ಪಟ್ಟದಿಂದ ಕೆಳಗಿಳಿದ ಧೋನಿ…!

ಮಹೇಂದ್ರ ಸಿಂಗ್ ಧೋನಿ… ವಿಶ್ವ ಕ್ರಿಕೆಟ್​ನ ಗ್ರೇಟ್ ಲೀಡರ್.. ಟೀಮ್ ಇಂಡಿಯಾದ ಶ್ರೇಷ್ಠ ನಾಯಕ, ಒಡನಾಡಿಗಳಿಗೆ ಕೂಲ್ ಕ್ಯಾಪ್ಟನ್.. ಅಭಿಮಾನಿಗಳಿಗೆ ಪಕ್ಕಾ ಎಂಟೈಟೇನರ್.. ಜಾಹೀರಾತು ಕಂಪೆನಿಗಳಿಗೆ ಸೂಪರ್ ಸ್ಟಾರ್.. ಎದುರಾಳಿ ತಂಡಗಳಿಗೆ ಗ್ಯಾಂಬ್ಲರ್..ಅಷ್ಟೇ ಅಲ್ಲ ಕ್ಲಾಸ್​ಗೂ ಸೈ, ಮಾಸ್​ ಗೂ ಜೈ ಅನ್ನುವ ರಾಂಚಿ ರಾಂಬೋ ವಿಶ್ವಕ್ರಿಕೆಟ್​ನ ಎವರ್ ಗ್ರೀನ್ ಹೀರೋ.

ಹೌದು, ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿರುವ ಎಂ..ಎಸ್. ಧೋನಿ ಈಗ ಏಕದಿನ ಮತ್ತು ಟಿ-ಟ್ವೆಂಟಿ ನಾಯಕತ್ವಕ್ಕೆ ಗುಡ್​ಬೈ ಹೇಳಿದ್ದಾರೆ. ಇದು ಕ್ರಿಕೆಟ್ ಜಗತ್ತಿಗೆ ಬ್ರೆಕಿಂಗ್ ಸುದ್ದಿ. ಆದ್ರೆ ಮಹೇಂದ್ರ ಸಿಂಗ್ ಧೋನಿಗೆ ಇದು ಜಸ್ಟ್ ಸುದ್ದಿಯಷ್ಟೇ..ಯಾಕಂದ್ರೆ ಧೋನಿ ತುಂಬಾನೇ ಲೆಕ್ಕಾಚಾರ ಮಾಡಿಕೊಂಡು, ಕೂಲ್ ಆಗಿಯೇ ವಿದಾಯದ ಸುದ್ದಿ ಪ್ರಕಟಿಸಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ತನ್ನ ಕ್ರಿಕೆಟ್ ಸ್ಟೈಲ್ನಲ್ಲೇ ವಿದಾಯದ ಸುದ್ದಿಯನ್ನು ತಿಳಿಸಿದ್ದಾರೆ. ಅಭಿಮಾನಿಗಳಿಗೆ ಕೊನೆಯ ಕ್ಷಣದ ತನಕ ಉಸಿರುಕಟ್ಟಿಕೊಂಡು ಪಂದ್ಯ ನೋಡುವಂತೆ ಮಾಡುತ್ತಿದ್ದ ಧೋನಿ, ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದಂತೆ ಇದೀಗ ಏಕದಿನ ಮತ್ತು ಟಿ-ಟ್ವೆಂಟಿ ನಾಯಕತ್ವ ತ್ಯಜಿಸುವ ಸುದ್ದಿಯನ್ನು ನಿಗೂಢವಾಗಿ ಹೇಳಿದ್ದಾರೆ.

ಹೊಸ ವರ್ಷದ ಆರಂಭದಲ್ಲೇ ನೀಡಿದ್ರು ಶಾಕ್.. !

ಏಕದಿನ ಮತ್ತು ಟಿ-ಟ್ವೆಂಟಿ ನಾಯಕತ್ವ ತ್ಯಜಿಸುವ ಮೂಲಕ ಧೋನಿ ಕ್ರಿಕೆಟ್ ಅಭಿಮಾನಿಗಳಿಗೆ ವರ್ಷದ ಆರಂಭದಲ್ಲೇ ಶಾಕ್ ನೀಡಿದ್ರು. ಒಂದು ರೀತಿಯಲ್ಲಿ ಇದು ನಿರೀಕ್ಷಿತವೇ ಆಗಿತ್ತು. ಆದ್ರೆ ಧೋನಿ ತನ್ನ ನಿರ್ಧಾರ ಪ್ರಕಟಿಸಿದ ರೀತಿ ಮಾತ್ರ
ಅನಿರೀಕ್ಷಿತ. ಯಾಕಂದ್ರೆ ಧೋನಿ ನಾಯಕತ್ವದ ಮೇಲೆ ಸಾಕಷ್ಟು ಒತ್ತಡಗಳಿದ್ದವು. ವಿರಾಟ್​ ಕೊಹ್ಲಿಗೆ ಮೂರು ಮಾದರಿಯ ಕ್ರಿಕೆಟ್​ನ ನಾಯಕತ್ವ ನೀಡಬೇಕು ಎಂಬ ಕೂಗು ಕೂಡ ಕೇಳಿಬರುತ್ತಿದ್ದವು. ಆದ್ರೆ ಧೋನಿ ನಾಯಕತ್ವವನ್ನು ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇರಲಿಲ್ಲ. ಕೊನೆಗೆ ಧೋನಿಯೇ ತನ್ನ ನಾಯಕತ್ವವನ್ನು ಪ್ರಶ್ನೆ ಮಾಡಿಕೊಂಡು ಅಂತಿಮವಾಗಿ ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್​ ನಾಯಕತ್ವ ತ್ಯಜಿಸುವ ನಿರ್ಧಾರ ತೆಗೆದುಕೊಂಡ್ರು.

