ಉಡುಪಿಯಲ್ಲಿ ಅಪರೂಪದ ಅತಿಥಿ…! 

ಉಡುಪಿಯಲ್ಲಿ ಅಪರೂಪದ ನಾಗರ ಹಾವು ಪತ್ತೆಯಾಗಿದೆ. ಪರ್ಕಳದ ರಾಜೇಶ್ ಕೋಟ್ಯಾನ್ ಅವರ ಮನೆಯೊಳಗೆ ಈ ಹಾವು ಕಂಡುಬಂದಿದೆ. ಇಲಿ ತಿನ್ನಲು ಬಂದಿದ್ದ ಹಾವು, ಸೌದೆ ಶೇಖರಣೆಯ ಕೋಣೆಯೊಳಗೆ ಹೊಕ್ಕು ಅಲ್ಲಿನ ಇಲಿಗಳನ್ನು ಹಿಡಿದು ತಿನ್ನುವ ಧಾವಂತದಲ್ಲಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಉರಗ ತಜ್ಞ ಗುರುರಾಜ ಸನಿಲ್ ಹಾವು ಹಿಡಿದು ನೋಡಿದಾಗ ಅಚ್ಚರಿ ಕಾದಿತ್ತು. ಸುಮಾರು ಮೂವತ್ತು ವರ್ಷಗಳಿಂದ ಹಾವುಗಳ ಒಡನಾಟದಲ್ಲಿರುವ ಗುರುರಾಜ್ ಸನಿಲ್ ಈ ಥರದ ಹಾವು ಹಿಡಿದಿರಲಿಲ್ಲ. ಈ ರೀತಿಯ”ಹೃದಯಾಕೃತಿ” ಹೆಡೆಯ ಹಾವು ಅತ್ಯಂತ ಅಪರೂಪದ್ದು. ವಿ ಆಕಾರದ ಚಿಹ್ನೆ ತಲೆಯ ಹಿಂಭಾಗದಲ್ಲಿದೆ. ನಾಯಿ, ಬೆಕ್ಕು ಅಥವಾ ಇತರ ಪ್ರಾಣಿ ಪಕ್ಷಿಗಳಲ್ಲಿ ಬಗೆಬಗೆಯ ಶರೀರ ಮತ್ತು ಬಣ್ಣದ ವೈಶಿಷ್ಟ್ಯಗಳು ಕಂಡು ಬರುವಂತೆಯೇ ಹಾವುಗಳಲ್ಲೂ ಬರುವುದು ಸಾಮಾನ್ಯ ಅಂತಾರೆ ಉರಗ ತಜ್ಞ ಗುರುರಾಜ್.

0

Leave a Reply

Your email address will not be published. Required fields are marked *