ಕೆಕೆಆರ್ ತಂಡದ ನೂತನ ಸಾರಥಿಯಾಗಿ ಆಯ್ಕೆಯಾಗಿರುವ ದಿನೇಶ್​ ಕಾರ್ತಿಕ್…

ಕೆಕೆಆರ್ ತಂಡದ ನೂತನ ಸಾರಥಿಯಾಗಿ ಆಯ್ಕೆಯಾಗಿರುವ ದಿನೇಶ್​ ಕಾರ್ತಿಕ್, ಒಬ್ಬ ಯಶಸ್ವಿ ನಾಯಕ ಶೈಲಿಯಲ್ಲೆ ತಂಡವನ್ನು ಮುನ್ನೆಡಸುವುದಾಗಿ ಹೇಳಿದ್ದಾರೆ….ಯಾರು ಅ ನಾಯಕ ಅನ್ನೊ ಕುತೂಹಲ ನಾ….ಐಪಿಎಲ್​ನಲ್ಲಿ ಬಾಲಿವುಡ್ ಬಾದ್​ಶ್ಹಾ ಶಾರೂಖ್​ ಖಾನ್ ಮಾಲೀಕತ್ವದ ಕೆಕೆಆರ್, ಗೌತಮ್​ ಗಂಭೀರ್​ರನ್ನು ತಂಡದಿಂದ ಕೈ ಬಿಟ್ಟ ನಂತರ, ಅಭಿಮಾನಿಗಳಲ್ಲಿ ತಂಡದ ನಾಯಕ ಯಾರಾಗ್ತಾರೆ ಅನ್ನೋ ಕುತೂಹಲ ಮೂಡಿತ್ತು. ಕೆಕೆಆರ್ ತಂಡದ ನಾಯಕನ ಆಯ್ಕೆ, ರೇಸ್​ನಲ್ಲಿ ಕ್ರಿಸ್​ ಲೀನ್, ರಾಬಿನ್ ಉತ್ತಪ್ಪ, ಆ್ಯಂಡ್ರೂ ರಸೆಲ್, ಸುನೀಲ್ ನರೈನ್, ಹೆಸರು ಮುಂಚೂಣಿಯಲ್ಲಿದ್ವು. ಆದ್ರೆ ಟೀಮ್ ಮ್ಯಾನೇಜ್​ಮೆಂಟ್ ಮಾತ್ರ ಲಿಸ್ಟ್​ನಲ್ಲೆ ಇಲ್ಲದ ದಿನೇಶ್​ ಕಾರ್ತಿಕ್​ರನ್ನ ತಂಡದ ನೂತನ ನಾಯಕನಾಗಿ ಆಯ್ಕೆ ಅಭಿಮಾನಿಗಳಿಗೆ ಭಾರಿ ಶಾಕ್​ ನೀಡ್ತು.

ಕೆಕೆಆರ್​ ನೂತನ ನಾಯಕ ದಿನೇಶ್ ಕಾರ್ತಿಕ್, ಐಪಿಎಲ್​ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್​ ವಿರಾಟ್ ಕೊಹ್ಲಿಯ ನಾಯಕತ್ವದ ಶೈಲಿಯಲ್ಲಿ ತಂಡವನ್ನ ಮುನ್ನೆಡೆಸುವುದಾಗಿ ಹೇಳಿದ್ದಾರೆ. ವಿರಾಟ್ ಕೊಹ್ಲಿ ನಿಜವಾದ ನಾಯಕ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ವಿರಾಟ್​, ವೈಯಕ್ತಿಕವಾಗಿಯೂ ಸಾಮರ್ಥ್ಯ ಮೆರೆಯುತ್ತಾರೆ ಎಂದು ದಿನೇಶ್​ ಕಾರ್ತಿಕ್, ಕೊಹ್ಲಿಯ ನಾಯಕತ್ವವನ್ನು ಹೊಗಳಿದ್ದಾರೆ. ದಿನೇಶ್ ಕಾರ್ತಿಕ್ ಕೆಕೆಆರ್ ತಂಡದ ನಾಲ್ಕನೇ ನಾಯಕರಾಗಿದ್ದಾರೆ. ಈ ಹಿಂದೆ ಸೌರವ್​ ಗಂಗೂಲಿ, ಬ್ರೆಂಡನ್​ ಮೆಕುಲಂ, ಗೌತಮ್​ ಗಂಭೀರ್​ ಕೆಕೆಆರ್ ತಂಡವನ್ನು ಮುನ್ನೆಡೆಸಿದ್ರು. ಅದ್ರಲ್ಲೂ ಗಂಭೀರ್​ ಕೆಕೆಆರ್​ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನೆಡೆಸಿದ್ರು. ಇವರ ನಾಯಕತ್ವದಲ್ಲಿ ಕೆಕೆಆರ್ ಎರಡು ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಅದೇನೆ ಇರಲಿ ಅನಿರೀಕ್ಷಿತವಾಗಿ ಕೆಕೆಆರ್​ ತಂಡವನ್ನು ಮುನ್ನೆಡೆಸುವ ಜವಬ್ದಾರಿ ಪಡೆದಿರು ದಿನೇಶ್​ ಕಾರ್ತಿಕ್, ತಾವೇ ಹೇಳಿದಂತೆ ವಿರಾಟ್ ಕೊಹ್ಲಿ ರೀತಿ ತಂಡಕ್ಕೆ ಯಶಸ್ಸು ದೊರಕಿಸಿಕೊಡ್ತಾರ ಅನ್ನೋದಕ್ಕೆ, ಇನ್ನು ಕೆಲ ದಿನಗಳಲ್ಲಿ ಉತ್ತರ ಸಿಗಲಿದೆ.

ಸ್ಫೋರ್ಟ್ಸ್​ ಬ್ಯೂರೊ ಸುದ್ದಿ ಟಿವಿ

0

Leave a Reply

Your email address will not be published. Required fields are marked *