ಆಧಾರ್ ಕಾರ್ಡ್ ಕೇಳಿದ ಆಸ್ಪತ್ರೆ ಸಿಬ್ಬಂದಿ: ಆಸ್ಪತ್ರೆ ಗೇಟ್​ ಬಳಿ ಪ್ರಸವ

ಲಖ್ನೋ: ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಇಲ್ಲದ ಕಾರಣದಿಂದಾಗಿ ಚಿಕಿತ್ಸೆ ನಿರಾಕರಿಸಲ್ಪಟ್ಟ ಮಹಿಳೆಯೊಬ್ಬರು ಆಸ್ಪತ್ರೆಯ ದ್ವಾರದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರಪ್ರದೇಶದ ಶಾಹ್​ಗಂಜ್​​ನಲ್ಲಿ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳೆಯ ಪತಿ, ನಾವು ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ನನ್ನ ಪತ್ನಿಯನ್ನು ದಾಖಲಿಸಿಕೊಳ್ಳಲು ಕೆಲವು ದಾಖಲೆಗಳನ್ನು ಕೇಳಿದರು. ನಮ್ಮ ಬಳಿ ದಾಖಲೆ ಇಲ್ಲದ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದರು. ನಾವು ಹೊರಬಂದ ಸಂದರ್ಭದಲ್ಲಿ ನನ್ನ ಹೆಂಡತಿ ಮಗುವಿಗೆ ಜನ್ಮ ನೀಡಿದಳು ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಆಸ್ಪತ್ರೆಯ ವೈದ್ಯ, ಇನ್ನೊಂದು ಆಸ್ಪತ್ರೆಗೆ ತೆರಳುವುದಾಗಿ ಗರ್ಭಿಣಿ ಮಹಿಳೆ ಹೇಳಿದ್ದರು. ಆದರೆ, ಆಸ್ಪತ್ರೆಯ ದ್ವಾರದ ಬಳಿ ಬಂದ ಸಂದರ್ಭದಲ್ಲಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಆಸ್ಪತ್ರೆಯೊಳಗೆ ಕರೆದೊಯ್ಯಲಾಯ್ತು. ಆಗ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಗರ್ಭಿಣಿ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.

0

Leave a Reply

Your email address will not be published. Required fields are marked *