ಮಗಳಿಂದ ಪರಿಪೂರ್ಣ ವ್ಯಕ್ತಿಯಾದ್ರು ಧೋನಿ

ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಬದಲಾಗಿದ್ದಾರಂತೆ. ಆದ್ರೆ ಕ್ರಿಕೆಟರ್​ ಅಗಿ ಅಲ್ಲ. ಒಬ್ಬ ವ್ಯಕ್ತಿಯಾಗಿ. ಮಾಹಿ ಜೀವನದಲ್ಲಿ ಅವರು ಬಂದ ಮೇಲೆ ಹೊಸ ಚೈತ್ಯನ್ನ ಬಂದಿದೆ. ಅವರ ಜೊತೆ ಕಳೆಯೋದು ಅಂದ್ರ ಈ ಕೂಲ್​ ಕ್ಯಾಪ್ಟನ್​ಗೆ ತುಂಬಾ ಇಷ್ಟ.ಅಷ್ಟಕ್ಕೂ ಧೋನಿ ಯಾರಿಂದ ಬದಲಾಗಿದ್ದಾರೆ. ಏನ್​​ ಕಥೆ ಅನ್ನೋ ಕುತೂಹಲ ನಾ…ಈ ಸ್ಟೋರಿ ನೋಡಿ

ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ನಾಯಕ ಹಾಗೂ ಆಟಗಾರ, ತನ್ನೆದುರ ಬೆಟ್ಟದಂತಹ ಗುರಿ ಇದ್ದರೂ ಧೋನಿ ಎಂದಿಗೂ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಪಂದ್ಯ ತಮ್ಮ ಕೈ ಜಾರುತ್ತಿದ್ದು ಶಾಂತಚಿತ್ತದಿಂದಲೆ ಎಲ್ಲವನ್ನೂ ನಿಭಾಯಿಸಿ ಗೆಲುವಿನ ಹಳಿಗೆ ತರುವ ಚಾಣಾಕ್ಷತನ ಮಾಹಿಗೆ ಮಾತ್ರ ಒಲಿದಿದೆ ಅಂದ್ರೆ ತಪ್ಪಿಲ್ಲ. ಅಲ್ಲದೆ ಕೊನೆಯವರೆಗೂ ಕ್ರೀಸ್​ನಲ್ಲಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವ ಧೋನಿ, ಗ್ರೇಟ್ ಫಿನಿಶರ್ ಕೂಡ ಹೌದು.

ಧೋನಿಗೆ ಜೀವ ಎಂಬ ಮುದ್ದಾದ ಮಗಳು ಇರೋದು ಗೊತ್ತಿರೊ ವಿಚಾರ. ಈಗ ಇದೆ ಜೀವ ಧೋನಿಯ ಜೀವನವನ್ನೇ ಸಂಪೂರ್ಣವಾಗಿ ಬದಲಾಯಿಸಿದ್ದಾಳೆ ಎಂದು ಧೋನಿ ಹೇಳಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಧೋನಿ ತಮ್ಮ ಮಗಳ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ.

ತಂದೆ ಆದ ನಂತರ ಕ್ರಿಕೆಟರ್​ ಆಗಿ ನಾನು ಬದಲಾಗಿದೆನೊ ಇಲ್ವೊ ಗೊತ್ತಿಲ್ಲ ಆದ್ರೆ. ಒಬ್ಬ ವ್ಯಕ್ತಿಯಾಗಿ ನನ್ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಯಾಕೆಂದ್ರೆ ಮಗಳ ಜೊತೆ ತಂದೆಯ ಭಾಂಧವ್ಯ ಹೆಚ್ಚು ಸಂತೋಷ ನೀಡುತ್ತದೆ. ಆದ್ರೆ ಜೀವಾ ಹುಟ್ಟಿದಾಗ ಅವಳ ಜೊತೆ ಇರಲಿಲ್ಲ. ನಂತರವೂ ಬಿಡುವಿಲ್ಲ ಕ್ರಿಕೆಟ್​ನಿಂದಾಗಿ ಅವಳಿಗೆ ಸಮಯ ನೀಡಲಾಗಲಿಲ್ಲ ಎಂದು ಧೋನಿ ಮಗಳೊಂದಿಗೆ ಮಿಸ್​ ಮಾಡಿಕೊಂಡ ದಿನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಜೀವಾ ಊಟ ಮಾಡದೇ ಹಠ ಹಿಡಿದಾಗ ಅಪ್ಪ ಬಂದು ಊಟಮಾಡಿಸುತ್ತಾರೆ. ಊಟ ಮಾಡದಿದ್ದರೆ ಅಪ್ಪ ಹೇಳ್ತಿನಿ ಎಂದು ಮನೆಯವರು ಹೆದರಿಸಿ ಊಟ ಮಾಡಿಸುತ್ತಿದ್ರು. ಇದರಿಂದ ಜೀವಾ ಪ್ರಾರಂಭದಲ್ಲಿ ನನ್ನ ಕಂಡ್ರೆ ಭಯ ಪಡುತ್ತಿದ್ದಳು. ಈ ಬಾರಿಯ ಐಪಿಎಲ್​ನಲ್ಲಿ ಜೀವಾ ಜೊತೆ ಹೆಚ್ಚಿನ ಸಮಯ ಕಳೆದೆ. ಹಲವು ಬಾರಿ ಇತರೆ ಆಟಗಾರರ ಮಕ್ಕಳೊಂದಿಗೆ ಖುಷಿಯಾಗಿ ಆಟವಾಡುತ್ತಿದ್ದಳು. ಜೀವಾ ಆಟವಾಡುವುದು. ಅವಳ ತುಂಟ ನೋಡೋದೆ ಆನಂದ ಎಂದು ಧೋನಿ ತಮ್ಮ ಮಗಳ ಮೇಲಿನ ಪ್ರೀತಿಯನ್ನ ಹೊರಹಾಕಿದ್ದಾರೆ.

ಐಪಿಎಲ್​ ಸಂದರ್ಭದಲ್ಲಿ ಧೋನಿ ಹಾಗೂ ಜೀವ ನಡುವಿನ ಮಧುರ ಕ್ಷಣಗಳು ತಂದೆ ಮಗಳ ಪ್ರೀತಿಯನ್ನು ಸಾರತ್ತಿದ್ದವು. ಧೋನಿ ಕೂಡ ಮಗಳ ಜೊತೆಗಿನ ಆಟ, ತುಂಟಾಟಗಳನ್ನು ತಮ್ಮ ಇನ್ಸ್​ಟ್ರಾಗ್ರಾಮ್​ನಲ್ಲಿ ಪೋಸ್ಟ್​ ಮಾಡುವುದರ ಮೂಲಕ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದರು.

0

Leave a Reply

Your email address will not be published. Required fields are marked *