ನಿಜ, 2017 ಜನವರಿ 4ರ ಬೆಳಗ್ಗೆಯೇ ಧೋನಿ ಅಂತಿಮ ನಿರ್ಧಾರಕ್ಕೆ ಬಂದಿದ್ರು. ತನ್ನ ಪತ್ನಿ ಮತ್ತು ಆಪ್ತರ ಜತೆ ಸಮಾಲೋಚನೆ ನಡೆಸಿ ಧೋನಿ ನಾಯಕತ್ವ ತ್ಯಜಿಸುವ ಗಟ್ಟಿ ನಿರ್ಧಾರ ತಗೊಂಡ್ರು. ಮಧ್ಯಾಹ್ನವೇ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್​.ಕೆ. ಪ್ರಸಾದ್ ತಿಳಿಸಿದಾಗ ಒಂದು ಕ್ಷಣ ಅಚ್ಚರಿಗೊಂಡಿದ್ರು. ನಾಗ್ಪುರದಲ್ಲಿ ಧೋನಿ ಮತ್ತು ಎಂ,ಎಸ್​.ಕೆ. ಪ್ರಸಾದ್ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ರು. ಕೊನೆಗೂ ಧೋನಿಯ ತೀರ್ಮಾನವನ್ನು ಎಂ.ಎಸ್​.ಕೆ. ಪ್ರಸಾದ್ ಕೂಡ ಒಪ್ಪಿಕೊಂಡ್ರು. ಯಾಕಂದ್ರೆ ಧೋನಿ ಯಾವುದನ್ನು ಯೋಚನೆ ಮಾಡದೇ ತೀರ್ಮಾನ ತೆಗೆದುಕೊಳ್ಳುವವರಲ್ಲ ಎಂಬುದು ಆಯ್ಕೆ ಸಮಿತಿಯ ಮುಖ್ಯಸ್ಥರಿಗೂ ಗೊತ್ತಿತ್ತು. ಕೊನೆಗೂ ರಾತ್ರಿ ವೇಳೆ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದಂತೆ ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್​ನ ನಾಯಕತ್ವ ತ್ಯಜಿಸುವ ನಿರ್ಧಾರ ತೆಗೆದುಕೊಂಡ್ರು.

ನಾಯಕನಾಗಿ ಎಂಎಸ್​ಡಿ ಸಾಧನೆ
2007ರಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಗೆಲುವು
2011ರಲ್ಲಿ ವಿಶ್ವಕಪ್ ಕ್ರಿಕೆಟ್ ಗೆಲುವು
2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಚಾಂಪಿಯನ್

ನಾಯಕನಾಗಿ ಧೋನಿ ಸಾಧನೆ
ಒಟ್ಟು ಪಂದ್ಯಗಳಿಗೆ ನಾಯಕತ್ವ -331 ಪಂದ್ಯಗಳು – ಗೆಲುವು -178 – ಸೋಲು – 120 – ಡ್ರಾ-20- ರದ್ದು-1
ಟೆಸ್ಟ್​ ಪಂದ್ಯಗಳಲ್ಲಿ ನಾಯಕತ್ವ – 60- ಪಂದ್ಯಗಳು – ಗೆಲುವು – 27 – ಸೋಲು 18 ಡ್ರಾ- 15
ಏಕದಿನ ಪಂದ್ಯಗಳಿಗೆ ನಾಯಕತ್ವ -199 – ಪಂದ್ಯಗಳು ಗೆಲುವು 110- ಸೋಲು -74- ಟೈ-4
ಟಿ-ಟ್ವೆಂಟಿ ಪಂದ್ಯಗಳಿಗೆ ನಾಯಕತ್ವ -72 – ಪಂದ್ಯಗಳು ಗೆಲುವು -41- ಸೋಲು-28- ಟೈ-1- ರದ್ದು-1

0

Leave a Reply

Your email address will not be published. Required fields are marked *