ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಮೈಸೂರು: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತಳನ್ನು ಕೊಳ್ಳೇಗಾಲ ತಾಲೂಕಿನ ಶಂಕರಾಪುರದ ಲಿಂಗರಾಜು ಎಂಬುವವರ ಮಗಳು ಸುನಂದಾ(25) ಎಂದು ಗುರುತಿಸಲಾಗಿದ್ದು, ಈಕೆ ಹೆಬ್ಬಾಳಿನಲ್ಲಿರುವ ಸ್ಪೈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮಹದೇಶ್ವರ ಬಡಾವಣೆಯಲ್ಲಿರುವ ಪಿಜಿಯಲ್ಲಿ ವಾಸವಾಗಿದ್ದು, ನಿನ್ನೆ ರಾತ್ರಿ ಊಟ ಮಾಡಿ ರೂಮಿಗೆ ತೆರಳಿದವಳು ಬೆಳಿಗ್ಗೆ ಎಷ್ಟು ಹೊತ್ತಾದರೂ ಹೊರಗೆ ಬಾರದೇ ಇರುವುದರಿಂದ ಅನುಮಾನಗೊಂಡು ಹೋಗಿ ನೋಡಲಾಗಿದೆ ಆಗ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ತಕ್ಷಣ ವಿಜಯನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಆಕೆ ಬರೆದ ಡೆತ್ ನೋಟ್ ಸಿಕ್ಕಿದೆ. ಡೆತ್ ನೋಟ್ ನಲ್ಲಿ ಬೇಬಿ ಐ ಲವ್ ಯು, ಐ ಮಿಸ್ ಯು ಎಂದು ಬರೆದಿದ್ದು, ಪ್ರೇಮ ವೈಫಲ್ಯವೇನೋ ಎಂಬ ಶಂಕೆ ಮೂಡಿದೆ. ತಂದೆಗೆ ಆರೋಗ್ಯ ಸರಿಯಿಲ್ಲದ ಕಾರಣ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆದಿದ್ದಾಳೆ ಎನ್ನಲಾಗಿದೆ. ಪೊಲೀಸರು ಆಕೆಯ ಮೃತದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದು ತನಿಖೆ ನಡೆಯುತ್ತಿದೆ.

0

Leave a Reply

Your email address will not be published. Required fields are marked *