ ಎಷ್ಟಿರಬಹುದು ಎಂದು ನೀವು ಯೋಚ್ನೆ ಮಾಡ್ತಾ ಇರಬಹುದು. ಅಲ್ಲದೆ ವಿರಾಟ್ ಅತಿ ಹೆಚ್ಚು ಆದಾಯ ಗಳಿಸೋ ಆಟಗಾರ ಅಂತಾನೂ ನೀವು ಲೆಕ್ಕಾಚಾರವನ್ನ ಹಾಕಿಕೊಂಡಿರಬಹುದು.

ಸ್ಯಾಲರಿಯಿಂದ ಹಿಡಿದು ಕೊಹ್ಲಿಯ ಇತರೆ ವರಮಾನವನ್ನ ಲೆಕ್ಕಹಾಕಿದ್ರೆ, ಒಟ್ಟಾರೆ ವರ್ಷಕ್ಕೆ 200 ಕೋಟಿಗೂ ಅಧಿಕ ಸಂಪಾದನೆ ಮಾಡುತ್ತಾರೆ ವಿರಾಟ್. ಆದರೆ ವಿಷಯ ಅದಲ್ಲ, ವಿರಾಟ್ ಕೊಹ್ಲಿ ಯಾವೆಲ್ಲಾ ಮೂಲಗಳಿಂದ ಅವರಿಗೆ ಸಿಗೋ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಇದೀಗ ರಿವಿಲ್ ಆಗಿದೆ. ಅಲ್ಲದೆ ವಿಶ್ವದಲ್ಲಿ ಅತಿ ಹೆಚ್ಚು ಆದಾಯ ಗಳಿಸೋ ಆಟಗಾರ ವಿರಾಟ್ ಅನ್ಕೋಂಡಿದ್ರೆ, ಅದು ತಪ್ಪು, ಯಾಕಂದ್ರೆ, ಕೊಹ್ಲಿಯ ಐದು ಪಟ್ಟು ಹೆಚ್ಚು ಆದಾಯಗಳಿಸೋ ಪೋರ್ಚುಗಲ್​​ನ ಸ್ಟಾರ್ ಫುಟ್ಬಾಲ್ ಪ್ಲೇಯರ್ ಕ್ರಿಶ್ಚಿಯಾನೋ ರೊನಾಲ್ಡೋ ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಗಳಿಸೋ ಕ್ರೀಡಾ ತಾರೆಯಾಗಿದ್ದಾರೆ. ಆದರೆ ರೋನಾಲ್ಡೋ ಅದೆಷ್ಟೇ ಹೆಚ್ಚು ಆದಾಯ ಗಳಿಸಿದರೂ, ಈ ಒಂದು ವಿಷಯದಲ್ಲಿ ಮಾತ್ರ ಕೊಹ್ಲಿಯನ್ನ ಅವರು ಮೀರಿಸೋಕ್ಕಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ರೋನಾಲ್ಡೋಗಿಂತ ಕೊಹ್ಲಿಗೆ 1 ಪಟ್ಟು ಹೆಚ್ಚು ಸಂಭಾವನೆ ಸಿಗುತ್ತಿದೆ.

ಒಟ್ಟಾರೆ ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಗಳಿಸೋ ಕ್ರೀಡಾಪಟುಗಳಲ್ಲಿ ರೋನಾಲ್ಡೋಗೆ ಅಗ್ರಸ್ಥಾನ. ಎಲ್ಲಾ ಮೂಲಗಳಿಂದ ರೊನಾಲ್ಡೋ ವಾರ್ಷಿಕ 1191 ಕೋಟಿ ಆದಾಯ ಗಳಿಸಿದರೆ, ಟೀಮ್ ಇಂಡಿಯಾ ನಾಯಕ ವಿರಾಟ್ ವಾರ್ಷಿಕ 282 ಕೋಟಿ ರೂಪಾಯಿ ಸಂಪಾದಿಸುತ್ತಾರೆ. ಆದರೆ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಂನಿಂದ ಅತಿ ಹೆಚ್ಚು ಹಣ ಗಳಿಸೋದ್ರಲ್ಲಿ ರೋನಾಲ್ಡೋರನ್ನ ಕೊಹ್ಲಿ ಹಿಂದಿಕ್ಕಿದ್ದಾರೆ. ಜನಪ್ರಿಯತೆಯಲ್ಲಿ ಕೊಹ್ಲಿ ರೋನಾಲ್ಡೋಗಿಂತ ಒಂದು ಕೈ ಮೇಲಿದ್ದಾರೆ. ಇಡೀ ವಿಶ್ವ ಕ್ರಿಕೆಟ್​ಗೆ ಜನಪರಿಚಿತರಾಗಿರೋ ವಿರಾಟ್​ಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳ ಬಳಗವಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಬ್ಯೂಸಿಯಾಗಿರೋ ವಿರಾಟ್, ಅದರಲ್ಲೂ ಹಣ ಗಳಿಸುತ್ತಿದ್ದಾರೆ. ಅಲ್ಲದೆ ಇನ್ಸ್​ಸ್ಟ್ರಾಗ್ರಾಮ್​ನಲ್ಲಿ ಕೊಹ್ಲಿಗಿಂತ ರೋನಾಲ್ಡೋ ಅತಿ ಹೆಚ್ಚು ಫ್ಯಾನ್ ಫಾಲೋವರ್​ಗಳನ್ನ ಹೊಂದಿದ್ದಾರೆ. ಆದರೂ ಕೊಹ್ಲಿ ಜನಪ್ರಿಯತೆಯಲ್ಲಿ ರೋನಾಲ್ಡೋರನ್ನ ಹಿಂದಿಕ್ಕಿದ್ದಾರೆ. ಒಟ್ನಲ್ಲಿ ಮುಂದಿನ ದಿನಗಳಲ್ಲಿ ಕೊಹ್ಲಿ ಕ್ರಿಕೆಟ್​ನಲ್ಲಿ ಮತ್ತಷ್ಟು ದಾಖಲೆಗಳನ್ನ ಮಾಡಲಿ ಅನ್ನೋದೆ ಅಭಿಮಾನಿಗಳ ಆಶಯ.

ಶಿವಕುಮಾರ್, ಕೆ ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

0

Leave a Reply

Your email address will not be published. Required fields are marked *