ಹ್ಯಾಪಿ ಬರ್ತ್‌ಡೇ ಗೌಡ್ರೆ..

ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ ಇಂದು 86ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪತ್ನಿ ಚನ್ನಮ್ಮ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ್ರು. ಇನ್ನು ದೇವೇಗೌಡರ ಹುಟ್ಟು ಹಬ್ಬ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಶುಭಕೋರಿದ್ದಾರೆ. ಸಿಎಂ ಟ್ವೀಟ್ ಮಾಡಿ ವಿರೋಧಪಕ್ಷದ ನಾಯಕರಾಗಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿರುವ ಕೀರ್ತಿ ನಿಮ್ಮದು. ನಾಡಿನ ನೆಲ,ಜಲ,ಭಾಷೆ ಬಗೆಗಿನ ನಿಮ್ಮ ಬದ್ಧತೆ ನಮಗೆಲ್ಲರಿಗೂ ಸ್ಪೂರ್ತಿದಾಯಕ. ನೂರು ಕಾಲ ಆಯುಷ್ಯ- ಆರೋಗ್ಯ ನಿಮ್ಮದಾಗಲಿ ಎಂದು ಟ್ವಿಟ್ ಮಾಡಿದ್ದಾರೆ.

0

Leave a Reply

Your email address will not be published. Required fields are marked *