ಆಸ್ಪತ್ರೆಗಳಿಗೆ ವಿಸಿಟ್ ಮಾಡಿದ ಸಚಿವ ಡಿ.ಕೆ.ಶಿವಕುಮಾರ್….

ವೈದ್ಯಕೀಯ ಶಿಕ್ಷಣ ಸಚಿವರಾದ ಬಳಿಕ ಸಚಿವ ಡಿ.ಕೆ. ಶಿವಕುಮಾರ್​ ಮೊದಲ ಬಾರಿಗೆ ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಲ್ಲಿನ ಅವ್ಯಸ್ಥೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ರು. ಅಲ್ವದೇ ಆಸ್ಪತ್ರೆಗೆ ಲೇಟ್ ಆಗಿ ಬರುತ್ತಿದ್ದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ರು..

ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್​ ಇದೇ ಮೊದಲ ಬಾರಿಗೆ ಆಸ್ಪತ್ರಗೆ ದಿಡೀರ್ ಭೇಟಿ ನೀಡಿದ್ರು.. ಮೊದಲಿಗೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಆಸ್ಪತ್ರೆಯ ವಾರ್ಡ್ ಗೆ ತೆರಳಿ ರೋಗಿಗಳ ಹಾಗೂ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದ್ರು. ಇನ್ನು ಆಸ್ಪತ್ರೆಯ ಐಸಿಯು, ರಕ್ತ ಪರೀಕ್ಷೆ ಲ್ಯಾಬ್ ಗೂ ತೆರಳಿ ರೋಗಿಗಳಿಂದ ಕುಂದುಕೊರತೆ ಆಲಿಸಿದ್ರು.

ಸಂಶೋಧನಾ ಕೇಂದ್ರ ಹಾಗೂ ಹೊರರೋಗಿಗಳ ನೊಂದಣಿ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನೂ ಆಲಿಸಿದ್ರು.. ಅಲ್ಲಿಂದ ನೇರಾವಾಗಿ ಜನಸಂಜೀವಿನಿ ಔಷಧಿ ಕೇಂದ್ರಕ್ಕೆ ತೆರಳಿ ಸೂಕ್ತವಾಗಿ ಔಷಧಿ ಪೂರೈಸುವಂತೆ ಸೂಚಿಸಿದ್ರು. ನಂತರ ವಾರ್ಡ್​ಗೆ ಭೇಟಿ ನೀಡಿ ಖುದ್ದಾಗಿ ಅವರೇ ಬಿಪಿ ಪರೀಕ್ಷೆ ಮಾಡಿಸಿಕೊಂಡ್ರು.

ಇನ್ನು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಸಚಿವರು ಅಧಿಕಾರಿಗಳಿಗೆ ಖಡ್ಕ್​ ಎಚ್ಚರಿಕೆ ನೀಡಿದ್ರು. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ತಡವಾಗಿ ಕರ್ತವ್ಯಕ್ಕೆ ಬರುವ ಆರೋಪ ಕೇಳಿ ಬಂದಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ರು. ಅಲ್ಲದೇ ಬಯೋ ಮೆಟ್ರಿಕ್​ ಅಳವಡಿಕೆ ಮಾಡುವ ಬಗ್ಗೆ ನಿರ್ಧಾರ ಮಾಡಲಾಗುತ್ತೆ. ಜೊತೆ ಸಿಸಿಟಿವಿ ಕೂಡ ಅಳವಡಿಕೆ ಕುರಿತು ಚಿಂತನೆ ನಡೆಸಲಾಗುತ್ತೆ ಎಂದು ​​ಖಡಕ್ ಎಚ್ಚರಿಕೆ ನೀಡಿದ್ರು..

ಒಟ್ನಲ್ಲಿ ಮೊದಲ ಭಾರಿಗೆ ವೈದ್ಯಕೀಯ ಶಿಕ್ಷಣ ಸಚಿವರಾದ ಬಳಿಕ ನಗರದ ಆಸ್ಪತ್ರೆಗೆ ಸಚಿವ ಡಿಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜೊತೆ ಲೇಟ್​​ ಆಗಿ ಬರೋ ಅಧಿಕಾರಿಗಳಿಗೆ ಖಡ್ಕ್​ ಎಚ್ಚರಿಕೆ ಸಹಾ ನೀಡಿದ್ದಾರೆ..ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳತ್ತಾರೆ ಅನ್ನೋದನ್ನ ಕಾದು ನೋಡ ಬೇಕಿದೆ.

0

Leave a Reply

Your email address will not be published. Required fields are marked *