ಚುಟುಕು ಕ್ರಿಕೆಟ್​​ನಲ್ಲಿ ಧೋನಿ ಹವಾ ಜೋರು

ಇನ್ನು ನಿನ್ನೆಯ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮನಮೋಹಕ ಪ್ರದರ್ಶನ ನೀಡಿದ ಇಬ್ಬರು ಆಟಗಾರರು ಸಾಧನೆ ಮಾಡಿದ್ದಾರೆ. ಭರ್ಜರಿ ಫಾರ್ಮ್​​​ನಲ್ಲಿರುವ ಕೂಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಮೂರನೇ ಪಂದ್ಯದಲ್ಲಿ ಶೈನ್ ಆಗಿದ್ದಾರೆ.ಇಂಗ್ಲೆಂಡ್​ ವಿರುದ್ಧ ವಿಕೆಟ್​​ ಹಿಂದೆ ಮಾಹೇಂದ್ರ ಸಿಂಗ್ ಧೋನಿ ಚಾಣಕ್ಯತನ ಮತ್ತೊಮ್ಮೆ ಬಯಲಾಗಿದೆ. ಈ ಸರಣಿಯಲ್ಲಿ ದಾಖಲೆಗಳನ್ನು ಬರೆದಿರುವ ಕೂಲ್​​ ಕ್ಯಾಪ್ಟನ್​​ ಮತ್ತೊಂದು ಸಾಧನೆಗೆ ತಮ್ಮ ಹೆಸರು ನಮೂದಿಸಿದ್ರು.

ಮ್ಯಾಂಚಿಸ್ಟರ್​ ಅಂಗಳದಲ್ಲಿ ನಡೆದಿದ್ದ ಮೊದಲ ಟಿ-20 ಪಂದ್ಯದಲ್ಲಿ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇತಿಹಾಸ ಬರೆದಿದ್ರು. ಚುಟುಕು ಕ್ರಿಕೆಟ್​ನಲ್ಲಿ ಪಾಕಿಸ್ತಾನ ವಿಕೆಟ್​ ಕೀಪರ್​ ಸಾಧನೆ ಅಳಿಸಿದ ಮಾಹಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಧೋನಿ ವಿಶ್ವ ದಾಖಲೆ ನಿರ್ಮಿಸಿದ್ರು.

ಇನ್ನು ಬ್ರಿಸ್ಟಲ್​ ಅಂಗಳದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ, ಭರ್ಜರಿ ಪ್ರದರ್ಶನ ನೀಡಿದ ಧೋನಿ ಮತ್ತೊಂದು ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಮೂರನೇ ಪಂದ್ಯದಲ್ಲಿ ಧೋನಿ ವಿಕೆಟ್​ ಹಿಂದೆ ಐದು ಕ್ಯಾಚ್​ ಪಡೆದು ಬೀಗಿದ್ರು. ಈ ಮೂಲಕ ಚುಟುಕು ಕ್ರಿಕೆಟ್​​ನ, ಒಂದೇ ಇನ್ನಿಂಗ್ಸ್​​ನಲ್ಲಿ 5 ವಿಕೆಟ್​ ಪಡೆದ ಮೊದಲ ವಿಕೆಟ್​ ಕೀಪರ್​ ಎಂಬ ಸಾಧನೆ ಮಾಡಿದ್ರು. ಇನ್ನು ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 50ಕ್ಕೂ ಹೆಚ್ಚು ಕ್ಯಾಚ್ ಪಡೆದ ಮೊದಲ ವಿಕೆಟ್​ ಕೀಪರ್​ ಎಂಬ ಖ್ಯಾತಿ ತಮ್ಮದಾಗಿಸಿಕೊಂಡ್ರು.

ಇನ್ನು ಧೋನಿ ಕೋನೆಯ ಓವರ್​​ನ ಲಾಸ್ಟ್​ ಎಸೆತದಲ್ಲಿ ಧೋನಿ ಚಮತ್ಕಾರವನ್ನೇ ಮಾಡಿದ್ರು. ಬಾಂಗ್ಲಾ ವಿರುದ್ಧ 2016ರಲ್ಲಿ ನಡೆದಿದ್ದ ಚುಟುಕು ಪಂದ್ಯವನ್ನು ನೆನಪಿಸಿದ ಧೋನಿ, ಅದ್ರಂತೆ ನಿನ್ನೆ ಸಹ ಮ್ಯಾಜಿಕ್ ಮಾಡಿದ್ರು. ಧೋನಿ ಇಂಗ್ಲೆಂಡ್​​ ಕೊನೆಯ ಎಸೆತದಲ್ಲಿ ಸಿಂಗಲ್​​ ರನ್​​ ತೆಗೆದುಕೊಳ್ಳುತ್ತದೆ ಎಂದು ಮೊದಲೇ ಊಹೀಸಿ, ಬಲಗೈನ ಗೌಸ್​​ ಬಿಚ್ಚಿದ್ದರು. ಇದ್ರಿಂದ ಚೆಂಡು ಕೈ ಸೇರುತ್ತಿದ್ದಂತೆ ವಿಕೆಟ್​​ಗೆ ಥ್ರೋ ಮಾಡುವ ಇರಾದೆ ಟೀಮ್​ ಇಂಡಿಯಾದ ಮಾಜಿ ನಾಯಕನದ್ದಾಗಿತ್ತು. ಅದ್ರಂತೆ ಧೋನಿ ಕೊನೆಯ ಎಸೆತದಲ್ಲಿ ತಮ್ಮ ಚಾಣಕ್ಷ ಬುದ್ಧಿಯ ಪ್ರದರ್ಶನ ಮಾಡಿ, ರನೌಟ್​ ಮಾಡುವಲ್ಲಿ ಸಫಲರಾದ್ರು.

ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಕ್ಲಾಸ್ ಬೌಲಿಂಗ್ ಪ್ರದರ್ಶನ ನೀಡಿದ್ರು. ರನ್​​ಗಳನ್ನು ತಡೆಯುವಲ್ಲಿ ವಿಫಲರಾದ ಹಾರ್ದಿಕ್​​, ವಿಕೆಟ್​ ಬೇಟೆ ನಡೆಸಿದ್ರು.
ಹಾರ್ದಿಕ್​ ಪಾಂಡ್ಯ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕಿತರಿಗೆ ಖೆಡ್ಡಾ ತೋಡುವಲ್ಲಿ ಸಫಲರಾದ್ರು. ಅಲೆಕ್ಸ್​ ಹೇಲ್ಸ್​, ಇಯಾನ್​ ಮಾರ್ಗನ್​​, ಬೆನ್​ ಸ್ಟೋಕ್ಸ್​​, ಜಾನಿ ಬೇರ್​​ಸ್ಟೋರಿಗೆ ಖೆಡ್ಡಾ ತೋಡಿದ ಹಾರ್ದಿಕ್​ ಅಬ್ಬರಿಸಿದ್ರು. ಈ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಹಾರ್ದಿಕ್ ಜೀವನ ಶ್ರೇಷ್ಠ ಸಾಧನೆ ಮಾಡಿದ್ರು.

0

Leave a Reply

Your email address will not be published. Required fields are marked *